April 26, 2024

Bhavana Tv

Its Your Channel

ನೂತನ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾಗಿ ಡಿ ಟಿ ಶ್ರೀನಿವಾಸ್ ನೇಮಕ

ನಾಗಮಂಗಲ: ಅಂತು ಇಂತು ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮತ್ತು ಕಾರ್ಯಕರ್ತರ ಕೂಗಿಗೆ ಕಿವಿ ಕೊಟ್ಟಿರುವ ಪಕ್ಷದ ವರಿಷ್ಠರು ನಾಗಮಂಗಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಡಿ ಟಿ ಶ್ರೀನಿವಾಸ್ ರನ್ನು ನೇಮಕ ಮಾಡಿದ್ದು ಮಂಡ್ಯ ಜಿಲ್ಲಾಧ್ಯಕ್ಷರಿಂದ ಪಕ್ಷದ ಬಾವುಟ ಪಡೆಯುವ ಮೂಲಕ ಅಧಿಕಾರ ಸ್ವೀಕರಿಸಿದ್ದಾರೆ.

ನಾಗಮಂಗಲ ಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸುರೇಶ್ ಗೌಡ, ಎಂಎಲ್ಸಿ ಅಪ್ಪಾಜಿ ಗೌಡ, ಸಮ್ಮುಖದಲ್ಲಿ ಮಂಡ್ಯ ಜಿಲ್ಲಾಧ್ಯಕ್ಷ ಡಿ ರಮೇಶ್ ಅಧಿಕಾರಿ ಹಸ್ತಾಂತರ ಮಾಡಿ ತರಾತುರಿಯಲ್ಲಿ ವೇದಿಕೆಯಿಂದ ನಿರ್ಗಮಿಸಿದರು.ಈ ವೇಳೆ ಖಾಲಿ ಖಾಲಿ ಕುರ್ಚಿಗಳ ಪ್ರದರ್ಶನ ಎಣಿಕೆಗೆ ಮಾತ್ರದ ಜನರ ಉಪಸ್ಥಿತಿಯಲ್ಲಿ ಸಮಾರಂಭ ಬಣಗುಡುತ್ತಿದ್ದು ಕಂಡುಬAತು.
ಶಾಸಕರು ಮತ್ತು ಅವರ ಬೆಂಬಲಿಗರು ಖಾಲಿ ಕುರ್ಚಿಯಲ್ಲಿ ಜನರ ಕರೆದು ಕೂರಿಸಲು ನಡೆಸಿದ ಹಿರಿಸು ಮುರಿಸಿನ ಪ್ರಯತ್ನಗಳು ನಡೆದವು.

ಆನಂತರ ಸಮಾರಂಭವನ್ನು ಉದ್ಘಾಟಿಸಿದ ಶಾಸಕ ಸುರೇಶ್ ಗೌಡ ನೂತನ ಅಧ್ಯಕ್ಷ ಡಿ ಟಿ ಶ್ರೀನಿವಾಸ್ ರನ್ನು ಅಭಿನಂದಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕರು ನಾಗಮಂಗಲದಲ್ಲಿ ನಮ್ಮ ಶ್ರಮದ ಅಭಿವೃದ್ಧಿ ಕೆಲಸವನ್ನು ತಮ್ಮೆದೆಂದು ಹೇಳಿಕೊಳ್ಳುವ ಮಹಾನ್ ಸುಳ್ಳುಗಾರರಿದ್ದಾರೆ ಎಂದು ತಮ್ಮ ಎದುರಾಳಿ ಮಾಜಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ ಅವರು ನಮ್ಮ ಕಾರ್ಯಕರ್ತರು ಜನತೆಗೆ ಸತ್ಯ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕೆಂದು ಕರೆನೀಡಿದರು.

ಅಧಿಕಾರಿ ಸ್ವೀಕರಿಸಿ ಮಾತನಾಡಿದ ನೂತನ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಿಟಿ ಶ್ರೀನಿವಾಸ್ ನಾನು ೨೦ ವರ್ಷ ಹಿಂದೆ ಪಕ್ಷದ ಅಧ್ಯಕ್ಷ ನಾಗಬೇಕಿತ್ತು ಆದರೂ ಯಾವುದೆ ದುಡುಕಿನ ನಿರ್ಧಾರ ಮಾಡಿದೆ ತಾಳ್ಮೆ ವಹಿಸಿದ ಕಾರಣ ಇಂದು ಅಧಿಕಾರ ದಕ್ಕಿದ್ದು ಪ್ರತಿಯೋಬ್ಬ ಕಾರ್ಯಕರ್ತರು ಪಕ್ಷ ಸಂಘಟನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಎಂಎಲ್ಸಿ ಅಪ್ಪಾಜಿಗೌಡ ವಿರೋಧ ಪಕ್ಷಗಳ ವಿರೋಧದ ನಡುವೆಯೂ ಕ್ಷೇತ್ರ ಪುನರ್ ವಿಂಗಡಣೆಯ ಪಂಚಾಯತ್ ರಾಜ್ ಕಾಯ್ದೆಗೆ ಸರ್ಕಾರಿ ತಿದ್ದುಪಡಿ ತಂದಿದ್ದು ಶೀಘ್ರದಲ್ಲೇ ಎದುರಾಗುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತ್ ಚುನಾವಣೆ ಸಜ್ಜಾಗುವಂತೆ ಕರೆನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆಟಿ ಶ್ರೀಕಂಠೇಗೌಡ, ಪುರಸಭೆ ಸದಸ್ಯ ಚನ್ನಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಡೇನಹಳ್ಳಿ ಉಮೇಶ್, ಜೆಡಿಎಸ್ ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಕಂಚಿನ ಕಟೆ ಮೂರ್ತಿ, ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ ಕೃಷ್ಣಪ್ಪ, ಮುಖಂಡರಾದ ನಾಗೇಶ್ ತೆಂಗಿನ ಭಾಗ ನಾಗರಾಜ್ ಇತರರು ಇದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: