May 3, 2024

Bhavana Tv

Its Your Channel

ಎಲ್ಲಾ ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಿಸುವುದೇ ನನ್ನ ಗುರಿ- ಮಂಡ್ಯ ಕ.ಸಾ.ಪ ಜಿಲ್ಲಾಧ್ಯಕ್ಷ ರವಿಕುಮಾರ್

ನಾಗಮಂಗಲ:- ಮಂಡ್ಯ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಗೆ ಎರಡನೇ ಅವಧಿಗೆ ಚುನಾಯಿತರಾಗಿರುವ ಸಿ.ಕೆ. ರವಿಕುಮಾರ್ ರವರಿಗೆ ನಾಗಮಂಗಲ ಸಾಹಿತ್ಯ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಯಿತು

ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವಿಕುಮಾರ್ ಮಾತನಾಡಿ ಮಂಡ್ಯ ಜಿಲ್ಲೆಯ ಎಳು ತಾಲೂಕುಗಳಲ್ಲಿ ಗ್ರಾಮ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಬೇಕೆಂಬುದು ನನ್ನ ಬಹುದಿನದ ಕನಸಾಗಿದೆ
ಸಾಹಿತ್ಯ ಕ್ಷೇತ್ರವನ್ನು ಸುಭದ್ರ ಬುನಾದಿ ಹಾಕುವ ಉದ್ದೇಶದಿಂದ ಪ್ರತಿ ತಾಲೂಕುವಾರು ಕೇಂದ್ರ ಭಾಗದಲ್ಲಿ ಒಂದು ಕನ್ನಡ ಭವನವನ್ನು ನಿರ್ಮಿಸಲು ಎಲ್ಲಾ ಸಾಹಿತ್ಯ ಅಭಿಮಾನಿಗಳು ಸಹಕರಿಸಿ ಕನ್ನಡ ಭವನ ನಿರ್ಮಿಸಲು ಮುಂದಾಗಬೇಕೆAದರು ಕನ್ನಡ ಸಾಹಿತ್ಯ ಪರಿಷತ್ ಯಾರ ಸ್ವತ್ತಲ್ಲ ಕನ್ನಡನಾಡು ನುಡಿ ಜಲದ ಬಗ್ಗೆ ಹೋರಾಡಲು ಕಂಕಣಬದ್ಧರಾಗಿ ದುಡಿಯಬೇಕಾಗಿದೆ ಕನ್ನಡ ಅಭಿಮಾನವನ್ನು ಪ್ರತಿಯೊಬ್ಬರು ಹೊಂದಬೇಕು ನಾಡು-ನುಡಿಗೆ ಸಮಸ್ಯೆಗಳು ಬಂದಾಗ ಹೋರಾಡಲು ಮುಂದಾಗಬೇಕೆAದರು

ನಾಗಮAಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಖರಡ್ಯ ಬಸವೇಗೌಡ ಮಾತನಾಡಿ ಮಂಡ್ಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಎರಡನೇ ಅವಧಿಗೆ ಆಯ್ಕೆಯಾಗಿರುವ ರವಿಕುಮಾರ್ ಅವರು ಸಾಹಿತ್ಯದ ಬಗ್ಗೆ ಅಪಾರ ಜ್ಞಾನವುಳ್ಳ ರಾಗಿದ್ದು ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ ಜಿಲ್ಲೆಯಲ್ಲಿ ಏಳು ತಾಲೂಕಿನ ತಾಲೂಕುವಾರು ಅಧ್ಯಕ್ಷ ಗಳನ್ನು ಜೊತೆಗೂಡಿ ರಾಜ್ಯಮಟ್ಟದಲ್ಲಿ ಗುರುತಿಸುವಂತಹ ಸಾಹಿತ್ಯ ಕ್ಷೇತ್ರದ ಅತಿ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ ನೂತನ ಅಧ್ಯಕ್ಷರು ಮುಂದಿನ ದಿನದಲ್ಲಿ ಸಮರ್ಥವಾಗಿ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ ಎಂದು ನುಡಿದರು

ಮತ್ತೊಬ್ಬ ಗಣ್ಯ ಭಾಸ್ಕರ್ ಭಟ್ ಮಾತನಾಡಿ ಕನ್ನಡವನ್ನು ನಾವು ಹೊಸದಾಗಿ ಬೆಳೆಸಬೇಕಾದ ಅಗತ್ಯವಿಲ್ಲ ನಮ್ಮ ಹಿರಿಯರು ಈಗಾಗಲೇ ಕನ್ನಡವನ್ನು ಮೇಲೆತ್ತರಕ್ಕೆ ಬೆಳೆಸಿದ್ದಾರೆ ಆದ್ದರಿಂದ ಹಿರಿಯರಿಗೆ ಗೌರವ ಸೂಚಿಸಿ ಕೃತಜ್ಞತೆ ಭಾವದಿಂದ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕೆಂದರು

ವೇದಿಕೆಯಲ್ಲಿ ನೂತನ ಜಿಲ್ಲಾಧ್ಯಕ್ಷರಾದ ಚಾಮಲಾಪುರ ರವಿಕುಮಾರ್ ರವರಿಗೆ ನಾಗಮಂಗಲ ಕನ್ನಡ ಸಾಹಿತ್ಯ ಅಭಿಮಾನಿಗಳು. ಲಯನ್ಸ್ ಸಂಸ್ಥೆ. ಮಹಿಳಾ ಸಾಹಿತ್ಯ ಅಭಿಮಾನಿಗಳು. ಅಭಿನಂದಿಸಿ ಗೌರವಿಸಿದರು

ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಅಧ್ಯಕ್ಷರಾದ ನಂದಕಿಶೋರ್. ನಂಜುAಡೇಗೌಡ. ಕೆಂಪೇಗೌಡ. ಸುಗ್ಗಿ ಶಂಕರ. ವೈ.ಡಿ.ಶಿವಣ್ಣ. ನಾ.ಸು. ನಾಗೇಶ್. ಪರಮೇಶ್. ಗೀತಾ ದಾಸೇಗೌಡ. ವಸಂತ ಶ್ರೀಕಂಠೇಗೌಡ. ಗಂಗವಾಡಿ ಪುಟ್ಟಸ್ವಾಮಿ .ಕನ್ನಡ ಸಾಹಿತ್ಯ ಅಭಿಮಾನಿಗಳು ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: