April 27, 2024

Bhavana Tv

Its Your Channel

ಕೊಚ್ಚಿಹೋದ ಕೆರೆ ಏರಿಯ ಹಿಂಬದಿಯ ರಸ್ತೆ ಸರಿಪಡಿಸದಿದ್ದರೆ ಬುಧವಾರ ಪ್ರತಿಭಟನೆ

ನಾಗಮಂಗಲ: ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಹೊನ್ನಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಹೆಚ್.ಕ್ಯಾತನಹಳ್ಳಿ ಗ್ರಾಮದ ಕೆರೆಯು ದಿನಾಂಕ ೦೫-೧೨-೨೦೨೧ ರಂದು ನಿರಂತರ ಸುರಿದ ಮಳೆಯಿಂದಾಗಿ ಕೆರೆ ಏರಿ ಒಡೆದು ಜಮೀನುಗಳಿಗೆ ನೀರು ನುಗ್ಗಿ ಜಮೀನಲ್ಲಿದ್ದ ಅಪಾರ ಪ್ರಮಾಣ ಬೆಳೆಯು ಸಂಪೂರ್ಣ ಹಾನಿಯಾಗಿತ್ತು.
ಈ ಸಂಬoಧ ಸ್ಥಳಿಯ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಹಾಗೂ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ರವರು ಗ್ರಾಮಕ್ಕೆ ಭೇಟಿ ನೀಡಿ ಬೆಳೆ ಹಾನಿ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ಕೊಡಿಸಿಕೊಡುವುದಾಗಿ ಭರವಸೆ ನೀಡಿದರು ಒಡೆದುಹೋದ ಕೆರೆಯ ಹಿಂಬದಿಯ ರಸ್ತೆಯನ್ನು ತಕ್ಷಣವೇ ತಾತ್ಕಾಲಿಕ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಜಿಲ್ಲಾದಿಕಾರಿ ತಿಳಿಸಿದರು ಕೂಡ ಹದಿನೈದು ದಿನ ಕಳೆದರೂ ಯಾವುದೇ ಅಧಿಕಾರಿ ತಿರುಗಿ ನೋಡದೆ ನಿರ್ಲಕ್ಷ ವಹಿಸಿರುವುದರಿಂದ ಗ್ರಾಮಸ್ಥರು ತಾತ್ಕಾಲಿಕ ರಸ್ತೆ ನಿರ್ಮಿಸದಿದ್ದರೆ ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪಟ್ಟಣದ ಪ್ರೇಸ್ ಕ್ಲಬ್ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು

ನಾಗಮಂಗಲ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಕ್ಯಾತನಹಳ್ಳಿ ಮಂಜುನಾಥ್ ಮಾತನಾಡಿ ಕೆರೆ ಏರಿ ಒಡೆದು ೧೫ ದಿನ ಕಳೆದರು ಕೂಡ ಯಾವ ಅಧಿಕಾರಿಗಳು ಈ ಕಡೆ ತಲೆ ಹಾಕಿಲ್ಲ ಕೆರೆಯ ಹಿಂಭಾಗ ರೈತರು ತಿರುಗಾಡಲು ರಸ್ತೆ ಇರುತ್ತದೆ ಜೊತೆಗೆ ನೂರಾರು ರೈತರ ಜಮೀನು ಕೃಷಿ ಚಟುವಟಿಕೆಗೆ ಅಡ್ಡಿ ಹಾಗಿರುತ್ತದೆ, ಸದರಿ ರಸ್ತೆಯೂ ಕೂಡ ಕೆರೆ ಒಡೆದು ನೀರು ರಭಸವಾಗಿ ಬಂದಿದ್ದರಿAದ ಕೊಚ್ಚಿಹೋಗಿರುತ್ತದೆ. ಈ ಸಂಬAಧ ಮಾನ್ಯ ಮಂಡ್ಯ ಜಿಲ್ಲಾಧಿಕಾರಿಗಳು ಸ್ಥಳ ತನಿಖೆ ಮಾಡಿ ರೈತರಿಗೆ ಹಾಗೂ ಸಾರ್ವಜನಿಕರು ತಿರುಗಾಡಲು ‘ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡುವಂತೆ ಸಂಬoಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಸಂಬoಧಪಟ್ಟ ಅಧಿಕಾರಿಗಳು ಇದುವರೆವಿಗೂ ರಸ್ತೆಯನ್ನು ಸರಿಪಡಿಸಿರುವುದಿಲ್ಲ, ಹಾಗೂ ಬೆಳೆ ನಷ್ಟ ಸಂಭವಿಸಿದ ರೈತರಿಗೆ ಪರಿಹಾರವನ್ನೂ ಸಹ ಕೊಟ್ಟಿರುವುದಿಲ್ಲ ಇದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

ಕಂಚಿನ ಕೋಟೆ ಮೂರ್ತಿ ಮಾತನಾಡಿ ಈ ಕೂಡಲೆ ಸಂಬAಧಪಟ್ಟ ಅಧಿಕಾರಿಗಳು ರೈತರು ತಿರುಗಾಡಲು ತಾತ್ಕಾಲಿಕ ರಸ್ತೆಯನ್ನು ಸರಿಪಡಿಸಿಕೊಡಬೇಕು ಮತ್ತು ಈ ಕೆರೆಯು ಸುಮಾರು ೩೬ ಎಕರೆ ವಿಸ್ತಿರ್ಣವುಳ್ಳದ್ದಾಗಿದ್ದು. ಕೆಲವು ರೈತರು ಸದರಿ ಕೆರೆಯನ್ನು ಒತ್ತುವರಿ ಮಾಡಿರುತ್ತಾರೆ. ಒತ್ತುವರಿ ಮಾಡಿಕೊಂಡಿರುವ ಕೆರೆಯ ಜಾಗವನ್ನು ಬಿಡಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಬoಧಪಟ್ಟ ಅಧಿಕಾರಿಗಳ ವಿರುದ್ಧ ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಿರ್ಮಾನಿಸಿರುತ್ತಾರೆ. ಎಂದರು

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಂಖಡರುಗಳ ಕ್ಯಾತನಹಳ್ಳಿ ಮಂಜುನಾಥ, ಕಂಚಿನಕೋಟೆ ಮೂರ್ತಿ, ನಂಜುಡಪ್ಪ ಹೆಚ್, ಕ್ಯಾತನಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ರಾಜಣ್ಣ ಬಿಳಿಕಲ್ಲು ರಾಜೇಗೌಡ ಮುಳುಕಟ್ಟೆ ಶಿವರಾಮಯ್ಯ ಭಾಗವಹಿಸಿದರು

ವರದಿ: ಚಂದ್ರಮೌಳಿ ನಾಗಮಂಗಲ

error: