April 28, 2024

Bhavana Tv

Its Your Channel

ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಸ್ವ ಕ್ಷೇತ್ರದಲ್ಲಿ ಚುನಾವಣೆ ಮುಂಚೆ ಪಲಾಯನ ಮಾಡಿದ ಭೂಕಳ್ಳಿ ಮಂಜು ನಾಚಿಕೆಗೇಡಿನ ವಿಚಾರ-ಮಾಜಿ ಸಂಸದ ಶಿವರಾಮೇಗೌಡ

ನಾಗಮಂಗಲ. ಪಟ್ಟಣದ ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ ಭಾರತೀಯ ಜನತಾ ಪಕ್ಷದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ವ ಕ್ಷೇತ್ರದಲ್ಲಿ ವಿಧಾನಪರಿಷತ್ ಚುನಾವಣೆ ಮುಂಚೆ ಅಭ್ಯರ್ಥಿ ಭೂಕಳ್ಳಿ ಮಂಜು ಕಣ್ಣೀರು ಹಾಕುತ್ತ ಪಲಾಯನ ಮಾಡಿದ್ದು ನಾಚಿಕೆಗೇಡಿನ ವಿಚಾರ ಎಂದರು

ಮಂಡ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಕ್ಕಿಂತ ಅತಿ ವೇಗವಾಗಿ ಮತದಾರರ ತಲುಪಿದ್ದು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ಭೂಕಳ್ಳಿ ಮಂಜು ಕೊನೆಕ್ಷಣದಲ್ಲಿ ಕಣ್ಣೀರು ಹಾಕುತ್ತ ಹಿಂದೆ ಸರಿದರು ಈ ಬೆಳವಣಿಗೆ ಈಗಿನ ಬಿಜೆಪಿ ಸರ್ಕಾರ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ವಕ್ಷೇತ್ರ ದಿಂದಲೇ ಪಲಾಯನ ಮಾಡಿದ್ದು ನಾಚಿಕೆಗೇಡಿನ ವಿಚಾರ ನಮ್ಮ ಪಕ್ಷಕ್ಕೆ ಭದ್ರವಾಗಿದ್ದ ಮತಗಳು ನಮಗೆ ಬಂದಿವೆ ಆದರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ೩೯೦ ಮತಗಳಿವೆ ೫೦ ಮತಗಳನ್ನು ಪಡೆದಿರುವ ಬಿಜೆಪಿ ಅಭ್ಯರ್ಥಿ ಪಡೆದರೆ ಉಳಿಕೆ ೩೪೦ ಮತ್ತು ಎಲ್ಲಿ ಹೋದವು ಸತ್ಯಾಸತ್ಯತೆ ಮಂಡ್ಯ ಜನತೆಗೆ ಗೊತ್ತು ಎಂದರು

ನಾರಾಯಣಗೌಡರು ಅವರು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಅದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ ಆದರೆ ಕಳೆದ ಚುನಾವಣೆಯಲ್ಲಿ ನಾನು ಮತ್ತು ಅಪ್ಪಾಜಿಗೌಡ ಇಬ್ಬರೂ ಕೂಡ ಸ್ಪರ್ಧಿಸಿದ್ದೆವು ಇಬ್ಬರು ಬಳಿಯು ಕೂಡ ಹಣ ಪಡೆದರು ಎಂದು ತಿಳಿಸಿದರು

ಮುಂದಿನ ಚುನಾವಣೆಯಲ್ಲಿ ನನ್ನ ವಿಧಾನಸಭೆ ಚುನಾವಣೆಗೆ ನನ್ನ ಸ್ಪರ್ಧೆ ಖಚಿತ ಜನವರಿ ೧೫ ರ ನಂತರ ಮತದಾರರ ಬಳಿ ತೆರಳಿ ಆಶೀರ್ವಾದ ಮಾಡಿ ಎಂದು ಕೋರುವೆ
ಜೆಡಿಎಸ್ ಪಕ್ಷದಿಂದ ಗೆದ್ದವರು ಬೇರೆ ಪಕ್ಷಕ್ಕೆ ಪಲಾಯನ ಮಾಡುತ್ತಿದ್ದಾರೆ ಇದು ನಮ್ಮ ಪಕ್ಷದ ದೊಡ್ಡ ಹಣೆಬರಹ ಆದ್ದರಿಂದ ನಾವೆಲ್ಲ ಹಿರಿಯರು ಸೇರಿ ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡ ಮತ್ತು ಎಚ್. ಡಿ.ಕುಮಾರಸ್ವಾಮಿ ರವರಿಗೆ ಎರಡು ಬಾರಿ ಗೆದ್ದವರಿಗೆ ಟಿಕೆಟ್ ನೀಡಬೇಡಿ ಎಂದು ಮನವಿಯನ್ನು ಮಾಡಿ ಅವರ ಸೇವೆಯನ್ನು ಪಕ್ಷಕ್ಕೆ ಮೀಸಲಾಗಿರಲಿ ಇಂದು ಸೂಚಿಸಿದ್ದೇವೆ

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಧ್ಯಕ್ಷ ಟಿ.ಕೃಷ್ಣಪ್ಪ .ವಕೀಲರಾದ ರಾಮೇಗೌಡ. ಲಾರಿ ಚನ್ನಪ್ಪ .ಶಿವರಾಮೇಗೌಡ ಅಭಿಮಾನಿಗಳು ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: