May 3, 2024

Bhavana Tv

Its Your Channel

ರೈತರು ಬೆಳೆದ ರಾಗಿಯನ್ನು ರಾಗಿ ಕೇಂದ್ರದಲ್ಲಿ ಖರೀದಿಗೆ ಅವಕಾಶ ನೀಡುವಂತೆ ರೈತಸಂಘ ಒತ್ತಾಯ

ನಾಗಮಂಗಲ:-ರೈತರು ಬೆಳೆದ ರಾಗಿಯನ್ನು ರಾಗಿ ಖರೀದಿ ಕೇಂದ್ರದಲ್ಲಿ ಎಲ್ಲಾವರ್ಗದ ರೈತರ ರಾಗಿಯನ್ನು ಕೊಳ್ಳಲು ಅವಕಾಶ ನೀಡುವಂತೆ ಎಪಿಎಂಸಿ ಮಾರುಕಟ್ಟೆಯ ಕಾರ್ಯದರ್ಶಿ ನಾಗೇಶ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಜಿ.ಜೆ ಶಿವಶಂಕರ್ ಗೌಡಮನವಿ ಸಲ್ಲಿಸಿದರು

ನಾಗಮಂಗಲ ತಾಲೂಕು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಾಗಮಂಗಲ ತಾಲೂಕು ಘಟಕದ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಬಣದವರು ರಾಜ್ಯ ಸರ್ಕಾರ ಇತ್ತೀಚೆಗೆ ರಾಗಿ ಕೊಳ್ಳಲು ಖರೀದಿ ಕೇಂದ್ರಗಳನ್ನು ಆರಂಭ ಮಾಡಿದ್ದು ಕೇವಲ ಸಣ್ಣ ಹಿಡುವಳಿದಾರರಿಗೆ ಅವಕಾಶ ನೀಡಿದ್ದು ದೊಡ್ಡ ಹಿಡುವಳಿ ಮಧ್ಯಮವರ್ಗದವರ ಕಡೆಗಣಿಸುತ್ತಿದೆ ರೈತರು ಸಂಕಷ್ಟದಲ್ಲಿ ಒಳಗಾಗಿದ್ದು ಇಂತಹ ಸಂದರ್ಭದಲ್ಲಿ ಕಡೆಗಣನೆ ಮಾಡುತ್ತಿರುವುದಕ್ಕೆ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ರಾಗಿ ಖರೀದಿಯಲ್ಲಿ ಸಣ್ಣ ಹಿಡುವಳಿ ದಾರದಂತೆ ಮಧ್ಯಮ ಹಾಗೂ ದೊಡ್ಡ ಹಿಡುವಳಿದಾರರಿಗೆ ಅವಕಾಶ ನೀಡುವ ಮುಖಾಂತರ ರೈತರುಗಳು ಅತಿಹೆಚ್ಚು ಬೆಳೆದ ರಾಗಿಯನ್ನು ಖರೀದಿಗೆ ಅವಕಾಶ ನೀಡಿ ರೈತರಿಗೆ ಅನುವು ಮಾಡಿಕೊಡಬೇಕೆಂದು ಈ ಸಂದರ್ಭದಲ್ಲಿ ಮಾತನಾಡಿದರು.

ರೈತ ಬೆಳೆದ ರಾಗಿಗೆ ಬೆಂಬಲ ಬೆಲೆ ನೀಡುವ ಜೊತೆಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಇಂತಹ ಖರೀದಿ ಕೇಂದ್ರಗಳನ್ನು ಸರ್ಕಾರವೇ ಮಾಡಿದ್ದು ಹೀಗೆ ರೈತರಿಗೆ ಇಬ್ಬಗೆ ನೀತಿ ಜಾರಿಗೆ ತರುವುದು ಸರಿಯಿಲ್ಲವೆಂದು ರೈತ ಸಂಘದ ಆಗ್ರಹವಾಗಿದೆ .

ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಜಿಲ್ಲಾಧಿಕಾರಿಗಳು ರೈತರಿಗೆ ಅವಕಾಶ ಮಾಡಿಕೊಡುವಂತೆ ಈ ಸಂದರ್ಭದಲ್ಲಿ ಒತ್ತಾಯವಾಗಿದೆ .

ಇದೇ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಕೃಷ್ಣಪ್ಪ ಸಿದ್ದಲಿಂಗಯ್ಯ ರಾಮಕೃಷ್ಣೆಗೌಡ. ತಾತಯ್ಯ ಶಟ್ಟ ಗೌಡ. ರೈತ ಮುಖಂಡರುಗಳು ಹಾಜರಿದ್ದರು.

ವರದಿ: ದೇವಲಾಪುರ ಜಗದೀಶ್ ನಾಗಮಂಗಲ

error: