May 3, 2024

Bhavana Tv

Its Your Channel

ಚುನಾವಣೆ ಮುನ್ನ ಯುವಕರನ್ನು ಸಂಘಟಿಸುವ ಕಾರ್ಯತಂತ್ರಕ್ಕೆ ಮುಂದಾದ ಮಾಜಿ ಶಾಸಕ ಚೆಲುವರಾಯಸ್ವಾಮಿ

ನಾಗಮಂಗಲ:- ವಿಧಾನಸಭಾ ಕ್ಷೇತ್ರ ಮತ್ತು ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸಿ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕೋರಿಕೊಂಡರು.

ಪಟ್ಟಣದ ಹೊರವಲಯದ ಮೈಸೂರು ರಸ್ತೆಯ ಶ್ರೀರಾಮನಹಳ್ಳಿ ಬಳಿಯ ಖಾಸಗಿ ತೋಟದಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ನಾಗಮಂಗಲ ಕ್ಷೇತ್ರದಲ್ಲಿ ಬೇರೆಯವರು ಗೆದ್ದರೆ ಶಾಸಕರಾಗಬಹುದು. ಅವರು ಗೆದ್ದು ನಿಮ್ಮೂರಿನ ಮಾರಮ್ಮನ ಹಬ್ಬಕ್ಕೆ ಬಂದು ಊಟ ಮಾಡಬಹುದು, ನಿಮ್ಮ ಮನೆಯಲ್ಲಿ ವಾಸ್ತವ್ಯ ಹೂಡಬಹುದು, ಹೆಚ್ಚೆಂದರೆ ನಿಮ್ಮೂರಿನ ಹೊಳೆಯಲ್ಲಿ ಈಜಾಡಬಹುದು ಅಷ್ಟೇ. ಆದರೆ, ನನ್ನನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕನಾಗಿ ಚುನಾಯಿಸಿದರೆ ಈ ಕ್ಷೇತ್ರ, ಜಿಲ್ಲೆ ಮತ್ತು ರಾಜ್ಯದ ಅಭಿವೃದ್ಧಿಯಾಗುತ್ತದೆ ಎಂದು ಶಾಸಕ ಸುರೇಶ್‌ಗೌಡ ಹೆಸರೇಳದೆ ವ್ಯಂಗ್ಯ ಭರಿತವಾಗಿ ಮಾತನಾಡಿದರು

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದವರನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ. ಯಾರೊಬ್ಬರಿಗೂ ಪೊಲೀಸ್ ಇಲಾಖೆ ವತಿಯಿಂದ ತೊಂದರೆಯಾಗದAತೆ ನೋಡಿಕೊಳ್ಳಲಾಗಿದೆ ಈ ಒಗ್ಗಟ್ಟನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಜರಿದ್ದು ನಾಗಮಂಗಲ ಕ್ಷೇತ್ರದಿಂದ ನನ್ನನ್ನು ಹಾಗೂ ರಾಜ್ಯದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದರು ಈ ಕ್ಷೇತ್ರದಲ್ಲಿ ಯುವ ಸಮುದಾಯವು ಒಗ್ಗಟ್ಟನ್ನು ಚುನಾವಣೆ ಬರುವವರೆಗೂ ಕಾಪಾಡಿಕೊಳ್ಳಬೇಕು ಯುವಜನತೆಯು ಹೊರರಾಜ್ಯ ಮತ್ತು ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಕ್ಷೇತ್ರದ ಯುವಕರಿಗಾಗಿ ಬೆಳ್ಳೂರು ಕ್ರಾಸ್ ಅಥವಾ ನಾಗಮಂಗಲ ಪಟ್ಟಣದ ಇತರೆಡೆ ಕೈಗಾರಿಕೆಯನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ನೀಡಲು ಮುಂದಿನ ಶಾಸಕತ್ವದ ಅವಧಿಯಲ್ಲಿ ಪ್ರಯತ್ನಿಸುತ್ತೇನೆ. ನಾನು ಈ ಹಿಂದೆ ಶಾಸಕನಾಗಿದ್ದಾಗ ಮಹಿಳೆಯರಿಗೊಂದು ಗಾರ್ಮೆಂಟ್ಸ್ ಫ್ಯಾಕ್ಟರಿ ತೆರೆಯಲು ಯತ್ನಿಸಿದ್ದೆ, ಅದು ನಾಲ್ಕು ವರ್ಷಗಳ ಬಳಿಕ ಈಗ ಆರಂಭ ವಾಗುವ ಪ್ರಯತ್ನದಲ್ಲಿದೆ, ನಾನು ಶಾಸಕನಾಗಿದ್ದರೆ ಕೇವಲ ಆರು ತಿಂಗಳಲ್ಲಿಯೇ ಗಾರ್ಮೆಂಟ್ಸ್ ಫ್ಯಾಕ್ಟರಿ ಆರಂಭವಾಗುತ್ತಿತ್ತು ಎಂದರು.

ನಾಗಮAಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರಸನ್ನ, ಪುರಸಭೆ ಸದಸ್ಯರಾದ ತಿಮಪ್ಪ, ರಮೇಶ್, ಟಿ.ಎ.ಪಿ.ಸಿ.ಎಂ.ಎಸ್. ನಿರ್ದೇಶಕರಾದ ಯತೀಶ್, ಚೇತನ್, ಗಿರೀಶ್, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್ ಯುವ ಮುಖಂಡರಾದ ಮೇಗಲಕೇರಿ ಚಂದ್ರು.ಸುನಿಲ್, ಸಚಿನ್, ಅತೀಖ್, ರವಿಕಾಂತೇಗೌಡ ಹಾಗೂ ಚೆಲುವರಾಯಸ್ವಾಮಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: