March 30, 2023

Bhavana Tv

Its Your Channel

ಕೊರೋನಾದಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಗರೀಬ್ ಕಲ್ಯಾಣ್ ಯೋಜನೆಯಡಿ ‘ಭರ್ಜರಿ’ ಕೊಡುಗೆ

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಿಂದ ಕೊರೋನಾದಿಂದ ಸಂಕಷ್ಟಕ್ಕೊಳಗಾಗಿರುವ ಸದಸ್ಯರು ಹಾಗೂ ಸಂಸ್ಥೆಗಳಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಪರಿಹಾರ ನೀಡಲಾಗುವುದು ಎಂದು ಭವಿಷ್ಯನಿಧಿ ಆಯುಕ್ತರು ತಿಳಿಸಿದ್ದಾರೆ.

ಕಡಿಮೆ ವೇತನ ಗಳಿಸುವ ಸದಸ್ಯರ ಉದ್ಯೋಗದಲ್ಲಿ ಅಡಚಣೆ ತಡೆಯುವುದು ಮತ್ತು ನೂರಕ್ಕಿಂತ ಕಡಿಮೆ ಉದ್ಯೋಗಿಗಳನ್ನು ನೇಮಿಸಿಕೊಂಡಿರುವ ಇಪಿಎಫ್ ಕಾಯ್ದೆಗೆ ಒಳಪಡುವ ಸಂಸ್ಥೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಾಸಿಕ 15 ಸಾವಿರ ರೂ.ಗಿಂತ ಕಡಿಮೆ ವೇತನ ಗಳಿಸುತ್ತಿರುವವರಿಗೆ 3 ತಿಂಗಳು ಇಪಿಎಫ್ ಮತ್ತು ಇಪಿಎಸ್ ಕೊಡುಗೆ ನೀಡಲು ನಿರ್ಧರಿಸಿದೆ. ಉದ್ಯೋಗದಾತರು ನೂರಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರಬೇಕು ಹಾಗೂ ಅವರಲ್ಲಿ 90 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಗಳು ಮಾಸಿಕ 15 ಸಾವಿರಕ್ಕಿಂತ ಕಡಿಮೆ ವೇತನ ಗಳಿಸುತ್ತಿರುವವರಿಗೆ ಈ ಯೋಜನೆಯನ್ನು ರೂಪಿಸಲಾಗಿದೆ.

ಈ ಯೋಜನೆಯು ಇಪಿಎಫ್‍ಓ ಇಸಿಆರ್ ಫೈಲಿಂಗ್ ಭಾಗವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.epfindia.gov.in EPFO ನ್ನು ಸಂಪರ್ಕಿಸುವಂತೆ ಅವರು ತಿಳಿಸಿರುತ್ತಾರೆ.

source : dailyhunt

About Post Author

error: