September 27, 2023

Bhavana Tv

Its Your Channel

ಕೊಡಗು:ಕೊರೊನಾದಿಂದ ಗುಣಮುಖನಾಗಿದ್ದ ವ್ಯಕ್ತಿ ಮತ್ತೆ ಆಸ್ಪತ್ರೆಗೆ ದಾಖಲು

ಮಡಿಕೇರಿ,ಏಪ್ರಿಲ್ 16: ಕೊವಿಡ್ 19ನಿಂದ ಗುಣಮುಖರಾಗಿ ಮನೆಗೆ ಸೇರಿದ್ದ ವ್ಯಕ್ತಿ ಮತ್ತೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.

ಗುಣಮುಖನಾಗಿ ಮನೆಗೆ ಮರಳಿದ್ದ ವಿರಾಜಪೇಟೆ ಸಮೀಪದ ಕೆಟುಮೊಟ್ಟೆ ನಿವಾಸಿ ಜ್ವರ ಕಾಣಿಸಿಕೊಂಡ ಕಾರಣ ಬುಧವಾರ ಮಧ್ಯಾಹ್ನ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಏಪ್ರಿಲ್ 7 ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ವ್ಯಕ್ತಿ ಮನೆಯಲ್ಲೇ ಇದ್ದರು. ಒಂದು ವಾರದ ನಂತರ ಆತನಲ್ಲಿ ಮತ್ತೆ ಜ್ವರ ಕಾಣಿಸಿಕೊಂಡಿದೆ.

ವ್ಯಕ್ತಿಯು ತನ್ನ ಮನೆಯಿಂದ ಹೊರಹೋಗಿಲ್ಲವಾದ್ದರಿಂದ ಜನರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಹೇಳಿದ್ದಾರೆ.

ಆಸ್ಪತ್ರೆಗೆ ತಾನಾಗಿಯೇ ದಾಖಲಾದ ವ್ಯಕ್ತಿ ಕೋವಿಡ್ -19 ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರ ಗಂಟಲು ದ್ರವ ಮತ್ತು ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಇಂದು ದೊರೆಯುವ ಸಾಧ್ಯತೆ ಇದೆ.

ಭಾರತದಲ್ಲಿ ಕೊರೊನಾ ಹೊಸ ಪ್ರಕರಣಗಳು 12ಸಾವಿರ ಗಡಿ ದಾಟಿದೆ. ಕರ್ನಾಟಕದಲ್ಲಿ ಒಂದೇ ದಿನ 19 ಪಾಸಿಟಿವ್ ಪ್ರಕರನಗಳು ದಾಖಲಾಗಿವೆ. ಸೋಂಕಿತ ಪ್ರಕರಣಗಳು 279ಕ್ಕೆ ಏರಿಕೆಯಾಗಿದೆ.

source : dailyhunt

error: