September 14, 2024

Bhavana Tv

Its Your Channel

ಮೇ ತಿಂಗಳಿಂದ ಭಾರತದಲ್ಲೇ ಕಿಟ್ ಉತ್ಪಾದಿಸಲು ತಯಾರಿ: ಕೇಂದ್ರ ಆರೋಗ್ಯ ಸಚಿವಾಲಯ

ಹೊಸದಿಲ್ಲಿ,ಎ.18: ಕೋವಿಡ್-19 ಗಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆ ಹಾಗೂ ಕ್ಷಿಪ್ರ ಪ್ರತಿಕಾಯ ಪತ್ತೆಗಾಗಿ ಅಗತ್ಯವಿರುವ ತಲಾ 10 ಲಕ್ಷ ಕಿಟ್‌ಗಳನ್ನು ಮೇ ತಿಂಗಳಿಂದ ಸ್ಥಳೀಯವಾಗಿ ಉತ್ಪಾದಿಸಲು ಭಾರತ ಸಜ್ಜಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಹೆಚ್ಚುತ್ತಿರುವ ಭಾರತದ ಬೇಡಿಕೆಯ ಮಧ್ಯೆ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.ಸಾಂಕ್ರಾಮಿಕ ರೋಗ ನಿರ್ಣಯ, ಚಿಕಿತ್ಸಕ ಹಾಗೂ ಲಸಿಕೆಗಳ ಕ್ಷೇತ್ರಗಳಲ್ಲಿನ ಪ್ರಯತ್ನಗಳು ಯುದ್ದೋಪಾದಿಯಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಸ್ತುತ ಭಾರತವು ಪ್ರತಿ ತಿಂಗಳು 6,000 ವೆಂಟಿಲೇಟರ್‌ಗಳ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ. ರಾಜ್ಯಗಳ ಜೊತೆಗೆ ಕೇಂದ್ರ ಸರಕಾರವು ಸಮರ್ಪಿತ ಕೋವಿಡ್ ಆಸ್ಪತ್ರೆಗಳೊಂದಿಗೆ ಕೆಲಸ ಮಾಡುವ ನಿರೀಕ್ಷೆಯಲ್ಲಿದೆ. ಶುಕ್ರವಾರದ ತನಕ ದೇಶಾದ್ಯಂತ 1,919 ಸಮರ್ಪಿತ ಕೋವಿಡ್ ವ್ಯವಸ್ಥೆಗಳಿರುವ ಆಸ್ಪತ್ರೆಯನ್ನು,1,73,746 ಐಸೋಲೇಶನ್ ಬೆಡ್‌ಗಳು ಹಾಗೂ 21,806 ಐಸಿಯು ಬೆಡ್‌ಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

source ; dailyhunt

error: