ನವದೆಹಲಿ: ದೇಶದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರಿಗೆ ಕರೊನಾ ಸೋಂಕು ವ್ಯಾಪಿಸಲು ಕಾರಣವಾದ ನಿಜಾಮುದ್ದೀನ್ ಮರ್ಕಜ್ನ ತಬ್ಲಿಘಿ ಜಮಾತ್ನ ಮುಖ್ಯಸ್ಥ ಮೌಲಾನಾ ಸಾದ್ಗೂ ಕರೊನಾ ಪತ್ತೆ ಪರೀಕ್ಷೆ ನಡೆಸಲಾಗಿದೆ.
ಸಾದ್ ವಕೀಲ ಫುಜೈಲ್ ಅಯ್ಯೂಬಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರಿಗೆ ಸೋಂಕು ಅಂಟಿರುವುದು ಪತ್ತೆಯಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಸಾದ್ನನ್ನು ದೆಹಲಿ ಮಸೀದಿಯೊಂದರಲ್ಲಿ ಪತತ್ತೆಹಚ್ಚಲಾಗಿತ್ತು. ಬಳಿಕ 14 ದಿನಗಳ ಕ್ವಾರಂಟೈನ್ ವಿಧಿಸಲಾಗಿತ್ತು. ಗೃಹ ಬಂಧನ ಅವಧಿ ಮುಗಿಯುತ್ತಿದ್ದಂತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಾದ್ ಸಂಪರ್ಕದಲ್ಲಿದ್ದಾರೆ ಎಂದು ಅಯ್ಯೂಬಿ ಹೇಳಿದ್ದಾರೆ.
ಸಾದ್ ವಿರುದ್ಧ ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆಗೆ ಸಿದ್ಧತೆ ನಡೆಸಿದ್ದಾರೆ. ತಲೆ ಮರೆಸಿಕೊಂಡಿದ್ದ ಸಾದ್ಗಾಗಿ ಮಗನ ಸಮ್ಮುಖದಲ್ಲಿಯೇ ಆತನ ಮನೆಯಲ್ಲಿ ಹುಡುಕಾಟ ನಡೆಸಿದ್ದರು. ಮನೆಗೂ ಎರಡು ನೋಟಿಸ್ ರವಾನಿಸಿದ್ದರು. ಇದಕ್ಕೆ ಸಾದ್ ಉತ್ತರಿಸಿದ್ದಾರೆ ಎಂದು ಅಯ್ಯೂಬಿ ಹೇಳಿದ್ದಾರೆ.
ಮರ್ಕಜ್ನಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆದಿಲ್ಲ. ಅದೊಂದು ಮಸೀದಿಯಾಗಿರುವುದರಿಂದ ವರ್ಷವಿಡೀ ನಿತ್ಯವೂ ಒಂದಿಲ್ಲೊಂದು ಧಾರ್ಮಿಕ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಮಸೀದಿ ಒಳಗಡೆಯೇ ನಡೆಯುವುದರಿಂದ ಇದಕ್ಕೆ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕಿರಲಿಲ್ಲ ಎಂದು ಸಾದ್ ತನ್ನ ವಕೀಲರ ಮೂಲಕ ತಿಳಿಸಿದ್ದ. ಹಾಗೆಯೇ ಪೊಲೀಸರ ತನಿಖೆಗೂ ಸಹಕರಿಸುವುದಾಗಿ ಹೇಳಿದ್ದ.
ಸಾದ್ನನ್ನು ವಶಕ್ಕೆ ಪಡೆಯಲು ಮುಂದಾಗಿದ್ದ ಪೊಲೀಸರು ಈಗ ಪರೀಕ್ಷೆ ವರದಿ ಬರುವವರೆಗೂ ಕಾಯಬೇಕಿದೆ. ಒಂದು ವೇಳೆ ವರದಿಯಲ್ಲಿ ಸೋಂಕಿಗೆ ಒಳಗಾಗಿರುವುದು ಖಚಿತವಾದಲ್ಲಿ ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವಾಗುತ್ತದೆ. ಗುಣಮುಖರಾದ ಬಳಿಕವಷ್ಟೇ ಪೊಲೀಸರು ತನಿಖೆ ಮುಂದುವರಿಸಬೇಕಾಗುತ್ತದೆ.
More Stories
ಈಜಿಪ್ಟ್ ನಲ್ಲಿ ನಡೆಯಲಿರುವ ಹವಾಮಾನ ವೈಫರೀತ್ಯದ ವಿಶ್ವ ನಾಯಕರ ಸಮಾವೇಶಕ್ಕೆ ಕನ್ನಡಿಗ ಐಎಫ್ಎಸ್ ಅಧಿಕಾರಿ ಎ.ಟಿ. ದಾಮೋದರ ನಾಯ್ಕ
‘ಖೇಲ್ ರತ್ನ ಪ್ರಶಸ್ತಿ’ಯನ್ನು ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ’ ಎಂದು ಮರುನಾಮಕರಣ – ಪ್ರಧಾನಿ ನರೇಂದ್ರ ಮೋದಿ ಘೋಷಣೆ
NEET-PG ಪರೀಕ್ಷೆ ಕನಿಷ್ಠ ʼ4 ತಿಂಗಳು ಮುಂದೂಡಿಕೆʼ; ಕೇಂದ್ರ ಸರ್ಕಾರ ಘೋಷಣೆ