June 15, 2024

Bhavana Tv

Its Your Channel

ಕೃಷ್ಣರಾಜಪೇಟೆ ಪಟ್ಟಣದಲ್ಲಿ ಬಡವರಿಗೆ ಊಟ ಸರಬರಾಜು

ಕೃಷ್ಣರಾಜಪೇಟೆ ಪಟ್ಟಣದಲ್ಲಿ ರಾಜ್ಯದ ಪೌರಾಢಳಿತ, ರೇಷ್ಮೆ ಹಾಗೂ ತೋಟಗಾರಿಕೆ ಸಚಿವರಾದ ಡಾ.ನಾರಾಯಣಗೌಡರ ಅಭಿಮಾನಿಗಳ ಬಳಗದ ವತಿಯಿಂದ ಕೋರೋನಾ ಭೀತಿಯ ಹಿನ್ನೆಲೆಯಲ್ಲಿ ಹೌಸ್ ಲಾಕ್ ಆಗಿರುವ ಬಡಜನರು, ಕೃಷಿಕೂಲಿ ಕರ‍್ಮಿಕರು ಹಾಗೂ ರಸ್ತೆ ಬದಿ ವ್ಯಾಪಾರಿಗಳ ಕುಟುಂಬದ ಸದಸ್ಯರಿಗೆ ಇಂದಿನಿಂದ ಏಪ್ರಿಲ್ ೨೧ರವರೆಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ಸರಬರಾಜು ಮಾಡುವ ಕರ‍್ಯಕ್ಕೆ ಚಾಲನೆ ನೀಡಲಾಯಿತು …

ಪುರಸಭೆಯ ಸದಸ್ಯರಾದ ದಿನೇಶ್, ಹೆಚ್.ಆರ್.ಲೋಕೇಶ್, ಇಂದ್ರಾಣಿವಿಶ್ವನಾಥ್, ಮುಖಂಡರಾದ ಸುನೀಲ್, ದಿನೇಶ್, ಬಸವರಾಜು ಮತ್ತು ಸಚಿವರ ಆಪ್ತ ಸಹಾಯಕರಾದ ದಯಾನಂದ ಅವರ ನೇತೃತ್ವದಲ್ಲಿ ಪಟ್ಟಣದ ಹೇಮಾವತಿ ಬಡಾವಣೆಯ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಆವರಣ, ಮಸಜೀದ್ ಏಖೈರ್ ಮತ್ತು ಸುಭಾಷ್ ನಗರ ಬಡಾವಣೆಯಲ್ಲಿ ಬಡಜನರಿಗೆ ಊಟದ ಪ್ಯಾಕೇಟ್ ಗಳು ಹಾಗೂ ಕುಡಿಯುವ ನೀರಿನ ಬಾಟಲ್ ಗಳನ್ನು ವಿತರಿಸಿ ಕೋರೋನಾ ವೈರಾಣು ನಿಯಂತ್ರಣಕ್ಕಾಗಿ ಎಲ್ಲರೂ ಮನೆಯೊಳಗೇ ಇದ್ದು ಸಹಕಾರ ನೀಡಬೇಕು, ಆರೋಗ್ಯ ಇಲಾಖೆಯ ನರ‍್ದೇಶನದಂತೆ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವಂತೆ ಮನವಿ ಮಾಡಿದರು….

error: