March 19, 2025

Bhavana Tv

Its Your Channel

ಸಾಲಗಾರರಿಗೆ ಕೊಂಚ ರಿಲೀಫ್ , 3 ತಿಂಗಳ ಸಾಲದ ಇಎಂಐ ಮುಂದೂಡಿಕೆ

ನವದೆಹಲಿ: ಕೊರೋನಾವೈರಸ್ ಕಾರಣ ಇಡೀ ದೇಶ ಲಾಕ್ ಡೌನ್ ಆಗಿದ್ದು, ಸಾಲದ ಸುಳಿಯಲ್ಲಿ ಸಿಲುಕಿರುವ ಜನಸಾಮಾನ್ಯರಿಗೆ ಸ್ವಲ್ಪ ಅನುಕೂಲವಾಗುವ  ನಿಟ್ಟಿನಲ್ಲಿ ಆರ್ ಬಿಐ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ರಾಷ್ಟ್ರೀಕೃತ, ವಾಣಿಜ್ಯ, ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿನ ಎಲ್ಲಾ ಸಾಲಗಳ  ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದ್ದು, ಮೂರು ತಿಂಗಳ ಇಎಂಐಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಆರ್ ಬಿಐ ಗೌರ್ವನರ್ ಶಕ್ತಿಕಾಂತ ದಾಸ್  ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. 

ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಕ್ತಿಕಾಂತ ದಾಸ್,
ವೈಯಕ್ತಿಕ, ಗೃಹ, ವಾಹನ ಸಾಲ, ಗೋಲ್ಡ್ ಲೋನ್, ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಸೇರಿದಂತೆ ಎಲ್ಲಾ  ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲದ ಇಎಂಐಯನ್ನು ಜೂನ್ ವರೆಗೂ ಮುಂದೂಡಿಕೆ ಮಾಡಲಾಗಿದೆ ಎಂದರು. ಕೊರೋನಾವೈರಸ್ ನಿಂದಾಗಿ ದೇಶದ ಅರ್ಥವ್ಯವಸ್ಥೆ ಮೇಲೆ ಪರಿಣಾಮ ಉಂಟಾಗಿದ್ದು, ಪ್ರಸ್ತುತದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಅದೇ ರೀತಿಯಲ್ಲಿ ಆರ್ ಬಿಐ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ -ರೆಪೊದರವನ್ನು ಹಿಂದಿನ ದರದಲ್ಲಿ 75 ಅಂಶಗಳನ್ನು ಕಡಿತಗೊಳಿಸುವ ಮೂಲಕ ಶೇ. 4. 4 ಕ್ಕೆ ನಿಗದಿ ಪಡಿಸಿದೆ.ರಿವರ್ಸ್ ರೆಪೊ ದರ 90 ಅಂಶ ಕಡಿತಗೊಳಿಸಿದ್ದು, ಶೇ. 40 ರಷ್ಟು ನಿಗದಿಪಡಿಸಿರುವುದಾಗಿ ಶಕ್ತಿಕಾಂತ ದಾಸ್  ತಿಳಿಸಿದರು

error: