May 29, 2023

Bhavana Tv

Its Your Channel

ಗೋವಾ, ಮಹಾರಾಷ್ಟ್ರದಿಂದ ನಡೆದುಕೊಂಡೇ ಬೆಳಗಾವಿ ತಲುಪಿದ ಕಾರ್ಮಿಕರು

ಬೆಳಗಾವಿ, ಮಾರ್ಚ್ 28: ಕೊರೊನಾದಿಂದಾಗಿ ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿದ್ದ ಕರ್ನಾಟಕ ಜನರ ಸ್ಥಿತಿ ಅತಂತ್ರವಾಗಿದೆ. ಹೀಗಾಗಿ ಗೋವಾ, ಮಹಾರಾಷ್ಟ್ರಗಳಲ್ಲಿದ್ದ ಕನ್ನಡಿಗರು ನಡೆದುಕೊಂಡೇ ಊರು ತಲುಪಲು ಮುಂದಾಗಿದ್ದಾರೆ.

ಬೆಳಗಾವಿಯಿಂದ ಗೋವಾ, ಮಹಾರಾಷ್ಟ್ರಕ್ಕೆ ಕಾರ್ಖಾನೆಗಳಲ್ಲಿ ಕೆಲಸದ ನಿಮಿತ್ತ ಹೋಗಿದ್ದ ಸುಮಾರು ನೂರಕ್ಕೂ ಅಧಿಕ ಮಂದಿ ಇಂದು ನಡೆದುಕೊಂಡೇ ಬೆಳಗಾವಿಗೆ ತಲುಪಿದ್ದಾರೆ. ಬೆಳಗಾವಿಗೆ ಇಂದು ಬಂದು ತಲುಪಿದ್ದು, ವಿಜಯಪುರ, ರಾಯಚೂರು, ಯಾದಗಿರಿ, ಬಾಗಲಕೋಟೆಗೆ ಹೊರಟಿದ್ದಾರೆ.

ಮೈಸೂರಿನಿಂದ ನಡೆದುಕೊಂಡೇ ಬಳ್ಳಾರಿ ಕಡೆ ಸಾಗಿದ ಕೂಲಿ ಕಾರ್ಮಿಕರು

ಇವರು ರಾತ್ರಿಯೆಲ್ಲಾ ಉಪವಾಸವಿದ್ದು, ನಡಿಗೆಯಲ್ಲೇ ರಾಜ್ಯ ತಲುಪಿದ್ದಾರೆ. ಬೆಳಗಾವಿ ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಇವರು ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಕಂಡುಬಂದಿತು. ಕಳೆದ ನಾಲ್ಕೈದು ದಿನಗಳಿಂದಲೇ ಇವರು ನಡಿಗೆ ಆರಂಭಿಸಿ ಇಂದು ಬಂದಿದ್ದಾರೆ. ಇವರಿಗೆ ವ್ಯವಸ್ಥೆ ಮಾಡಿಕೊಡದ ಗೋವಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

source: dailyhunt

About Post Author

error: