September 18, 2024

Bhavana Tv

Its Your Channel

ಕೊರೊನಾ ಸೈನಿಕರ ತಾಲ್ಲೂಕು ಮಟ್ಟದ ೨ನೇ ಸಭೆ

ಗುಡಿಬಂಡೆ: ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕಾರ್ಮಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಹಯೋಗದಲ್ಲಿ ಆನ್ ಲೈನ್ ಮೂಲಕ ಸರ್ಕಾರದ ವೆಬ್ ಸೈಟ್ ನಲ್ಲಿ ನೋಂದಣಿಯಾಗಿರುವ ಕೊರೊನಾ ಸೈನಿಕರ ತಾಲ್ಲೂಕು ಮಟ್ಟದ ೨ನೇ ಸಭೆ ನಡೆಯಿತು.
ಸಭೆಯಲ್ಲಿ ಕೊರೋನಾ ಸೈನಿಕರು ವಿವಿಧ ಇಲಾಖೆಗಳೊಂದಿಗೆ ನಾನಾ ರೀತಿಯ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಉಪ ತಂಡಗಳನ್ನು ರಚಿಸಿ, ೨೦ ಸ್ವಯಂಸೇವಕರ ಕವಚ, ಗುರುತಿನ ಚೀಟಿಗಳನ್ನು ನೀಡಲಾಯಿತು. ಈ ಸಭೆಯಲ್ಲಿ ಕೊರೋನಾ ಸೈನಿಕರಿಗೆ ವಿವಿಧ ರೀತಿಯ ತರಬೇತಿ ವಿಚಾರಗಳೊಂದಿಗೆ ಕಾರ್ಯಕ್ಷೇತ್ರ ಮತ್ತು ತಾಲ್ಲೂಕು ಮಟ್ಟದಲ್ಲಿ ಮಾಡಬೇಕಾದ ಸೇವಾ ಕಾರ್ಯಕ್ರಮಗಳು ಸೇರಿದಂತೆ ಆರೋಗ್ಯ ಜಾಗೃತಿ ಮತ್ತು ಸುರಕ್ಷತೆ ವಿಚಾರಗಳ ಬಗ್ಗೆ ಅರಿವು ಮೂಡಿಸಲಾಯಿತು. ಕೊರೋನಾ ಸೈನಿಕರ ಸೇವೆಯನ್ನು ಇನ್ನು ಮುಂದೆ ತಾಲ್ಲೂಕು ಆಡಳಿತ ಪಟ್ಟಣ ಪಂಚಾಯಿತಿ ಗ್ರಾಮ ಪಂಚಾಯಿತಿಗಳು ಪೊಲೀಸ್ ಇಲಾಖೆ ಆರೋಗ್ಯ ಇಲಾಖೆಯೊಂದಿಗೆ ಸೇವೆಗಳನ್ನು ನೀಡಲು ತಾಲ್ಲೂಕು ತಂಡದ ಕೊರೋನಾ ಸೈನಿಕರಿಗೆ ಜವಾಬ್ದಾರಿ ವಹಿಸಿ ಅವರೊಂದಿಗೆ ಸಮಾಲೋಚನೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಹನುಮಂತರಾಯಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ ನರಸಿಂಹಮೂರ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜಶೇಖರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗುಡಿಬಂಡೆ ತಾಲ್ಲೂಕು ಕಾರ್ಯದರ್ಶಿ ಮತ್ತು ಕರೋನಾ ಸೈನಿಕ ದಳದ ತಾಲ್ಲೂಕು ಸಮನ್ವಯ ಅಧಿಕಾರಿ ವಕೀಲ ಜಿ.ವಿ ವಿಶ್ವನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸ್ವಯಂಸೇವಕರಿಗೆ ಸಾಕಷ್ಟು ಜಾಗೃತಿ ಮತ್ತು ತರಬೇತಿಗಳನ್ನು ನೀಡಿ ಜೊತೆಗೆ ತಾಲ್ಲೂಕಿನಲ್ಲಿ ನಡೆಯಬೇಕಾದ ಅಗತ್ಯ ಕಾರ್ಯಕ್ರಮಗಳು ಮತ್ತು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕರನಾ ಸೈನಿಕರಿಂದ ಸ್ವಯಂ ಸೇವಾ ಮನೋಭಾವನೆಯಿಂದ ದೊರೆಯಬೇಕಾದ ಸೇವೆಗಳ ಬಗ್ಗೆ ಅರಿವು ಮೂಡಿಸಿ ಜೊತೆಗೆ ಹೆಚ್ಚಿನ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಯಾವುದೇ ಕಾರಣಕ್ಕೆ ಸ್ವಯಂಸೇವಕರು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಅನಗತ್ಯ ರೀತಿಯ ಯಾವುದೇ ಮಾತುಗಳಿಗೆ ಕಿವಿ ಕೊಡದೆ ಸಾರ್ವಜನಿಕರಲ್ಲಿ ಧೈರ್ಯ ಮತ್ತು ಸ್ಥೈರ್ಯ ಮನೋಭಾವನೆಗಳನ್ನು ತುಂಬಿ ಗುಡಿಬಂಡೆ ತಾಲ್ಲೂಕಿನಲ್ಲಿ ಕರೋನಾ ಮುಕ್ತ ಮತ್ತು ಭಾರತ ಸರ್ಕಾರದ ಆಶಯವನ್ನು ಯಶಸ್ವಿ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ತಿಳಿಸಿದರು.
ಈ ಸಭೆಯ ನಂತರ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೊರೋನಾ ಸೈನಿಕರ ಗುಂಪಿನ ಮಾರ್ಚಿಂಗೆ ಸಾಂಕೇತಿಕವಾಗಿ ಹಸಿರು ನಿಶಾನೆಯನ್ನು ಮಾನ್ಯ ತಹಶೀಲ್ದಾರ್ ಹನುಮಂತರಾಯಪ್ಪ ಮತ್ತು ಇನ್ನಿತರ ಅಧಿಕಾರಿಗಳು ಮತ್ತು ಕೊರೋನಾ ಸೈನಿಕ ದಳದ ಮುಖ್ಯಸ್ಥರು ಅಧಿಕಾರಿಗಳು ಚಾಲನೆ ನೀಡಿದರು. ” ಗೋ ಕೊರೋನಾ ಗೋ ” ಎಂಬ ವಾಕ್ಯವನ್ನು ಕೂಗುತ್ತಾ ಜಾಗೃತಿ ಮಾಹಿತಿಯನ್ನು ಹೊರಡಿಸುತ್ತಾ ೨೦ ಮಂದಿ ಕೊರೋನಾ ಸೈನಿಕರು ಮುನ್ನಡೆದರು.

ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗುಡಿಬಂಡೆ ತಾಲ್ಲೂಕು ಕಾರ್ಯದರ್ಶಿ ಮತ್ತು ಕರೋನಾ ಸೈನಿಕ ದಳದ ತಾಲ್ಲೂಕು ಸಮನ್ವಯ ಅಧಿಕಾರಿ ವಕೀಲ ಜಿ.ವಿ ವಿಶ್ವನಾಥ್, ತಾಲ್ಲೂಕು ಖಜಾಂಚಿ ಎಲ್ ನಾಗರಾಜ್, ಗುಡಿಬಂಡೆ ತಾಲ್ಲೂಕು ಕೊರೋನಾ ಸೈನಿಕರಾದ ಬಿ ಮಂಜುನಾಥ್, ಉನ್ನತಿ ಎಸ್ ಮಂಜುನಾಥ್ , ಭರತ್ ಜಿ .ವಿ ಶ್ರೀನಾಥ್, ಗಂಗಾಧರ್, ಅಪ್ಸರ್ ಪಾಷಾ, ನೆಹರು ಯುವ ಕೇಂದ್ರದ ಎನ್ ಮಂಜುನಾಥ್, ಎನ್ ಸುರೇಶ್ , ಫಯಾಸ್ ಅಪ್ಸರ್ ಪಾಷಾ, ಬಾಲಾಜಿ , ಬಾಲಗಂಗಾಧರ ತಿಲಕ, ಎಸ್ ಮಂಜುನಾಥ್, ನವೀನ್ ಕುಮಾರ್ , ಸತೀಶ್ , ನಾಸಿರ್ ಫಯಾಜ್ ಅಹಮದ್, ಅರವಿಂದ್, ನಾಮಗೊಂಡ್ಲು ಜಿ.ವಿ ತೇಜಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.

error: