
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯ ಮಲ್ಬಾರ್ ಹಿಲ್ನಲ್ಲಿರುವ ಸರ್ಕಾರಿ ನಿವಾಸ ವರ್ಷಾದ ಬಳಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ನಾಲ್ವರು ಪೊಲೀಸರಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ.
ಉದ್ಧವ್ ಠಾಕ್ರೆಯವರ ನಿವಾಸದ ಬಳಿ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳು, ಓರ್ವ ಅಸಿಸ್ಟಂಟ್ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಓರ್ವ ಪೇದೆಯನ್ನು ನಿಯೋಜಿಸಲಾಗಿತ್ತು. ಈಗ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಕರೊನಾ ವೈರಸ್ ತಗುಲಿದ್ದು ದೃಢಪಟ್ಟಿದೆ. ಅವರೊಂದಿಗೆ ಕರ್ತವ್ಯದಲ್ಲಿದ್ದ ಉಳಿದ ಇಬ್ಬರನ್ನು ಸೇರಿಸಿ, ಒಟ್ಟು ಆರು ಮಂದಿ ಪೊಲೀಸರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಉದ್ಧವ್ ಠಾಕ್ರೆಯವರು ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿಯೇ ಇದ್ದು, ಕೆಲಸದ ನಿಮಿತ್ತ ಆಗಾಗ ಈ ಸರ್ಕಾರಿ ಮನೆಗೆ ಬರುತ್ತಿದ್ದರು.
ದಕ್ಷಿಣ ಮುಂಬೈನಲ್ಲಿರುವ ಈ ಮಲ್ಬಾರ್ ಹಿಲ್ ಏರಿಯಾದಲ್ಲಿ ಮುಖ್ಯಮಂತ್ರಿ ಸೇರಿ ಹಲವು ಸಚಿವರ ನಿವಾಸಗಳಿವೆ.
ಆ ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಎಲ್ಲ ಪೊಲೀಸರ ರಕ್ತ ಮತ್ತು ಗಂಟಲಿನ ದ್ರವದ ಮಾದರಿಯನ್ನು ತೆಗೆದುಕೊಳ್ಳಲಾಗಿದ್ದು, ತಪಾಸಣೆಗೆ ಒಳಪಡಿಸಲಾಗುವುದು ಎಂದು ಹೇಳಲಾಗಿದೆ.
source ; dailyhunt
More Stories
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಕಾಂಗ್ರೆಸ್ ಮುಖಂಡರಿoದ ಪಟಾಕಿ ಸಿಡಿಸಿ ಸಿಹಿ ವಿತರಣೆ
ಪ್ರಜ್ಞಾವಂತರ ವೇದಿಕೆ ಶ್ರೀರಂಗಪಟ್ಟಣ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ