September 14, 2024

Bhavana Tv

Its Your Channel

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 418ಕ್ಕೆ ಏರಿಕೆ, 17 ಮಂದಿ ಸಾವು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಮಂಗಳವಾರ ಹೊಸದಾಗಿ 10 ಜನರಲ್ಲಿ ಸೋಂಕು ಪತ್ತೆಯಾಗಿದೆ.ಈ ಮೂಲಕ ಸೋಂಕಿತರ ಸಂಖ್ಯೆ ಇವತ್ತು 418ಕ್ಕೆ ಏರಿಕೆಯಾಗಿದೆ.ಮತ್ತೊಂದೆಡೆ ಕಲಬುರಗಿಯಲ್ಲಿ 80 ವರ್ಷದ ವೃದ್ಧ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ವಿಜಯಪುರದಲ್ಲಿ ಮೂರು ಮಂದಿ, ಕಲಬುರಗಿಯಲ್ಲಿ 3 ಮೈಸೂರಿನ ನಂಜನಗೂಡಿನಲ್ಲಿ 2, ದಕ್ಷಿಣ ಕನ್ನಡ ಮತ್ತು ಬೆಳಗಾವಿಯಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಅದರಲ್ಲೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಈ ಏಳು ಮಂದಿ ಸೋಂಕಿತರಲ್ಲಿ ಮೂವರು ಮಾತ್ರ 60 ವರ್ಷ ಮೇಲ್ಪಟ್ಟಿನ ವಯಸ್ಸಿನವರಾಗಿದ್ದಾರೆ. ಉಳಿದ ನಾಲ್ವರು 30 ವರ್ಷದೊಳಗಿನವರೇ ಆಗಿದ್ದಾರೆ. ಪ್ರಯೋಗಾಲಯದ ವರದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಉಸಿರಾಟದ ಸಮಸಮ್ಯೆಯಿಂದ ಬಳಲುತ್ತಿದ್ದ 67 ವರ್ಷದ ಮಹಿಳೆಯಲ್ಲಿ ಸೋಂಕಿರುವುದು ಖಚಿತವಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಚಿವ ಸುರೇಶ್ ಕುಮಾರ್ ಅವರು, ರೋಗಿ ಸಂಖ್ಯೆ141 ನಂಬರ್​ನ 80 ವರ್ಷದ ಕಲಬುರ್ಗಿಯ ಪೇಷೆಂಟ್​ಗೆ ಕಳೆದ 4 ವರ್ಷಗಳಿಂದ ಪಾರ್ಕಿನ್ಸನ್ ಇತ್ತು, ಹೀಗಾಗಿ 3 ವರ್ಷದಿಂದ ಹಾಸಿಗೆ ಹಿಡಿದಿದ್ದರು.ಮಂಗಳವಾರ ಅವರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

ಅಲ್ಲದೆ, ಇಲ್ಲಿವರೆಗೆ ಒಟ್ಟು 2773 ಸ್ಯಾಂಪಲ್​ಗಳ ಟೆಸ್ಟ್​ ನಡೆಸಲಾಗಿದ್ದು, ಅದ್ರಲ್ಲಿ 10 ಜನರ ಟೆಸ್ಟ್ ಪಾಸಿಟಿವ್ ಬಂದಿದೆ. 2775 ಜನರ ಟೆಸ್ಟ್ ನೆಗೆಟಿವ್ ಬಂದಿವೆ, ಉಳಿದವರ ರಿಸಲ್ಟ್​ಗಾಗಿ ಕಾಯುತ್ತಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.ಕೆಳದ ಕೆಲವಾರು ದಿನಗಳಿಗೆ ಹೋಲಿಸಿದರೇ ಇದೇಮೊದಲ ಬಾರಿಗೆ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದ ಬಯಲಾಗಿದೆ.

ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ ಸೋಮವಾರಕ್ಕೆ ಹೋಲಿಸಿದರೇ ಮಂಗಳವಾರದ ಸಂಜೆಯ ವೇಳೆಗೆ ಸೋಂಕಿತರ ಸಂಖ್ಯೆ ಇಳಿಕೆ ಕಂಡಿದೆ.ಸೋಮವಾರ ಸಂಜೆಯ ಹೊತ್ತಿಗೆ ರಾಜ್ಯದಲ್ಲಿ 280 ಸಕ್ರಿಯ ಸೋಂಕಿತರು ಇರುವುದಾಗಿ ವರದಿಯಾಗಿತ್ತು. ಕಳೆದ 24 ತಾಸಿನಲ್ಲಿ ಈ ಸಂಖ್ಯೆ 272ಕ್ಕೆ ಇಳಿದಿದೆ.

ಈ ಮಧ್ಯೆ ಅತಿ ಹೆಚ್ಚು ಸಂಕಷ್ಟಕ್ಕೆ ತುತ್ತಾಗಿರುವ ರಾಜಧಾನಿ ಬೆಂಗಳೂರಲ್ಲಿ ಕಳೆದ ಮೂರು ದಿನಗಳಲ್ಲಿ ಒಂದೂ ಹೊಸ ಪ್ರಕರಣ ಪತ್ತೆಯಾಗಿಲ್ಲ. ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ 37ಕ್ಕಿಳಿದರೇ ಗುಣಮುಖರಾದವರ ಸಂಖ್ಯೆ 48ಕ್ಕೇ ಏರಿದ್ದು ನಗರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ 75 ವರ್ಷದ ಪತ್ನಿಹಾಗೂ ಸಹೋದರ ಈಗ ಗುಣಮುಖರಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ. ಮೃತ ವೃದ್ಧನಿಗೆ ಸೋಂಕು ಖಚಿತವಾದ ಬೆನ್ನಲ್ಲೇ ಮನೆಯವರಿಗೆ ಪರೀಕ್ಷೆ ನಡೆಸಲಾಗಿತ್ತು. ಆಗ ಆತನ ಪತ್ನಿ ಮತ್ತು ಸಹೋದರನಿಗೆ ಸೋಂಕು ದೃಢವಾಗಿತ್ತು. ಅವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

14 ದಿನಗಳ ಬಳಿಕ ಎರಡು ಬಾರಿ ಅವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ನೆಗಟಿವ್ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದರು. ಆಸ್ಪತ್ರೆಯಿಂದ ಬಿಡುಗಡೆಗೊಂಡರೂ ಸಹ ಅವರನ್ನು ಮುಂದಿನ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ.

# ಸಸಿ ಕೊಟ್ಟರು; ಕಣ್ಣೀರು ಹಾಕಿ ತೆರಳಿದರು :
ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಗೊಂಡ ಇಬ್ಬರಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪ್ರಕಾಶ ಬಿರಾದಾರ ಸಸಿ ನೀಡಿ, 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನಲ್ಲಿರುವ ತಿಳಿಸಿದರು. ಚಿಕಿತ್ಸೆ ನೀಡಿದ ವೈದ್ಯರು, ನರ್ಸಗಳು, ಆಸ್ಪತ್ರೆಯ ದಾದಿಯರೂ ಅವರನ್ನು ಹಾರೈಸಿದರು. ಈ ವೇಳೆ ಮನೆಗೆ ತೆರಳುತ್ತಿದ್ದ ಇಬ್ಬರೂ, ನಮ್ಮನ್ನು ಕಾಪಾಡಿದ ನಿಮಗೆ ದೇವರು ಚೆನ್ನಾಗಿ ಇಟ್ಟಿರಲಿ ಎಂದು ಕಣ್ಣೀರು ಸುರಿಸಿದರು. ಬಳಿಕ ನಗು ಮಗು ವಿಶೇಷ ಅಂಬ್ಯುಲೆನ್ಸ್ ಮೂಲಕ ಮನೆಗೆ ತೆರಳಿದರು.

ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸರ್ಕಾರ ವಿನಂತಿಸಿದೆ. ಕೆಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ.

source : dailyhunt

error: