November 26, 2023

Bhavana Tv

Its Your Channel

ಜನರ ಸೇವೆಯೇ ಜನಾರ್ಧನ ಸೇವೆ ಎಂಬ ರೀತಿಯಲ್ಲಿ ನಾನು ಕಾರ್ಯವನ್ನು ಮಾಡುತ್ತೇನೆ-ಗುಂಜೂರು ಶ್ರೀನಿವಾಸ್ ರೆಡ್ಡಿ

ಗುಡಬಂಡೆ : ಗುಂಜೂರು ಶ್ರೀನಿವಾಸ್ ರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಾಗೂ ಯುವ ಸೇನೆ ಬಳಗದಿಂದ ಆಶಾ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ವರ್ಗದವರಿಗೆ,ಪಟ್ಟಣ ಪಂಚಾಯಿತಿಯಲ್ಲಿ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡೆಲಾಯಿತು. ಕೊರೋನಾ ವೈರಸ್ ಮಹಾಮಾರಿಯ ದೇಶದ ಆರ್ಥಿಕ ಪರಿಸ್ಥಿತಿ ಕಿತ್ತು ತಿನ್ನುತ್ತಿದೆ ಹಾಗೂ ಜನರ ಜೀವನವನ್ನು ಅಸ್ತವ್ಯಸ್ತ ಮಾಡುತ್ತಿದೆ ಇದನ್ನು ತಡೆಹಿಡಿಯಲು ಪೌರಕಾರ್ಮಿಕರ ಹಾಗೂ ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವೈರಸ್ಸನ್ನು ತಡೆ ಹಿಡಿಯುವ ಕಾರ್ಯಕ್ಕೆ ವೀರ ಯೋಧರಂತೆ ನಾವು ಗೌರವಿಸಬೇಕು. ಕೊರೋನಾ ವೈರಿಯನ್ನು ತಡೆ ಹಿಡಿಯಲು ಕಾರಣರಾದ ಈ ಪೌರ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತರು ತೊಂದರೆಯಲ್ಲಿ ಇರುವಂತಹ ಇವರೆಲ್ಲರಿಗೂ ಒಂದು ಚಿಕ್ಕ ಅಳಿಲು ಸೇವೆಯನ್ನು ಮಾಡಲು ನಾನು ಸಂತಸ ಪಡೆಯುತ್ತೇನೆ ಇನ್ನಷ್ಟು ಮುಂದಿನ ದಿನಗಳಲ್ಲಿ ನಾನು ಈ ಭಾಗದ ಜನರಿಗೆ ಸಹಾಯವನ್ನು ಮಾಡ ಮುಂದಾಗುತ್ತೇನೆ ಎಂದು ಗುಂಜೂರು ಶ್ರೀನಿವಾಸರೆಡ್ಡಿ ಹೇಳಿದರು.

ಕಿಟ್ಟ್ ವಿತರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಗುಂಜೂರು ಶ್ರೀನಿವಾಸ್ ರೆಡ್ಡಿ ಹಾಗೂ ರಾಮಚಂದ್ರ ರೆಡ್ಡಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರು ಅಧ್ಯಕ್ಷರು ಅಪ್ಸರ್ ಪಾಷ ಹಾಗೂ ಅಜ್ಮಲ್ ಖಾನ್, ಮೊಹಮ್ಮದ್ ನಾಸೀರ್ ಹಾಗೂ ಮಂಜೂರ್ ಖಾನ್,ಹಾಗೂ ಶಬ್ಬೀರ್ ಮತ್ತು ಯುವ ಮುಖಂಡರು ಗುಂಜೂರು ಶ್ರೀನಿವಾಸರೆಡ್ಡಿ ಟ್ರಸ್ಟ್ನ ಸೇವಾ ಕಾರ್ಯಕರ್ತರು ಉಪಸ್ಥಿತರಿದ್ದರು.

error: