May 17, 2024

Bhavana Tv

Its Your Channel

ಸ್ಕೂಲ್ ಬ್ಯಾಗ್, ಪಠ್ಯ-ಪುಸ್ತಕ, ಮಾಸ್ಕ್ ಸೇರಿದಂತೆ ಇತರೆ ಸಕಲಕರಣೆಯನ್ನು ನಿಗಧಿ ಮಾಡಿದ ಅಂಗಡಿಗಳಲ್ಲಿ ಖರೀದಿಸಬೇಕು ಎನ್ನುವ ಅಧಿಕಾರ ಶಾಲೆಗಳಿಗೆ ಇಲ್ಲ: ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ.

ಬೆಂಗಳೂರು: ರಾಜ್ಯದ ಖಾಸಗಿ ಶಾಲೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸ್ಕೂಲ್ ಬ್ಯಾಗ್, ಸಮವಸ್ತç, ಪಠ್ಯಪುಸ್ತಕ, ಶೂ, ಮುಂತಾದ ವಸ್ತುಗಳನ್ನು ಶಾಲೆ ನಿಗಧಿ ಮಾಡಿದ ಸ್ಥಳದಲ್ಲಿಯೇ ಖರೀಸುವಂತೆ ಕೆಲವು ಖಾಸಗಿ ಶಾಲೆಗಳು ಪಾಲಕರಿಗೆ ತಿಳಿಸಿದ್ದವು. ಅಲ್ಲದೆ ಕೋವಿಡ್ ೧೯ ಹಿನ್ನಲೆಯಲ್ಲಿ ಮಾಸ್ಕ ಮತ್ತು, ಸ್ಯಾನಿಟೈಜರ್, ಹ್ಯಾಂಡ್ ಗ್ಲೋಸ್ ಕೂಡಾ ನಿದಿರ್ಷ್ಟಪಡಿಸಿದ ಅಂಗಡಿಗಳಲ್ಲಿ ಖರೀದಿಸಬೇಕು ಎಂದು ಕೆಲ ಖಾಸಗಿ ಶಾಲೆಗಳು ಶುಲ್ಕ ಕೂಡಾ ನಿಗಧಿಮಾಡಿದ್ದವು. ಈ ಬಗ್ಗೆ ಮಾದ್ಯಮಗಳಲ್ಲಿ ವರದಿ ಕೂಡಾ ಪ್ರಕಟವಾಗಿತ್ತು. ಇಧೀಗ ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದೆ.

ತಮ್ಮ ಮಕ್ಕಳಿಗೆ ವಸ್ತುಗಳ ಗುಣಮಟ್ಟಕ್ಕನುಗುಣವಾಗಿ ಯವುದೇ ಸ್ಥಳದಲ್ಲಿ ಬೇಕಾದರೆ ಶಿಕ್ಷಣಕ್ಕೆ ಸಂಭದಿಸಿದ ವಸ್ತುಗಳನ್ನು ಖರೀದಿಸುವ ಅಧಿಕಾರ ಇದೆ. ಇದಕ್ಕೆ ಪಾಲಕರು ಸ್ವತಂತ್ರರು. ರಾಜ್ಯ ಉಚ್ಚ ನ್ಯಾಯಲಾಯ ಈ ಬಗ್ಗೆ ಈ ಹಿಂದೆ ತಿರ್ಪು ನೀಡಿದ್ದು, ಯಾವುದೇ ಶಾಲೆಯ ಆಡಳಿತ ಮಂಡಳಿ ಇಂತಹ ವಸ್ತುಗಳನ್ನು ಮಾರಾಟ ಮಾಡುವುದಾಗಲೀ, ಇದೇ ಸ್ಥಳದಲ್ಲಿ ಖರಿದೀಸಿ ಹೇಳುವಂತಿಲ್ಲ ಎನ್ನುವ ಆದೇಶವಿದೆ. ಇದರ ಉಲ್ಲಂಘನೆಗೆ ಮುಂದಾದಲ್ಲಿ ಅಂತಹ ಶಾಲೆಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶ ಹೊರಡಿಸಿದೆ. ತಾಲೂಕಿನ ಶಿಕ್ಷಣಾಧಿಕಾರಿಗಳ ತಮ್ಮ ತಾಲೂಕಿನಲ್ಲಿ ಇಂತಹ ದೂರುಗಳು ಬಂದಲ್ಲಿ ಕೂಡಲೇ ಈ ಬಗ್ಗೆ ಗಮನಹರಿಸಿ ಅಂತಹ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದೆ. ಈ ಬಗ್ಗೆ ಪಾಲಕರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಬಹುದು.

error: