May 15, 2024

Bhavana Tv

Its Your Channel

ರಾಜ್ಯದಲ್ಲಿ ಮುಂದುವರೆದ ಕರೋನಾ ಸ್ಪೋಟ: ಇಂದು ಕೂಡಾ ೨೦೪ ಸೊಂಕಿತರು ಪತ್ತೆ

ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು ೨೦೪ ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೬೨೪೫ಕ್ಕೆ ಏರಿಕೆಯಾಗಿದೆ. ಇವರಲ್ಲಿ ೨೯೭೬ ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ ೩೧೯೫ ಆಗಿದೆ. ಅಲ್ಲದೇ ಬೆಂಗಳೂರು ನಗರದಲ್ಲಿ ಇಬ್ಬರು, ರಾಯಚೂರಿನಲ್ಲಿ ಒಬ್ಬರು ಕೊರೋನಾಗೆ ಬಲಿಯಾಗುವ ಮೂಲಕ ಸಾವಿನ ಸಂಖ್ಯೆ ೭೨ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಯಾದಗಿರಿ -೬೬, ಉಡುಪಿ -೨೨, ಬೆಂಗಳೂರು ನಗರ -೧೭, ಕಲಬುರ್ಗಿ – ೧೬, ರಾಯಚೂರು – ೧೫, ಬೀದರ್ – ೧೪, ಶಿವಮೊಗ್ಗ – ೧೦, ದಾವಣೆಗೆರ -೦೯, ಕೋಲಾರ – ೦೬, ಮೈಸೂರು – ೦೫, ರಾಮನಗರ -೦೫, ವಿಜಯಪುರ – ೦೪, ಬಾಗಲಕೋಟೆ -೦೩, ಉತ್ತರಕನ್ನಡ -೦೩, ದಕ್ಷಿಣ ಕನ್ನಡ -೦೨, ಹಾಸನ -೦೨, ಧಾರವಾಡ -೦೨, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಪ್ಪಳದಲ್ಲಿ ತಲಾ ಒಂದೊoದು ಕೊರೋನಾ ಕೇಸ್ ಪತ್ತೆಯಾಗುವ ಮೂಲಕ ಇಂದು ೨೦೪ ಜನರಿಗೆ ಕೊರೋನಾ ದೃಢಪಟ್ಟಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತ ಇಂದು ೨೦೪ ಪಾಸಿಟಿವ್ ಪ್ರಕರಣಗಳಲ್ಲಿ ೧೫೭ ಪ್ರಕರಣಗಳು ಅಂತರಾಜ್ಯದಿoದ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿದವರಾಗಿದ್ದಾರೆ. ಇನ್ನು ೧೧೪ ಜನ ಇಂದು ಕೊರೋನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

error: