April 26, 2024

Bhavana Tv

Its Your Channel

ತಾರಸಿ ಮಲ್ಲಿಗೆ ಕೃಷಿ ಎಲ್ಲರಿಗೂ ಸಾಧ್ಯ

ಮಣಿಪಾಲ : ತಾರಸಿ ಮಲ್ಲಿಗೆ ಕೃಷಿಯನ್ನು ನಗರವಾಸಿಗಳೂ ಮಾಡಬಹುದು. ದಿನಕ್ಕೆ ಒಂದೆರಡು ಗಂಟೆ ಮಲ್ಲಿಗೆ ಕೃಷಿಯಲ್ಲಿ ತೊಡಗಿಸಿಕೊಂಡರೆ ಉತ್ತಮ ಆದಾಯ ಗಳಿಸಬಹುದು. ಗ್ರಾಮೀಣ ಪ್ರದೇಶಗಲ್ಲಿರುವ ಮಹಿಳೆಯರು ಹೈನುಗಾರಿಕೆಯೊಂದಿಗೆ ಮಲ್ಲಿಗೆ ಕೃಷಿಯನ್ನು ಸುಲಭವಾಗಿ ಮಾಡಬಹುದು ಎಂದು ಪ್ರಗತಿಪರ ಮಲ್ಲಿಗೆ ಕೃಷಿಕರಾದ ಪ್ರೇಮಾ ಪೂಜಾರಿ, ಕುಂಭಾಶಿ ಅವರು ತಿಳಿಸಿದರು.
ಅವರು ಭಾರತೀಯ ವಿಕಾಸ ಟ್ರಸ್ಟ್ ಆಯೋಜಿಸಿದ ಲಾಭದಾಯಕ ತಾರಸಿ ಮಲ್ಲಿಗೆ ಕೃಷಿ ಎಂಬ ಅಂತರ್ಜಾಲ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಪೂರಕವಾಗಿ ಮಾನತಾಡಿದ ಭಾರತೀಯ ವಿಕಾಸ ಟ್ರಸ್ಟಿನ ಹಿರಿಯ ಸಲಹೆಗಾರ ಶ್ರೀಕಾಂತ ಹೊಳ್ಳ ಅವರು ಗ್ರಾಮೀಣ ಪ್ರದೇಶದ ಯುವ ಜನತೆಗೆ ಮಲ್ಲಿಗೆ ಮಾಲೆ ಮಾಡುವ ಕೌಶಲ್ಯವನ್ನು ತಿಳಿಸಿಕೊಡುವ ಶಿಬಿರವೊಂದನ್ನು ಆಯೋಜಿಸುವ ಭರವಸೆಯಿತ್ತರು. ಬಿವಿಟಿ ಪ್ರೋಗ್ರಾಂ ಆಫೀಸರ್ ಪ್ರತಿಮಾ ಪ್ರಸ್ಥಾವನೆಗೈದರು. ಕಾರ್ಯಕ್ರಮ ಸಂಯೋಜಕರಾದ ರಾಘವೇಂದ್ರ ಆಚಾರ್ಯ ಸ್ವಾಗತಿಸಿ ಮಾನವಸಂಪನ್ಮೂವ ವಿಭಾಗದ ಸಿಬ್ಬಂದಿ ಗೀತಾ ರಾವ್ ವಂದಿಸಿದರು. ಯೋಜನಾಧಿಕಾರಿ ಅರುಣ್ ಪಟವರ್ಧನ್ ಕಾರ್ಯಕ್ರಮ ನಿರೂಪಣೆಗೈದರು.

error: