April 26, 2024

Bhavana Tv

Its Your Channel

ಹಿಂದೂ ಧರ್ಮದಾಯ ದತ್ತಿ ಇಲಾಖಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರಿಂದ ರಾಜ್ಯಾದ್ಯಂತ ದೇವಳಗಳಲ್ಲಿ ವಿವಿಧ ಪೂಜಾ ಕಾರ್ಯಕ್ಕೆ ಹುಟ್ಟೂರಿನಿಂದ ಚಾಲನೆ

ಕೋಟ: ಕೋವಿಡ್ ಹಿನ್ನಲ್ಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ದೇವಾಲಯಗಳಲ್ಲಿ ಪೂಜಾ ಕಾರ್ಯನಿಷೇದಿಸಿ ಎಪ್ರಿಲ್ ನಲ್ಲಿ ಆದೇಶ ಹೊರಡಿಸಿದ ರಾಜ್ಯ ಸರಕಾರ ಇದೀಗ ಎಲ್ಲಾ ಪೂಜೆಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಧಾರ್ಮಿಕ ಇಲಾಖೆಯ ಮೂಲಕ ಅನುವುಮಾಡಿಕೊಟ್ಟ ಹಿನ್ನಲ್ಲೆಯಲ್ಲಿ ಭಾನುವಾರದಿಂದ ಹಿಂದೂ ಧರ್ಮದಾಯದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತನ್ನ ಹುಟ್ಟೂರು ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ದಂಪತಿ ಸಮೇತವಾಗಿ ಬಂದು ಚಾಲನೆ ನೀಡಿದರು ಇದರೊಂದಿಗೆ ಕೆಲ ತಿಂಗಳುಗಳಿAದ ಗೊಂದಲದಲ್ಲಿ ಭಕ್ತರಿಗೆ ನಿರಾಳತೆ ಸಿಕ್ಕಂತ್ತಾಗಿದೆ.
ಈ ಸಂದರ್ಭದಲ್ಲಿ ಜೋಗಿ ಅರ್ಚಕರು ಪೂಜಾ ಕಾರ್ಯ ನೆರವೆರಿಸಿ ಸಚಿವರನ್ನು ಗೌರವಿಸಿ ಪ್ರಸಾದವಿತರಿಸಿದರು. ದೇವಳದವ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಹಾಗೂ ಸಚಿವರನ್ನು ಬರಮಾಡಿಕೊಂಡು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ರಾಜ್ಯದಲ್ಲಿರುವ ೩೪ಸಾವಿರ ಮಿಕ್ಕಿ ದೇವಳಗಳು ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು ಇದೀಗ ಮುಖ್ಯ ಮಂತ್ರಿಗಳ ನಿರ್ದೇಶನದಂತೆ ಪೂಜಾ ಕೈಂಕರ್ಯಕ್ಕೆ ಅವಕಾಶ ನೀಡಲಾಗಿದೆ. ಇದರೊಂದಿಗೆ ಭಕ್ತರಿಗೆ ನೆಮ್ಮದಿಯ ಪೂಜಾಸೇವೆ ಮುಕ್ತವಾಗಿದೆ. ಇಂದು
ನನ್ನೂರ ದೇವಳಗಳಲ್ಲಿ ಪೂಜೆ ಸಲ್ಲಿಸಿ ಇಡೀ ವಿಶ್ವಕ್ಕೆ ತಲೆದೂರಿರುವ ಮಹಾಖಾಯಿಲೆಯಿಂದ ಮುಕ್ತಿಗೊಳಿಸಲು ಪ್ರಾರ್ಥಿಸಿದ್ದೇನೆ.
ಮುಖ್ಯ ಮಂತ್ರಿ ಬದಲಾವಣೆ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆ ಮಾತನಾಡಿ ಯಾರು ಏನು ಹೇಳಿದ್ದಾರೆ ಏನು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆ ಅವರವರ ಭಾವನೆಗೆ ತಕ್ಕಂತೆ ಉತ್ತರಿಸಿದ್ದಾರೆ,ಭಾರತೀಯ ಜನತಾಪಾರ್ಟಿಯ ಸಾಮಾನ್ಯ ಕಾರ್ಯಕರ್ತನಾಗಿ ಪಾರ್ಟಿ ನಿರ್ದೇಶನದಂತೆ ಕೆಲಸ ನಿರ್ವಹಿಸುವುದು ನನ್ನ ಕರ್ತವ್ಯವಾಗಿದೆ.ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ಸಚಿವರ ಪತ್ನಿ ಶಾಂತಾ ಎಸ್ ಪೂಜಾರಿ, ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಚಂದ್ರ ಪೂಜಾರಿ, ಎಂ.ಸುಬ್ರಾಯ ಆಚಾರ್ಯ, ಸುಶೀಲ ಸೋಮಶೇಖರ್, ಸುಂದರ್ ಕೆ,ರಾಮದೇವ ಐತಾಳ್, ಉಪಸ್ಥಿತರಿದ್ದರು

error: