March 21, 2023

Bhavana Tv

Its Your Channel

ಕೃಷ್ಣನಗರಿಯಲ್ಲಿ ಶತಕ ಬಾರಿಸಿದ ಕರೋನಾ ಸೊಂಕಿತರ ಸಂಖ್ಯೆ ; ಒಂದೇ ದಿನ ೩೨ ಹೊಸ ಸೊಂಕಿತರು.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೧೦೮ ಕ್ಕೆ ಏರಿಕೆ


ಉಡುಪಿ: ಮೂರನೇ ಲಾಕ್ ಡೌನ್ ಮುಕ್ತಾಯದ ಬಳಿಕ ಗ್ರೀನ್ ಜಿಲ್ಲೆಯತ್ತ ಇದ್ದ ಉಡುಪಿಯಲ್ಲಿ ಇದೀಗ ಕೋವಿಡ್-೧೯ ಸಂಕಷ್ಟ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅನ್ಯರಾಜ್ಯಗಳಿಂದ ಬಂದ ಜನರು ಗಂಟಲು ದ್ರವ ಪರೀಕ್ಷೆ ಪ್ರಮಾಣ ಹೆಚ್ಚುತ್ತಿದ್ದಂತೆ ಸೋಂಕು ದೃಢವಾಗುತ್ತಿರುವ ಸಂಖ್ಯೆಯೂ ಏರಿಕೆ ಕ್ರಮದಲ್ಲಿದೆ.

ಜಿಲ್ಲೆಯಲ್ಲಿ ಇಂದು ೩೨ ಮಂದಿಗೆ ಕೋವಿಡ್-೧೯ ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ೧೦೮ ಕ್ಕೆ ಏರಿಕೆಯಾಗಿದೆ.ಇಂದು ಬೆಳಿಗ್ಗೆ ೧೬ ಸೋಂಕಿತರಲ್ಲಿ ಇಬ್ಬರು ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಇವರಿಬ್ಬರು ದುಬೈನಿಂದ ಆಗಮಿಸಿದ್ದರು. ಉಳಿದ ೧೪ ಮಂದಿಯೂ ಮಹಾರಾಷ್ಟ್ರದಿಂದ ಪ್ರಯಾಣಿಸಿದವರಾಗಿದ್ದಾರೆ. ಮಧ್ಯಾಹ್ನದ ಬಳಿಕ ಮತ್ತೆ ಹೊಸದಾಗಿ ೧೬ ಸೊಂಕಿತರು ಪತ್ತೆಯಾಗಿದ್ದು ಇನ್ನಷ್ಟು ವರದಿಗಳು ಬರಬೇಕಿದ್ದು ಸೊಂಕಿತರ ಸಂಪರ್ಕಯಾದಿ ಇದ್ದವರನ್ನು ಪತ್ತೆ ಹಚ್ಚುವಿಕೆ ಮುಂದುವರೆದಿದೆ.

ಜಿಲ್ಲೆಯ ಕಳೆದ ಹತ್ತು ದಿನಗಳಿಂದ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರವಿವಾರ ೨೩ ಹೊಸ ಸೋಂಕು ಪ್ರಕರಣ ವರದಿಯಾಗಿತ್ತು. ಇಂದು ಹೊಸದಾಗಿ ೩೨ ಪ್ರಕರಣ ಬೆಳಕಿಗೆ ಬಂದಿದ್ದು ಅದರಲ್ಲೂ ಮೂವರು ಪೊಲೀಸ್ ಸಿಬ್ಬಂದಿಗೆ ಸೋಂಕು ತಾಗಿರುವುದು ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ

About Post Author

error: