ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೋವಿಡ್-೧೯ ಸಂಕಷ್ಟ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅನ್ಯರಾಜ್ಯಗಳಿಂದ ಬಂದ ಜನರು ಗಂಟಲು ದ್ರವ ಪರೀಕ್ಷೆ ಪ್ರಮಾಣ ಹೆಚ್ಚುತ್ತಿದ್ದಂತೆ ಸೋಂಕು ದೃಢವಾಗುತ್ತಿರುವ ಸಂಖ್ಯೆಯೂ ಏರಿಕೆ ಕ್ರಮದಲ್ಲಿದೆ.
ಜಿಲ್ಲೆಯಲ್ಲಿ ಇಂದು ೧೬ ಮಂದಿಗೆ ಕೋವಿಡ್-೧೯ ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ೯೨ ಕ್ಕೆ ಏರಿಕೆಯಾಗಿದೆ.
ಇಂದಿನ ೧೬ ಸೋಂಕಿತರಲ್ಲಿ ಇಬ್ಬರು ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಇವರಿಬ್ಬರು ದುಬೈನಿಂದ ಆಗಮಿಸಿದ್ದರು. ಉಳಿದ ೧೪ ಮಂದಿಯೂ ಮಹಾರಾಷ್ಟ್ರದಿಂದ ಪ್ರಯಾಣಿಸಿದವರಾಗಿದ್ದಾರೆ.
ಜಿಲ್ಲೆಯ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರವಿವಾರ ೨೩ ಹೊಸ ಸೋಂಕು ಪ್ರಕರಣ ವರದಿಯಾಗಿತ್ತು. ಅದರಲ್ಲೂ ಮೂವರು ಪೊಲೀಸ್ ಸಿಬ್ಬಂದಿಗೆ ಸೋಂಕು ತಾಗಿರುವುದು ಜನರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿತ್ತು
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ