September 25, 2023

Bhavana Tv

Its Your Channel

ಉಡುಪಿಯಲ್ಲಿ ಎರಡು ಮೊಬೈಲ್ ಕೋವಿಡ್ ೧೯ ಮಾದರಿ ಸಂಗ್ರಹ ಘಟಕಕ್ಕೆ ಚಾಲನೆ.

ಉಡುಪಿ; ಜಿಲ್ಲಾ ಸರಕಾರಿ ನೌಕರರ ಸಂಘದ ನೇತೃತ್ವದಲ್ಲಿ ಗೋವಾದ ಮಣಿಪಾಲ್ ಇನ್‌ಲಿಗಾಡೊ ಮಾಲೀಕ ಎಮ್ ಇಬ್ರಾಹಿಮ್, ನೂರಿ ಸೀ ಪುಡ್ ನಾಗೂರು ಅಬ್ದುಲ್ ರೆಹಮಾನ್, ನೂರಿ ಸೀ ಪುಡ್ ನಾಗೂರು ಮಾಲಕರಾದ ನಿತಿನ್ ಶೆಟ್ಟಿ ಗೋವಾ ಇವರುಗಳ ಸಹಕಾರದೊಂದಿಗೆ ಉಡುಪಿ ತಾಲೂಕು ಮತ್ತು ಕಾರ್ಕಳ ತಾಲೂಕಿಗೆ ಎರಡು ಮೊಬೈಲ್ ಕೋವಿಡ್-೧೯ ಮಾದರಿ ಸಂಗ್ರಹ ಘಟಕವನ್ನು ಬುಧವಾರ ಮಣಿಪಾಲದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ರಘುಪತಿ ಭಟ್ ಮತ್ತು ಜಿಲ್ಲಾಧಿಕಾರಿ ಜಿ.ಜಗದೀಶ್‌ರವರು ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾದ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಶೇರಿಗಾರ್,ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಡಿ.ಎಚ್.ಓ ಸುದೀರ್ ಚಂದ್ರ ಸೂಡ,ನೋಡೆಲ್ ಅಧಿಕಾರಿ ಪ್ರಶಾಂತ್ ಭಟ್,ಉಪಾಧ್ಯಕ್ಷರಾದ ಪ್ರಶಾಂತ ಶೆಟ್ಟಿ, ರಾಜ್ಯ ಪರಿಷತ್ ಸದಸ್ಯರಾದ ಕಿರಣ್ ಹೆಗ್ಡೆ,ಕೋಶಾಧಿಕಾರಿ ಚಂದ್ರಶೇಖರ್, ದಯಾನಂದ್,ರವಿ ಪೂಜಾರಿ ಕುಂದಾಪುರ ತಾಲೂಕಿನ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ದಿವಾಕರ ಖಾರ್ವಿ ಗಂಗೋಳ್ಳಿ ಉಪಸ್ಥಿತರಿದ್ದರು

error: