April 22, 2021

Bhavana Tv

Its Your Channel

ವಿವಿಧ ಸಂಘ-ಸOಸ್ಥೆಗಳ ಸಹಯೋಗದೊಂದಿಗೆ ಕಾರ್ಕಳದಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ.

ಕಾರ್ಕಳ: ನಗರ ಪೊಲೀಸ್ ಠಾಣೆ ಇಲಾಖೆ ಕಾರ್ಕಳ, ಯುವವಾಹಿನಿ ಘಟಕ (ರೀ) ಕಾರ್ಕಳ, ರೋಟರಿ ಆನ್ಸ್ ಕ್ಲಬ್ ಕಾರ್ಕಳ ಮತ್ತು ರೋಟರೆಕ್ಟ್ ಕ್ಲಬ್ ಕಾರ್ಕಳ ಇವರ ನೇತೃತ್ವದಲ್ಲಿ ರಸ್ತೆ ಸುರಕ್ಷಾ ಸಪ್ತಾಹ -೨೦೨೧ ನಡೆಯಿತು.
ದಿ ೩೦-೦೧-೨೦೨೧ ರಂದು ಬೆಳಿಗ್ಗೆ ೧೦ ಗಂಟೆಗೆ ರಸ್ತೆ ಸುರಕ್ಷೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಅನಂತ ಶಯನ ವೃತ್ತದಿಂದ ಬಂಡಿ ಮಠ ದ ವರೆಗೆ ಬ್ರಹತ್ ವಾಹನ ಜಾಥಾ ವಿವಿಧ ಸಂಘ ಸಂಸ್ಥೆಗಳ ಜಂಟಿಯಾಗಿ ನಡೆಯಿತು. ಜಾಥಾ ಗೆ ರೋ ತುಕಾರಾಂ ನಾಯಕ್ ದಂಪತಿ ಚಾಲನೆ ನೀಡಿದರು. ಜಾಥಾ ದಲ್ಲಿ ರಸ್ತೆ ಸುರಕ್ಷೆ ಬಗ್ಗೆ ಘೋಷಣೆ ಯನ್ನು ಸಾರಿ ಜಾಗ್ರತಿ ಮೂಡಿಸಲಾಯಿತು. ಜಾಥಾದ ಸಮಾರೋಪ ಸಮಾರಂಭದಲ್ಲಿ ಕಾರ್ಕಳದ ನಾಗರಿಕರಿಗೆ ರಸ್ತೆ ನಿಯಮಗಳು ಹಾಗೂ ಜಾಗೃತಿಗಳು ತಿಳಿಯಬೇಕೆನ್ನುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಮಾಡಿ ಜನರಲ್ಲಿ ಮುಂದೆ ಆಗುವ ಪರಿಣಾಮದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ನಾಗರಿಕರು ಇಲಾಖೆಯ ಜೊತೆ ಸಹಕರಿಸಬೇಕೆಂದು ಉಪನಿರೀಕ್ಷಕರ ಅಧಿಕಾರಿ ಕಾರ್ಕಳ ಠಾಣೆ ಸಂಪತ್ ಕುಮಾರ್ ಅವರು ಸಂದೇಶವನ್ನು ಸಾರಿದರು. ಹಿರಿಯರು-ಕಿರಿಯರು ಎನ್ನುವ ಭೇದಭಾವ ಇಲ್ಲದೆ ಎಲ್ಲರೂ ರಸ್ತೆಯ ನಿಯಮಗಳನ್ನು ಸರಿಯಾಗಿ ಪಾಲಿಸಿದಲ್ಲಿ ಇಂಥ ಎಷ್ಟು ಅವಘಡಗಳನ್ನು ತಪ್ಪಿಸಬಹುದು ಎಂದು ನಗರ ಠಾಣಾ ಕಾರ್ಕಳ ಎಸ್. ಐ ಮಧು. ಬಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರೋ. ರಮಿತ ಶೈಲೆಂದ್ರ ರಾವ್, ಕಾರ್ಯದರ್ಶಿ ಆನ್ ಸುಮಾ ನಾಯಕ್ ಯುವವಾಹಿನಿ ಘಟಕದ ಅಧ್ಯಕ್ಷ ಗಣೇಶ್ ಸಾಲ್ಯಾನ್, ಕಾರ್ಕಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಹಾಗೂ ಯುವವಾಹಿನಿ ಸಂಘದ ಸದಸ್ಯರು, ಸ್ವಚ್ಛ ಬ್ರಿಗ್ರೇಡ್ ನ ಸದಸ್ಯರು ಹಾಗೂ ಆಟೋ ಚಾಲಕರು ಭಾವಹಿಸಿದ್ದರು. ನೂರಾರು ದ್ವಿಚಕ್ರವಾಹನಗಳ ಜೊತೆ, ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿ ಗೊಂಡಿತ್ತು. ಕಾರ್ಯಕ್ರಮವನ್ನು ಶಶಿಧರ್ ಅವರು ಸ್ವಾಗತಿಸಿ ,ತಾರಾನಾಥ ಕೋಟ್ಯಾನ್ ಅವರು ವಂದಿಸಿ ಸುಬ್ರಮಣ್ಯ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

error: