April 26, 2024

Bhavana Tv

Its Your Channel

ಹಿಂದಿ ದಿವಸ್: ಸನ್ಮಾನ, ಬಹುಮಾನ ವಿತರಣೆ

ವರದಿ: ಅರುಣ ಭಟ್ ಕಾರ್ಕಳ

ಕಾರ್ಕಳ: ಮಾತೃ ಭಾಷೆಯ ಜೊತೆಗೆ ಪ್ರಪಂಚದೆಲ್ಲೆಡೆ ಅಧಿಕವಾಗಿ ಬಳಸಲ್ಪಡುವ ಹಿಂದಿ ಭಾಷೆಯನ್ನು ವೃದ್ಧಿಗೊಳಿಸಲು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರನ್ನು ಸನ್ಮಾನಿಸುವುದರ ಮೂಲಕ ಹಿಂದಿ ದಿವಸ್ ಆಚರಣೆ ಅರ್ಥಪೂರ್ಣವಾಗುವುದೆಂದು ಸಂತ್ರ ಲೋರೆನ್ಸ್ ಪ್ರೌಢಶಾಲಾ ಹಿಂದಿ ಶಿಕ್ಷಕಿ ಜೆನಿಫರ್ ಆಗ್ನೆಸ್ ಡಿಸಿಲ್ವರವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಉಪನಿರ್ದೇಶಕರಾದ ಎನ್ ಎಚ್ ನಾಗೂರರವರು ೨೦೨೧ನೇ ಸಾಲಿನ ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಹಿಂದಿಯಲ್ಲಿ ನೂರು ಅಂಕ ಗಳಿಸಿದ ವಿದ್ಯಾರ್ಥಿನಿ ಕು. ಕಾವ್ಯಳನ್ನು ಸನ್ಮಾನಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿ ವಿದ್ಯಾರ್ಥಿಗಳಿಗೆ ಹಿತವಚನಗೈದರು.
ಶಾಲಾ ಸಂಚಾಲಕರಾದ ರೆವರೆಂಡ್ ಫಾದರ್ ಆಲ್ಟನ್ ಡಿಸೋಜರವರು ಸಭಾಧ್ಯಕ್ಷರಾಗಿದ್ದು ಹಿಂದಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿ ವಿದ್ಯಾರ್ಥಿಗಳಿಗೆ ಹಿತವಚನಗೈದರು.

ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೆಸಿಲ್ಲ ಮಿನೇಜಸ್, ಬಿ.ಆರ್.ಪಿ. ಸಂತೋಷ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳು ಹಿಂದಿ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭ ಮಾಡಿ ತರಗತಿವಾರು ಹಿಂದಿ ದೇಶಭಕ್ತಿಗಳ ನೃತ್ಯ ಮಾಡಿ ನೆರೆದವರನ್ನು ಮನರಂಜಿಸಿದರು. ಶಾಲಾ ಎಲ್ಲ ಶಿಕ್ಷಕರು, ಶಿಕ್ಷಕೇತರರು, ವಿದ್ಯಾರ್ಥಿಗಳು ಹಾಗೂ ಮಾಧ್ಯಮದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಹತ್ತನೇ ತರಗತಿಯ ದಿಶಾ ಕಾರ್ಯಕ್ರಮವನ್ನು ನಿರೂಪಿಸಿ, ಒಂಭತ್ತನೆಯ ತರಗತಿಯ ಮೇಲಿಶಾ ನೊರೊನ್ಹಾ ವಂದಿಸಿದರು.

error: