May 19, 2024

Bhavana Tv

Its Your Channel

ದೇಶದ ಸಂಸ್ಕೃತಿ ಹಾಗೂ ದೇವಾಲಯಗಳನ್ನು ಧ್ವಂಸಗೈದ ಜಿಹಾದಿಗಳನ್ನು ಮಟ್ಟ ಹಾಕಬೇಕಿದೆ: ಸಾಧ್ವಿ ಸರಸ್ವತಿ

ಕಾರ್ಕಳ: ಲಕ್ಷಾಂತರ ವರ್ಷಗಳ ಇತಿಹಾಸವಿರುವ ಸನಾತನ ಹಿಂದೂ ಧರ್ಮದ ಪ್ರತೀಕವಾಗಿದ್ದ ನಮ್ಮ ದೇವಾಲಯಗಳು ಹಾಗೂ ಸಂಸ್ಕೃತಿ ವಿದೇಶಿ ಜಿಹಾದಿಗಳ ಆಕ್ರಮಣದಿಂದ ನಾಶವಾಗಿದೆ, ಲವ್ ಜಿಹಾದ್, ಗೋಹತ್ಯೆ,ಭಯೋತ್ಪಾದನೆ ಮುಂತಾದ ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿರುವ ಧರ್ಮಾಂಧ ಜಿಹಾದಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಹೋರಾಟ ಅತ್ಯಗತ್ಯವಾಗಿದೆ ಎಂದು ಉತ್ತರಪ್ರದೇಶದ ಸಾಧ್ವಿ ಸರಸ್ವತಿ ಹೇಳಿದ್ದಾರೆ.
ಅವರು ಭಾನುವಾರ ವಿಶ್ವ ಹಿಂದೂಪರಿಷತ್ ಹಾಗೂ ಬಜರಂಗದಳದ ವತಿಯಿಂದ ಕಾರ್ಕಳ ಗಾಂಧೀಮೈದಾನದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಕೋಟ್ಯಾಂತರ ಹಿಂದೂಗಳ ಅಸ್ಮಿತೆಯಾಗಿರುವ ರಾಮ ಮಂದಿರದ ನಿರ್ಮಾಣವಾಗುತ್ತಿದ್ದು ,ಗೋಹತ್ಯೆ ನಿಷೇಧ ಕಾಯಿದೆ ಜಾರಿಯಾಗಬೇಕಿದೆ ಎಂದರು. ಗೋಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ, ತಾಯಿ ಒಂದು ಮಗುವಿಗೆ ಹಾಲು ಉಣಿಸಬಹುದು ಆದರೆ ಗೋಮಾತೆ ತನ್ನ ಜೀವಿತಾವಧಿಯಲ್ಲಿ ಎಲ್ಲರಿಗೂ ಹಾಲು ಉಣಿಸುತ್ತಾಳೆ ಅಂತಹ ಗೋಮಾತೆಯನ್ನು ನಾವು ರಕ್ಷಣೆ ಮಾಡಬೇಕಿದೆ. ಲಕ್ಷಾಂತರ ರೂ ಖರ್ಚು ಮಾಡಿ ಮೊಬೈಲ್,ಕಂಪ್ಯೂಟರ್ ಖರೀದಿಸುತ್ತೇವೆ ಇದರ ಜತೆಗೆ ನಮ್ಮ ಮನೆಯ ಗೋವಿನ ರಕ್ಷಣೆಗೆಗಾಗಿ ೧ ಸಾವಿರ ರೂಪಾಯಿಯ ತಲವಾರು ಖರೀದಿ ಮಾಡಲು ಕಷ್ಟವೇ ಎಂದು ಪ್ರಶ್ನಿಸಿದರು.
ಧರ್ಮ ಸಂರಕ್ಷಣೆ ಹಾಗೂ ರಾಷ್ಟçರಕ್ಷಣೆ ಕೇವಲ ಪುರುಷರ ಜವಾಬ್ದಾರಿಯಲ್ಲ ಮಹಿಳೆಯರೂ ಕೂಡ ಈ ನಿಟ್ಟಿನಲ್ಲಿ ಹೋರಾಡಬೇಕಿದೆ,ಮಹಿಳೆಯರು ತಮ್ಮಲ್ಲಿರುವ ದುರ್ಗಾಶಕ್ತಿಯನ್ನು ಜಾಗೃತಗೊಳಿಸಿ ತಲವಾರು ಹಿಡಿದು ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕಿದೆ ಎಂದರು. ಹಿಂದೂಗಳ ಸಂಖ್ಯೆ ಕ್ಷೀಣಿಸಲು ಲವ್ ಜಿಹಾದ್ ಷಡ್ಯಂತ್ರ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಮಕ್ಕಳಿಗೆ ಧರ್ಮ ಶಿಕ್ಷಣದ ಅಗತ್ಯತೆಯಿದ್ದು, ಮಕ್ಕಳು ಭಜನೆ ಸಂಕೀರ್ತನೆಯ ಮೂಲಕ ಸನಾತನದ ಧರ್ಮ ರಕ್ಷಣೆಗೆ ಕಟಿಬದ್ದರಾಗುವಂತೆ ಪೋಷಕರು ಜವಾಬ್ದಾರಿ ವಹಿಸಬೇಕೆಂದು ಕರೆ ನೀಡಿದರು.

ವರದಿ: ಅರುಣ ಭಟ್ ಕಾರ್ಕಳ

error: