May 16, 2024

Bhavana Tv

Its Your Channel

ಅತ್ತೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಕಾರ್ಕಳ ನಿಟ್ಟೆ ಗ್ರಾಮದ ಅತ್ತೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಶ್ರೀ ದೇವರಿಗೆ ಸ್ವರ್ಣ ಕವಚ ಸಮರ್ಪಣೆ ಹಾಗೂ ಶ್ರೀ ಮನ್ಮಹಾರ ರಥೋತ್ಸವ ಸೋಮವಾರ ದಿಂದ ಗುರುವಾರದವರೆಗೆ ನಡೆಯಿತು.

ಮಹಾ ಅನ್ನಸಂತರ್ಪಣೆ ,ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳ ವರ ಶುಭ ಆಶೀರ್ವಾದದೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ಹೂವಿನಪೂಜೆ, ರಂಗಪೂಜೆ, ಪಲ್ಲಕಿ ಬಲಿ,ನರ್ತನ ಬಲಿ, ರಥೋತ್ಸವ ಕಟ್ಟೆ ಪೂಜೆ, ಓಕುಳಿ, ಮುಂಡಿಲತಾಯಿ ದೈವದ ನೇಮೋತ್ಸವ ವಿಜೃಂಭಣೆಯಿAದ ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮ ಹರಿಕಥೆ , ಭಜನಾ ಮಂಡಳಿಯ ವತಿಯಿಂದ ಭಜನೆ ನಡೆಯಿತು..

ಕಾರ್ಕಳ ಉತ್ಸವಕ್ಕೆ ಆಗಮಿಸಿದ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ಕುಣಿತ ಗಳು ಗ್ರಾಮೀಣ ಪ್ರದೇಶದ ಜನರ ಕಣ್ಮನ ಸೆಳೆಯುವಂತಾಯಿತು. ಜಾತ್ರಾ ಮಹೋತ್ಸವಕ್ಕೆ ಬಂದ ಭಕ್ತಾಭಿಮಾನಿಗಳು ಕಾರ್ಯಕ್ರಮವನ್ನು ನೋಡಿ ಆನಂದಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಶವಂತ ಸರದೇಶಪಾಂಡೆ ನಿರ್ದೇಶಕರು ವೃತ್ತಿರಂಗಭೂಮಿ ರಂಗಾಯಣ ದಾವಣಗೆರೆ ಇವರು ತಂಡಗಳ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದರು.ದೇವರ ಸನ್ನಿಧಾನದಲ್ಲಿ ಜಾತ್ರಾ ಸಮಯದಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭೇಟಿ ನೀಡಿ ಗಂಧಪ್ರಸಾದ ಸ್ವೀಕರಿಸಿ ,ದೇವರಿಗೆ ಸ್ವರ್ಣಕವಚಾಭರಣ ಸಮರ್ಪಣೆ ಮಾಡಿದ ಶ್ರೀ ಎ.ಶ್ರೀನಿವಾಸ ಆಚಾರ್ಯಪ್ರಧಾನ ಅರ್ಚಕರು ಹಾಗೂ ಅವರ ಧರ್ಮ ಪತ್ನಿಯವರಿಗೆ ಹಾಗೂ ಇನ್ನಿತರ ದಾನಿಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರು ಮನ್ಮಥ ಜೆ.ಶೆಟ್ಟಿ, ವ್ಯವಸ್ಥಾಪನ ಸಮಿತಿ,ಸಚಿವ ವಿ.ಸುನಿಲ್ ಕುಮಾರ್,ಗಾಯತ್ರಿ ಕ್ಯಾಶು ಎಕ್ಸ್ಪೊಟ್ಸ್ ಮಾಲಕ ಬೋಳ ಪ್ರಭಾಕರ ಕಾಮತ್, ಬೋಳ ಶ್ರೀನಿವಾಸ ಕಾಮತ್,ಬಲಿಪ ಗುತ್ತು ವಿಠ್ಠಲ ಶೆಟ್ಟಿ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು,ವ್ಯವಸ್ಥಾಪನಾ ಸಮಿತಿಯ ಸದಸ್ಯರು ಊರ ಪರ ಊರ ಭಕ್ತಾಧಿಗಳು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮಗಳು ಪುತ್ತೂರು ಶ್ರೀ ಶತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಕಿಲ್ಲ ಬೆಟ್ಟು ಬಾಲಕೃಷ್ಣ ಹೆಗ್ಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಯಶಸ್ವಿಯಾಗಿದ್ದರು

ವರದಿ: ಅರುಣ ಭಟ್ ಕಾರ್ಕಳ

error: