May 19, 2024

Bhavana Tv

Its Your Channel

ಏಪ್ರಿಲ್ 6 ಬಿಜೆಪಿ ಸ್ಥಾಪನಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕಾರ್ಕಳ ಮಂಡಲ ಬಿಜೆಪಿ ನಿರ್ಧಾರ

ಕಾರ್ಕಳ : ಏಪ್ರಿಲ್ 06 ಭಾರತೀಯ ಜನತಾ ಪಕ್ಷದ ಸ್ಥಾಪನಾ ದಿನಾಚರಣೆಯಾಗಿದ್ದು ಈ ದಿನವನ್ನು ವಿಶೇಷವಾಗಿ ಆಚರಿಸಲು ಕಾರ್ಕಳ ಮಂಡಲ ಬಿಜೆಪಿ ನಿರ್ಧರಿಸಿದೆ.
ಕಾರ್ಕಳದ ಇತಿಹಾಸದಲ್ಲೇ ವಿಧಾನಸಭಾ ಕ್ಷೇತ್ರದ 209 ಬೂತ್‌ಗಳಲ್ಲಿ ಏಕಕಾಲಕ್ಕೆ ಪ್ರತೀ ಬೂತ್ ಅಧ್ಯಕ್ಷರ ಮನೆಯಲ್ಲಿ ಭಾರತೀಯ ಜನತಾ ಪಕ್ಷದ ಧ್ವಜಾರೋಹಣ ನಡೆಯಲಿದ್ದು ಪಕ್ಷದ ಶ್ರದ್ಧೆಯ ಕಾರ್ಯಕರ್ತರು ಕಾರ್ಯಕ್ರಮದ ಪೂರ್ವಸಿದ್ಧತೆಯನ್ನು ಅಚ್ಚಕಟ್ಟಾಗಿ ನಡೆಸಿದ್ದಾರೆ. ಕ್ಷೇತ್ರಾದ್ಯಂತ ಸುಮಾರು 25 ಸಾವಿರಕ್ಕೂ ಮಿಕ್ಕಿ ಬಿಜೆಪಿ ಕಾರ್ಯಕರ್ತರ ಪಡೆ ಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲಿದೆ.
ಪಕ್ಷದ ಹಿತೈಷಿಗಳು, ಪರಿವಾರದ ಕಾರ್ಯಕರ್ತರು, ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಲಿದ್ದಾರೆ ಎಂದು ಕಾರ್ಕಳ ಮಂಡಲ ಅಧ್ಯಕ್ಷರಾದ ಮಹಾವೀರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

.

error: