May 3, 2024

Bhavana Tv

Its Your Channel

ಕಾರ್ಕಳದಲ್ಲಿ ಶ್ರೀ ಶಂಕರೋತ್ಸವ ಸಮಾರೋಪ

ಕಾರ್ಕಳ:- ಶ್ರೀ ಶಂಕರ ಸೇವಾಸಮಿತಿ, ಕಾರ್ಕಳ ಇದರಆಶ್ರಯದಲ್ಲಿ ಶ್ರೀಶ್ರೀ ಜಗದ್ಗುರು ಶಂಕರಾರ‍್ಯ ಮಹಾಸಂಸ್ಥಾನ ದಕ್ಷೆಗಾಮ್ನಾಮ ಶ್ರೀ ಶಾರದಾ ಪೀಠ, ಶೃಂಗೇರಿ ಹಾಗೂ ಶ್ರೀ ಶಂಕರತತ್ವ ಪ್ರಸಾರ ಅಭಿಯಾನ ಸಮಿತಿ, ಕಾರ್ಕಳ ಇದರ ಸಹಯೋಗದೊಂದಿಗೆ ಶಂಕರ ಜಯಂತಿ ಉತ್ಸವದ ಸಮಾರೋಪ ಸಮಾರಂಭವು ಭಾನುವಾರ ಕಾರ್ಕಳದ ಶ್ರೀ ವಿಶ್ವೇಶ್ವರ ವೇಣುಗೋಪಾಲ ಕೃಷ್ಣ ದೇವಸ್ಥಾನ, ಅನಂತಶಯನಯಲ್ಲಿ ನೇರವೇರಿರುತ್ತದೆ.
ದಿನಾಂಕ ೦೬-೦೫-೨೨ರ ವೈಶಾಖ ಶುದ್ಧ ಪಂಚಮಿಯ ದಿನದಿಂದ ಶಂಕರಜಯAತಿಯ ಸಲುವಾಗಿ ಶಂಕರ ತತ್ವಗಳನ್ನು ನಾಡಿನಜನತೆಗೆ ತಿಳಿಯಪಡಿಸುವರೇ ಶ್ರೀ ಶಂಕರತತ್ವ ಪ್ರಸಾರಅಭಿಯಾನವನ್ನು ಆಯೋಜಿಸಲಾಗಿತ್ತು. ಸಮಾರಂಭದ ಮೊದಲು ಶ್ರೀ ಶಂಕರ ಅನುಷ್ಠಾನ ಭಜನಾ ಮಂಡಳಿ, ಕಾರ್ಕಳ ಇವರಿಂದ ಭಜನೆ ಕಾರ್ಯಕ್ರಮ ನಡೆಯಿತು. ಆ ಮೇಲೆ ಶ್ರೀ ಶಂಕರರಿಗೆ ಮಹಾಪೂಜೆ, ಫಲಪುಷ್ಪ ನೈವೇದ್ಯ ಸಲ್ಲಿಸಿ ಕಾರ್ಯಕ್ರಮವನ್ನು ಮುಂದುವರೆಸಲಾಯಿತು.
ಸಮಾರೋಪ ಸಮಾರಂಭದಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಕೆ.ಮುರಳೀಧರ ಶರ್ಮಾ ಇವರು ವಹಿಸಿದ್ದರು. ಉಪನ್ಯಾಸವನ್ನು ನೀಡಲು ಬ್ರಹ್ಮಾವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿಯಾದ ಸವಿತಾ ಎರ್ಮಾಳ್ ಇವರು ಆಗಮಿಸಿ, ಭಾರತೀಯ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರ ಹಾಗೂ ಸನಾತನತತ್ವ ಪರಂಪರೆಯನ್ನು ಬೆಳೆಸುವ ನಿಟ್ಟಿನಲ್ಲಿ ನಾವು ತೆಗೆದು ಕೊಳ್ಳಬೇಕಾದ ಕ್ರಮ ಇವುಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಶ್ರೀ ಶಂಕರ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ವಾಯುಸೇನೆಯ ಹಿರಿಯ ಅಧಿಕಾರಿಯಾದ ರಮೇಶ್ ಕಾರ್ಣಿಕ್ ಉಪಸ್ಥಿತರಿದ್ದರು.
ಸಮಿತಿಯ ಉಪಾಧ್ಯಕ್ಷರಾದ ಕೆ.ವಾಸುದೇವರಾವ್ ಇವರು ಸ್ವಾಗತಿಸಿದರು. ವರದಿ ವಾಚನವನ್ನು ಕಾರ್ಯದರ್ಶಿ ಸತೀಶ್ ಆಚಾರ್ ಹಾಗೂ ಪ್ರಸ್ತಾವಿಕ ನುಡಿಯನ್ನು ಪದ್ಮನಾಭ ಮರಾಠೆ ಮಾಡಿದರು. ಧನ್ಯವಾದವನ್ನು ಎ.ಪ್ರಭಾಕರ್‌ರಾವ್ ಮಾಡಿ ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕ ಸಂಜಯ್‌ಕುಮಾರ್ ಮಾಡಿದರು.

ವರದಿ:ಅರುಣ ಭಟ್ ಕಾರ್ಕಳ

error: