May 14, 2024

Bhavana Tv

Its Your Channel

ಕಾರ್ಕಳ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆ

ಕಾರ್ಕಳ : ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಕಾರ್ಕಳ ಉತ್ಸವಕ್ಕೆ ಸಂಬAಧಿಸಿದAತೆ ಪುರಸಭೆ ಕೈಗೆತ್ತಿಕೊಂಡ ಕಾಮಗಾರಿಗಳಿಗೆ ಬಿಲ್ಲು ಪಾವತಿಸುವಲ್ಲಿ ಆಕ್ಷೇಪವಿದೆ ಎಂದು ಸದಸ್ಯ ಸೋಮನಾಥ ಹೇಳಿದ್ದಾರೆ.

ಅವರು ಪುರಸಭೆಯಲ್ಲಿ ಮಂಗಳವಾರ ನಡೆದÀ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಮೀಟಿಂಗ್ ಅಜೆಂಡಾದಲ್ಲಿ ಕಾರ್ಕಳ ಉತ್ಸವಕ್ಕೆ ಸಂಬAಧಿಸಿದ ವಿವರಣೆಯನ್ನು ನೀಡಲಾಗಿತ್ತು. ಅದಕ್ಕೆ ಆಕ್ಷೇಪಿಸಿದ ಸೋಮನಾಥ ಅವರು, ಕೆಲಸ ನಿರ್ವಹಿಸಿದ ಗುತ್ತಿಗೆದಾರರು ಅವೈಜ್ಞಾನಿಕ ರೀತಿಯಲ್ಲಿ ಬಿಲ್ಲು ಮಾಡಿದ್ದಾರೆ. ಇದು ಸಂದೇಹಕ್ಕೆ ಎಡೆಮಾಡಿಕೊಟ್ಟಿದೆ ಎಂದರು.
ಪ್ರತಿಮಾ ರಾಣೆ ಮಾತನಾಡಿ, ಕಾರ್ಕಳ ಉತ್ಸವದ ಸಂದರ್ಭ ಉತ್ಸವದ ಯಶಸ್ಸಿಗೆ ಸಹಮತ ಸೂಚಿಸಿದ್ದೇವೆ. ಈಗ ಆಕ್ಷೇಪಿಸುವುದು ಸರಿಯಲ್ಲ. ಗುತ್ತಿಗೆದಾರರ ಬಿಲ್ಲುಗಳನ್ನು ಪರಿಶೀಲನೆ ನಡೆಸಿ ಪಾವತಿಸಿ ಎಂದರು.
ಅಧ್ಯಕ್ಷೆ ಸುಮಕೇಶವ್ ಮಾತನಾಡಿ, ಎಲ್ಲರೂ ಸಹಕರಿಸಿದ ಪರಿಣಾಮ ಕಾರ್ಕಳ ಉತ್ಸವ ಯಶಸ್ವೀಯಾಗಿದೆ ಎಂದರು. ಬಳಿಕ ಬಿಲ್ಲು ಪಾವತಿಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಬಂಡೀಮಠ ಬಸ್ ನಿಲ್ದಾಣ ಕ್ರಿಕೆಟ್ ಮೈದಾನವಾಗಿದೆ. ಸರ್ವ ಸೌಲಭ್ಯವನ್ನು ಒದಗಿಸಿದ ಬಸ್ ನಿಲ್ದಾಣ ನಿರುಪಯುಕ್ತವಾಗಿದೆ. ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ದಿ.ವಿ.ಎಸ್.ಆಚಾರ್ಯ ಅವರ ಹೆಸರಿನಲ್ಲಿ ಈ ಬಸ್ ನಿಲ್ದಾಣ ಉದ್ಘಾಟನೆಗೊಂಡಿದೆ. ತಾಲೂಕಿಗೆ ಕೋಟಿ ಕೋಟಿ ರೂ. ಅನುದಾನ ಹರಿದು ಬಂದ ಸಂದರ್ಭದಲ್ಲಿ ಈ ಬಸ್ ನಿಲ್ದಾಣ ಕೂಡಾ ಬಳಕೆಯಾಗಲಿ ಎಂದು ಅಶ್ಪಕ್ ಅಹ್ಮದ್ ತಿಳಿಸಿದರು

ಪುರಸಭೆ ಅಧ್ಯಕ್ಷೆ ಸುಮಕೇಶವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಲ್ಲವಿ, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು.

ವರದಿ:ಅರುಣ ಭಟ್ ಕಾರ್ಕಳ

error: