April 29, 2024

Bhavana Tv

Its Your Channel

ಶ್ರೀ ಭುವನೇಂದ್ರ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳಿಗಾಗಿ ನಡೆದ ಎರಡು ದಿನಗಳ ಬೇಸಿಗೆ ಶಿಬಿರ

ಕಾರ್ಕಳ : ‘ಇಂದು ಪ್ರತಿ ಕಾಲೇಜುಗಳಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳು ಇದ್ದು ದೇಶಭಕ್ತಿಯ ಒಳಹರಿವಿಗೆ ದಾರಿದೀಪಗಳಾಗಿವೆ. ಇದರ ಜೊತೆಗೆ ಇವುಗಳು ಸೇವಾಮನೋಭಾವವನ್ನು ತುಂಬುವಲ್ಲಿ ಮಾತ್ರವಲ್ಲ , ಸಕಾರಾತ್ಮಕ ಭಾವನೆಗಳಿಗೆ ಇಂಬುಕೊಡುವoತಾದ್ದು ಆಗಿವೆ. ವಿದ್ಯಾರ್ಥಿಗಳು ಇವುಗಳ ಪೂರ್ಣಪ್ರಯೋಜನ ಪಡೆದುಕೊಳ್ಳಬೇಕು’ ಎಂಬುದಾಗಿ ಉಡುಪಿ ಜಿಲ್ಲಾ ಗೈಡ್ಸ್ ಕಮಿಷನರ್ ಜ್ಯೋತಿ ಜೆ. ಪೈಯವರು ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ರೋವರ‍್ಸ್ ಮತ್ತು ರೇಂಜರ‍್ಸ್ ಘಟಕಗಳಿಗಾಗಿ ನಡೆದ ಎರಡು ದಿನಗಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್ ಅವರು ಮಾತನಾಡಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಗೆ ಸದಾ ಗಮನಕೊಡಬೇಕು. ಹಾಗಿದ್ದರೆ ಮಾತ್ರ ಸರ್ವಾಂಗೀಣ ಪ್ರಗತಿ ಬದುಕಿನಲ್ಲಿ ಸಾಧ್ಯ. ಬದುಕನ್ನು ಔದ್ಯೋಗಿಕ ದೃಷ್ಟಿಯಿಂದ ಮಾತ್ರ ಕಟ್ಟಿಕೊಳ್ಳುವುದಲ್ಲ ಬದಲು ಸಂಸ್ಕೃತಿಯನ್ನು ಅರಿಯುವಲ್ಲಿಯೂ ಸಹ ಮುತುವರ್ಜಿ ವಹಿಸಬೇಕೆಂದು ಕರೆನೀಡಿದರು. ಕಾಲೇಜಿನ ಪ್ರಾಣಿಶಾಸ್ತç ವಿಭಾಗದ ಮುಖ್ಯಸ್ಥ, ರೋವರ್ ಸ್ಕೌಟ್ ಲೀಡರ್ ಡಾ. ಈಶ್ವರ ಭಟ್ ಸ್ವಾಗತಿಸಿದರೆ, ಗಣಕಶಾಸ್ತç ವಿಭಾಗದ ಮುಖ್ಯಸ್ಥೆ ರೇಂಜರ್ ಲೀಡರ್ ಶ್ರೀಮತಿ ಸ್ವಾತಿ ಕೆ. ವಂದಿಸಿದರು. ಪ್ರಥಮ ಪದವಿ ವಿದ್ಯಾರ್ಥಿ ಸುಮಿತ್ ಕಾರ್ಯಕ್ರಮ ನಿರೂಪಿಸಿದರು. ಅತಿಥಿಗಳಾಗಿ ಶರತ್ ರಾಜ್, ವಿತೇಶ್ ಕಾಂಚನ್ ಹಾಗೂ ಪ್ರಾಣಿಶಾಸ್ತç ಉಪನ್ಯಾಸಕಿ ಶ್ರೀಮತಿ ಮೀನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶರತ್ ರಾಜ್, ವಿತೇಶ್ ಕಾಂಚನ್ ಹಾಗೂ ಕು. ಕಾವ್ಯ ಅವರು ವಿವಿಧ ವಿಷಯಗಳ ಮೇಲೆ ಎರಡು ದಿನಗಳ ಕಾಲ ರೋವರ‍್ಸ್ ಮತ್ತು ರೇಂಜರ‍್ಸ್ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು. ಸಮಾರೋಪ ಸಮಾರಂಭದಲ್ಲಿ ಉಡುಪಿಯ ರಾಜ್ಯ ಸಂಘಟನಾ ಆಯುಕ್ತರಾದ ಸುಮನ್ ಶೇಖರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ. ಕೋಟ್ಯಾನ್ ಅವರು ವಹಿಸಿದ್ದರು. ಡಾ. ಈಶ್ವರ ಭಟ್ ಸ್ವಾಗತಿಸಿ, ಮೀನಾಕ್ಷಿ ವಂದಿಸಿದರು. ಕು. ನಿಧಿ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸ್ವಾತಿ ಕೆ. ಹಾಗೂ ಸಂಪನ್ಮೂಲ ವ್ಯಕ್ತಿ ಶರತ್ ರಾಜ್ ಉಪಸ್ಥಿತರಿದ್ದರು.
ವರದಿ: ಅರುಣ ಭಟ್ ಕಾರ್ಕಳ

error: