May 18, 2024

Bhavana Tv

Its Your Channel

ಯಕ್ಷ ರಂಗಾಯಣ ಕಲಾವಿದರಿಂದ ನಾಟಕ ಪ್ರದರ್ಶನ

ಕಾರ್ಕಳ:- 1857 ರ ಸಿಪಾಯಿದಂಗೆಗಿAತಲೂ ಮೊದಲೇ ಅಂದರೆ 1837 ರಲ್ಲಿ ಬ್ರಿಟಿಷರ ವಿರುದ್ಧ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ರೈತರು ಬಹಳ ದೊಡ್ಡ ರೀತಿಯಲ್ಲಿ ಬಂಡೆದ್ದರು. 1837 ಎಪ್ರಿಲ್ 5 ರಂದು ಮಂಗಳೂರಿನ ಬಾವುಟಗುಡ್ಡಯಲ್ಲಿ ಲ್ಲಿ ಹಾರಾಡುತ್ತಿದ್ದ ಬ್ರಿಟಿಷರ ಧ್ವಜವನ್ನು ಅಮರ ಕ್ರಾಂತಿಯ ರೈತ ಹೋರಾಟಗಾರರು ಕೆಳಗಿಳಿಸಿ
ತಮ್ಮ ವಿಜಯಧ್ವಜವನ್ನು ಹಾರಿಸುತ್ತಾರೆ. ಮಾತ್ರವಲ್ಲ 13 ದಿನಗಳ ಕಾಲ ಈ ಕೆನರಾ ಜಿಲ್ಲೆಯನ್ನು ಬ್ರಿಟಿಷ್ ಮುಕ್ತರನ್ನಾಗಿಸಿ ಆಳುತ್ತಾರೆ. ಬಳಿಕ
ಬ್ರಿಟಿಷರ ಒಡೆದು ಆಳುವ ನೀತಿಗೆ  ಬಲಿಯಾಗಿ ಸೋಲುಣ್ಣತ್ತಾರೆ. ಕೆದಂಬಾಡಿ ರಾಮೇಗೌಡ,ಕಲ್ಯಾಣ ಸ್ವಾಮಿ,ಹುಲಿ ಕಡಿದ ನಂಜಯ್ಯ,ಗುಡ್ಡೆಮನೆ ಅಪ್ಪಯ್ಯ ಮುಂತಾದ ನಾಯಕರು ಸೇರಿದಂತೆ ನೂರಾರು ರೈತ ಹೋರಾಟಗಾರರನ್ನು ನಿರ್ದಾಕ್ಷಿಣ್ಯವಾಗಿ ಬ್ರಿಟಿಷರು ನೇಣಿಗೇರಿಸುತ್ತಾರೆ.
ಈ ಹೋರಾಟದ ನೆನಪನ್ನು ಮತ್ತೆ ನಾಟಕದ ಮೂಲಕ ಕಟ್ಟುವ ಕೆಲಸವು ಇದೀಗ ಕಾರ್ಕಳ ಯಕ್ಷ ರಂಗಾಯಣ ಕಲಾವಿದರಿಂದ ಆರಂಭಗೊAಡಿದೆ.
ಸ್ವಾತAತ್ರ‍್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಹೋರಾಟದ ನೆಲಗಳಲ್ಲಿ ನಾಟಕದ ಪ್ರದರ್ಶನ ನೀಡಲು ಈ ತಂಡ ಕೋಟಿ ಚೆನ್ನಯ ಥೀಂ ಪಾರ್ಕ್ ನಲ್ಲಿ ತಾಲೀಮು ನಡೆಸಿದೆ. ಹಿರಿಯ ಸಾಹಿತಿ ಡಾ| ಪ್ರಭಾಕರ ಶಿಶಿಲ ರಚಿಸಿದ ಈ ನಾಟಕವನ್ನು ಪ್ರಸಿದ್ಧ ರಂಗ ನಿರ್ದೇಶಕ,ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕರೂ ಆಗಿರುವ  ಜೀವನ್ ರಾಮ  ಸುಳ್ಯ ಇವರು ನಿರ್ದೇಶಿಸುತ್ತಿದ್ದಾರೆ. ನೀನಾಸಂ ಪದವೀಧರರು ಮತ್ತು ಸ್ಥಳೀಯ ಕಲಾವಿದರು ಇದರಲ್ಲಿ ಅಭಿನಯಿಸುತ್ತಿದ್ದಾರೆ.ಜೂನ್ ಮೂರನೇ ವಾರದಿಂದ ಇದರ ಪ್ರದರ್ಶನ ರಾಜ್ಯಾದ್ಯಂತ ನಡೆಯಲಿದೆ.

ವರದಿ: ಅರುಣ ಭಟ್ ಕಾರ್ಕಳ

error: