May 2, 2024

Bhavana Tv

Its Your Channel

ಯುಪಿಎಸ್ ಸಿ ಪರೀಕ್ಷೆಯಲ್ಲಿ 545 ರ‍್ಯಾಂಕ್ ಪಡೆದ ಮೊಹಮ್ಮದ್ ಶೌಕತ್ ಅಜೀಂ ಗೆ ಸನ್ಮಾನ

ಕಾರ್ಕಳ :-ನಾವು ಯಾವುದಾದರೂ ಗುರಿಮುಟ್ಟಲು ಶಿಕ್ಷಣ ನಮ್ಮನ್ನು ಹುಡುಕಿಕೊಂಡು ಬರಬಾರದು ನಾವು ಉತ್ತಮ ಶಿಕ್ಷಣವನ್ನು ಪಡೆಯಲು ಶಿಕ್ಷಣವನ್ನು ಹುಡುಕಿಕೊಂಡು ಹೋಗಬೇಕೆಂದು ಯುಪಿಎಸ್ ಸಿ ಪರೀಕ್ಷೆಯಲ್ಲಿ 545 ರಾಂಕ್ ಪಡೆದ ಕಾರ್ಕಳ ಕುಕ್ಕುಂದೂರಿನ ಕೆ.ಎಮ್.ಇ.ಎಸ್ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ ಮೊಹಮ್ಮದ್ ಶೌಕತ್ ಅಜೀಂ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ರಾಮಚಂದ್ರ ನೆಲ್ಲಿಕರ್ ನಮ್ಮ ಕಾಲೇಜಿಗೆ ದೇಶ-ವಿದೇಶಗಳಲ್ಲಿ ಕೀರ್ತಿ ತಂದುಕೊಟ್ಟ ವಿದ್ಯಾರ್ಥಿ ಶೌಕತ್ ಅಜಿಮ್ ಆಗಿರುತ್ತಾರೆ. ಎಂದು ಹೇಳಲು ನಮಗೆ ತುಂಬಾ ಹೆಮ್ಮೆ ಆಗುತ್ತದೆ ಎಂದು ಹೇಳಿದರು.

ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ಕೋಟ್ಯಾನ್ ಮಾತನಾಡಿ ಶೌಕತ್ ಅಜೀಜ್ ನವರು ಒಂದು ಬಡ ಕುಟುಂಬದ ದಿಂದ ಹುಟ್ಟಿ ಬಂದವರು. ಯುಪಿಎಸ್ಸಿ ಅನ್ನುವಂಥ ಅತಿ ಕಠಿಣ ಪರೀಕ್ಷೆಯಲ್ಲಿ 545 ನೆ ರ‍್ಯಾಂಕ್ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಹೇಳಿದರು.

ನಂತರ ಕೆಎಂಇಎಸ್ ಸಂಸ್ಥೆಯ ಮುಖ್ಯಸ್ಥರಾದ ಮಾತನಾಡಿ ಬಡ ಕುಟುಂಬದಲ್ಲಿ ಹುಟ್ಟಿ ಪ್ರಾಥಮಿಕ ಶಿಕ್ಷಣವನ್ನು ಕಾರ್ಕಳ ಜರಿ ಗುಡ್ಡೆಯ ಉರ್ದು ಶಾಲೆಯಲ್ಲಿ ಕಲಿತು ಪಿಯುಸಿ ಶಿಕ್ಷಣವನ್ನು ನಮ್ಮ ಶಾಲೆಯಲ್ಲಿ ಪೂರ್ಣಗೊಳಿಸಿ ಇಂಜಿನಿಯರಿAಗ್ ವ್ಯಾಸಂಗ ಮಾಡಿ ದೆಹಲಿಯಲ್ಲಿ ಯುಪಿಎಸ್ಸಿ ಪರೀಕ್ಷೆಯ ಸತತ ಏಳು ಬಾರಿ ಪ್ರಯತ್ನಮಾಡಿ 545 ರ‍್ಯಾಂಕ್ ನೊಂದಿಗೆ ಉತ್ತೀರ್ಣರಾಗಿದ್ದು ಇದು ನಮ್ಮ ಶಾಲೆಗೂ ನಮ್ಮ ಊರಿಗೆ ಒಂದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಇವರಮುಂದಿನ ಜೀವನ ಸುಖಮಯವಾಗಿರಲಿ ಎಂದು ಹೇಳಿದರು.

ಶಾಲಾಆಡಳಿತ ಮಂಡಳಿಯ ಸದಸ್ಯರಾದ ಮೊಹಮ್ಮದ್ ನದಾಫ್ ಶುಭಹಾರೈಸಿದರು.

ವರದಿ: ಅರುಣ ಭಟ್ ಕಾರ್ಕಳ

error: