May 2, 2024

Bhavana Tv

Its Your Channel

ಸಮುದಾಯ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಉದ್ಘಾಟನೆ

ಕಾರ್ಕಳ: ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇದರ ವತಿಯಿಂದ 1ನೆಯ ವಾರ್ಡ್ ಬಂಗ್ಲೆಗುಡ್ಡೆ ಕಾರ್ಕಳ ಇಲ್ಲಿನ “ಸಮುದಾಯ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಉದ್ಘಾಟನಾ” ಸಮಾರಂಭ ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳ ಪುರಸಭಾ ಮಖ್ಯಾಧಿಕಾರಿ ರೂಪಾ ಟಿ.ಶೆಟ್ಟಿ ದೀಪ ಬೇಳಗಿಸುದರ ಮೂಲಕ ಇದು ಒಂದು ಒಳ್ಳೆಯ ಕಾರ್ಯಕ್ರಮ ಸಮುದಾಯ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸೇವೆ ಬಹಳ ಅಗತ್ಯವಾದುದು, ಸಮುದಾಯದ ಪ್ರತಿಯೊಬ್ಬ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅಲ್ಲಿ ನೆರದಿರುವ ಸಾರ್ವಜನಿಕರಿಗೆ ತಮ್ಮ ಉದ್ಘಾಟನಾ ಭಾಷಣ ದ ಮೂಲಕ ಮನವರಿಕೆ ಮಾಡಿದರು.

ಕಾರ್ಯ ಕ್ರಮದ ಪ್ರಾಸ್ತಾವಿಕ ಭಾಷಣವನ್ನು ಬಂಗ್ಲೆಗುಡ್ಡೆ ಸಮುದಾಯ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಅಧಿಕಾರಿ ನಿಧಿ ನಾಯಕ್ ರವರು ಮಾತನಾಡಿದರು.

ಮುಖ್ಯ ಅಥಿತಿ ಡಾಕ್ಟರ್ ಶಶಾಂಕ ಆರ್ ಮಾತನಾಡಿ ಸಮುದಾಯ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸೇವೆಗಳ ಬಗ್ಗೆ ಹಾಗೂ ಅಸಾಂಕ್ರಮಿಕ ಕಾಯಿಲೆಗೆ ಸಂಬoಧಿಸಿ ಮಾತನಾಡಿದರು.

ಅಶ್ಪಕ್ ಅಹಮ್ಮದ್ ರವರು ಮಾತನಾಡಿ ಬಂಗ್ಲೆ ಗುಡ್ಡೆ 1ನೇ ವಾರ್ಡ್ ಪುರಸಭೆ ಕಾರ್ಕಳ ಸಮುದಾಯ ಆರೋಗ್ಯ ಮತ್ತು ಕ್ಷೇಮಕೆಂದ್ರದ ಆರಂಭಕ್ಕೆ ಸಾಕಷ್ಟು ಸಹಕಾರ ನೀಡುವುದಲ್ಲದೆ ಈ ಒಂದು ಸೇವೆ ಯು ಜನರಿಗೆ ಸತತವಾಗಿ ಮುಟ್ಟಬೇಕು ಎಂದು ತಿಳಿಸಿದರು.

ಕಾರ್ಯ ಕ್ರಮದ ಅಧ್ಯಕ್ಷರಾದ ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ಕೆ. ಎಸ್.ರಾವ್ ಮಾತನಾಡಿಕೂಡಾ ಸಮುದಾಯ ಆರೋಗ್ಯ ಮತ್ತು ಕ್ಷೇಮ ಕೇಂದ್ರ ದ ಸೇವೆಯು ಸಾರ್ವಜನಿಕ ಫಲಾನುಭವಿಗಳಿಗೆ ಸತತವಾಗಿ ಸಿಗುವಂತಾಗಬೇಕು ಎಂದು ಅಧ್ಯಕ್ಷೀಯ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಅಷ್ಪಕ್ ಅಹಮ್ಮದ್ ಬಂಗ್ಲೆ ಗುಡ್ಡೆ 1ನೆಯ ವಾರ್ಡ್ ಸದಸ್ಯರು ,ಸೀನಿಯರ್ ಶುಶ್ರೋಶಕಿ ಮೇಲ್ವಿಚಾರಕರಾದ ಎಲಿಯಮ್ಮ ಸಿಸ್ಟರ್, ಹಿರಿಯ ಶುಶ್ರೋಶಕಿಯಾದ ಪದ್ಮ ಸಿಸ್ಟರ್ ,ಬಂಗ್ಲೆ ಗುಡ್ಡೆ ಪ್ರಾಥಮಿಕ ಆರೋಗ್ಯ ಅಧಿಕಾರಿ ಪಿ.ಪಿ.ಪಾಪಕ್ಕ ಮತ್ತು ಕಾಬೆಟ್ಟು ಪ್ರಾಥಮಿಕ ಆರೋಗ್ಯ ಅಧಿಕಾರಿ ಪುಷ್ಪ ರವರು, ಟಿಬಿ ಎಸ್‌ಟಿಆರ್‌ಸಿಶಿವ ಕುಮಾರ್ ಸರಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ಬಂಗ್ಲೆಗುಡ್ಡೆ ಸಮುದಾಯ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಅಧಿಕಾರಿ ಸಿ.ಎಚ್.ಓಕುಮಾರಿ ನಿಧಿ ನಾಯಕ್ ಹಾಗೂ ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕರ್ಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆ ಮತ್ತು ಧನ್ಯವಾದ ಕಾರ್ಯಕ್ರಮ ವನ್ನೂ ಎನ್‌ಪಿಸಿಡಿಸಿಎಸ್ ವಿಭಾಗದ ಆಪ್ತ ಸಮಾಲೋಚಕ ರಾಧ ಕಿರಣ್ ಬಾಬು ಇವರು ನೆರವೇರಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: