May 16, 2024

Bhavana Tv

Its Your Channel

ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಾರ್ಕಳದ ಅನಿಶ್ ಆರ್. ಜೋಶಿ

ಕಾರ್ಕಳ : ಮಂಗಳೂರಿನ ಸಿಎಫ್‌ಎಎಲ್ ಕಾಲೇಜಿನಲ್ಲಿ ಕಲಿಯುತ್ತಿರುವ ಕಾರ್ಕಳ ನಗರದ ಸತ್ಯನಾರಾಯಣ ಬಡಾವಣೆಯ ಅನಿಶ್ ಆರ್. ಜೋಶಿ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ 99.85%ನೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಇವರು ಪಿಯುಸಿ ಪರೀಕ್ಷೆಯಲ್ಲಿ 5 ವಿಷಯಗಳಲ್ಲಿ ನೂರಕ್ಕೆ ನೂರು ಅಂಕದೊAದಿಗೆ ರಾಜ್ಯಕ್ಕೆ 12 ನೇ (587) ಸ್ಥಾನಿಯಾಗಿದ್ದರು. ಕಾಮೆಡ್ ಕೆ ಪರೀಕ್ಷೆಯಲ್ಲಿ 48 ನೇ ರ‍್ಯಾಂಕ್, ಕೆ.ವಿ.ಪಿ.ವೈ. ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಕಾರ್ಕಳದ ಡಾ. ಕೆ.ಆರ್. ಜೋಶಿ ಮತ್ತು ರೇಣುಕಾ ಆರ್. ಜೋಶಿ ದಂಪತಿ ಪುತ್ರನಾಗಿರುವ ಅನಿಶ್ ಜ್ಞಾನಸುಧಾ ಕಾಲೇಜಿನ ಹಳೆ ವಿದ್ಯಾರ್ಥಿ. ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅನಿಶ್ ರಾಜ್ಯಕ್ಕೆ ತೃತೀಯ ಸ್ಥಾನಿಯಾಗಿರುವುದು ಇಲ್ಲಿ ಉಲ್ಲೇಖನೀಯ.

ವರದಿ: ಅರುಣ ಭಟ್ ಕಾರ್ಕಳ

error: