April 27, 2024

Bhavana Tv

Its Your Channel

ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಯ ವಿದ್ಯಾರ್ಥಿಗಳ ಕ್ರೀಡಾ
ಸಾಧನೆ

ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಇಲ್ಲಿಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಹ್ಯಾಮರ್ ತ್ರೋನಲ್ಲಿ ಸೃಷ್ಟಿ ದ್ವಿತೀಯ ಸ್ಥಾನ, ವೇಗದ ನಡಿಗೆಯಲ್ಲಿ ಅಭಿಲಾಷ್ ಪ್ರಥಮ ಸ್ಥಾನ, ಶ್ರೀನಿಧಿ ತೃತೀಯ ಸ್ಥಾನ,ತ್ರಿವಿಧ ಜಿಗಿತದಲ್ಲಿ ಜೀವಿತ ತೃತೀಯ ಸ್ಥಾನ,U/ 14 ನ ಹರ್ಡಲ್ಸ್ ನಲ್ಲಿ ದಿಶಾ ಪ್ರಥಮ ಸ್ಥಾನ,1500 ಮೀ ಓಟದಲ್ಲಿ ಪ್ರಜ್ವಲ್ ತೃತೀಯ ಸ್ಥಾನ,1500 ಮೀ ಮತ್ತು 800 ಮೀ ಓಟದಲ್ಲಿಸಮೃದ್ಧಿ ದ್ವಿತೀಯ ಸ್ಥಾನ, U/ 14 ಮತ್ತು U/17 ನಲ್ಲಿ ಹುಡುಗಿಯರ ರಿಲೇಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.ಪ್ರಥಮ ಹಾಗೂ ದ್ವಿತೀಯ ಸ್ಥಾನದ 4 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಗಳಿಗೆ ಮತ್ತು ಮಾರ್ಗದರ್ಶಿ ಶಿಕ್ಷಕರಾದ ವೇದಾವತಿ ಅಭಿನಂದನೆ ಸಲ್ಲಿಸಿದ್ದಾರೆ

error: