May 10, 2024

Bhavana Tv

Its Your Channel

ನವಂಬರ್ 19ರಂದು ಕಾರ್ಕಳ ಸಾಹಿತ್ಯ ಸಂಘದ ಬೆಳ್ಳಿ ಹಬ್ಬ ಸಂಭ್ರಮ ವರುಷ-ಹರುಷ ಇದರ ಸಮಾರೋಪ ಸಮಾರಂಭ

ಕಾರ್ಕಳ: ಕಾರ್ಕಳ ಸಾಹಿತ್ಯ ಸಂಘದ ಬೆಳ್ಳಿ ಹಬ್ಬ ಸಂಭ್ರಮ ವರುಷ-ಹರುಷ(2021-22) ಇದರ ಸಮಾರೋಪ ಸಮಾರಂಭವು ನವಂಬರ್ 19ರಂದು ಸಂಜೆ 4.15ಕ್ಕೆ ಎಸ್‌ವಿಟಿ ಸಭಾಂಗಣದಲ್ಲಿ ಜರಗಲಿರುವುದು ಎಂದು ಕಾಯಾಧ್ಯಕ್ಷ ಕೆ.ಪಿ.ಶೆಣೈ ತಿಳಿಸಿದ್ದಾರೆ.

ನಗರದ ಹೋಟೆಲ್‌ನಲ್ಲಿ ಆಯೋಜಿಸಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ತುಮಕೂರು ಶ್ರೀ ರಾಮಕ್ರಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಶ್ರೀ ಪರಮಪೂಜ್ಯ ವಿರೇಶಾನಂದ ಸರಸ್ಪತಿ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ರಾಂತ ಕಲಪತಿಗಳು ಡಾ. ಬಿ.ಎ.ವಿವೇಕ ರೈ ಸಮಾರೋಪ ನುಡಿಗಳಾನಾಡಲಿದ್ದಾರೆ.
ಸಂಜೆ 6.30ಕ್ಕೆ ಮೂಡಬಿದಿರೆ ಆಳ್ವಾಸ್ ಸಾಂಸ್ಕೃತಿಕ ಪ್ರತಿಷ್ಠಾನದ ವಿತಿಯಿಂದ ಮನೋರಂಜನೆ ಕಾರ್ಯಕ್ರಮಗಳು ಜರಗಲಿರುವುದು ಎಂದು ತಿಳಿಸಿದ್ದಾರೆ.

ಸಾಹಿತ್ಯದತ್ತ ಯುವಜನ ಅಕರ್ಷಣೆಗೆ ಒತ್ತು
ಕಾರ್ಕಳ ಸಾಹಿತ್ಯ ಸಂಘವು ಕಳೆದ ಒಂದು ವರ್ಷದಿಂದ ಬೆಳಿಹಬ್ಬದ ಅಂಗವಾಗಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ಸಾಹಿತ್ಯ, ಕೃತಿ ಬಿಡುಗಡೆ, ಕಲೆಗಾರರನ್ನು ಪ್ರೋತ್ಸಾಹಿಸು ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯಾಕ್ತರನ್ನು ತನ್ನತ್ತ ಗಮನ ಹರಿಸುವಂತೆ ಮಾಡಿದೆ.
ಯುವಜನರು ಸಾಹಿತ್ಯದತ್ತ ಗಮನ ಸೆಳೆಯುವ ನಿಟ್ಟಿನಲ್ಲಿ ಹಲವು ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ಸ್ಪಂದನೆ ಸಿಗದೇ ಯಶಸ್ಸು ಆಗದಿರುವುದಕ್ಕೆ ಇದೇ ಸಂದರ್ಭದಲ್ಲಿ ಅವರು ಖೇಧ ವ್ಯಕ್ತಪಡಿಸಿದರು. ಐಟಿಬಿಟಿ, ಸಾಮಾಜಿಕ ಜಾಲತಾಣ, ದೂರದರ್ಶನಗಳ ಪ್ರಭಾವದಿಂದಾಗಿ ಯುವಜನರು ಸಾಹಿತ್ಯದಿಂದ ವಿಮುಕ್ತರಾಗುತ್ತಿರುವುದು ಕಾಣುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಾಹಿತ್ಯ ಸಂಘವು ಮತ್ತೇ ಪ್ರಯತ್ನಗಳನ್ನು ನಡೆಸಿ ಯುವ ಸಮುದಾಯವನ್ನು ಸಾಹಿತ್ಯಕ್ಷೇತ್ರಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದರು.

ಸರಕಾರದಿಂದಲೇ ಕನ್ನಡದ ಅವಗಣನೆ!
ಕನ್ನಡ ಬಾಷೆ,ಸಂಸ್ಕೃತಿ ಬೆಳೆಸುವಲ್ಲಿ ಸರಕಾರದಿಂದಲೂ ಅವಗಣನೆಯಾಗುತ್ತಿದೆ. ಪ್ರಥಮಿಕ ಶಾಲೆಗಗಳಲ್ಲಿ ವಿದ್ಯಾರ್ಥಿಗಳ ಸಂಖ್ಯಾಬಲ ಕ್ಷೀಣಿಸುತ್ತಿದೆ ಎಂಬ ಕಾರಣವನ್ನು ಮುಂದಿಟ್ಟು ಆಂಗ್ಲ ಮಾಧ್ಯ,ಮ ತೆರೆಯುವ ಮೂಲಕ ಕನ್ನಡ ಬಾಷೆಗವಗಣನೆ ಮಾಡಲಾಗುತ್ತಿದೆ. ಬದಲಾಗಿ ಕನ್ನಡ ಶಾಲೆಯ ಸುಧಾರಣೆಗೆ, ಆಕರ್ಷಿತಕ್ಕೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಸರಕಾರ ಎಡವಿದೆ ಎಂದು ಇದೇ ಸಂದರ್ಭದಲ್ಲಿ ವಿಷಾದ ವಕ್ತಪಡಿಸಿದರು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇತರ ಭಾಷಿಗರ ಕೊಡುಗೆ
ಕನ್ನಡ ಸಾಹಿತ್ಯ ಕ್ಷೇತ್ರವು ವಿಶ್ವದರ್ಜೆಗೇರುವಲ್ಲಿ ಇತರ ಭಾಷಿಗರ ಕೊಡುಗೆ ಅಪಾರವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಆನೇಕ ದಿಗ್ಗಜರ ಮಾತೃಬಾಷೆ ಕನ್ನಡವಲ್ಲದಿದ್ದರೂ, ಕನ್ನಡ ಬಾಷೆಗಾಗಿ ನೀಡಿದ ಕೊಡುಗೆಯಿಂದಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೋ.ಬಿ.ಪದ್ಮನಾಭ ಗೌಡ, ಕೋಶಾಧಿಕಾರಿ ಎಸ್.ನಿತ್ಯಾನಂದ ಪೈ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: