May 19, 2024

Bhavana Tv

Its Your Channel

ದಾನದಿಂದ ಮನುಷ್ಯ ಜೀವನ ಸಾರ್ಥಕ- ಕಮಲಾಕ್ಷ ಕಾಮತ್

ಕಾರ್ಕಳ : ಮನುಷ್ಯ ಜೀವನ ಅತ್ಯಮೂಲ್ಯವಾದದ್ದು ಆದನ್ನು ಸಾರ್ಥಕಗೊಳಿಸುವ ಕಾರ್ಯ ಮನುಷ್ಯನಿಂದಲೇ ಆಗಬೇಕು , ತಾನು ಗಳಿಸಿದ್ದನ್ನು ತನ್ನವರಿಗಾಗಿ ಸ್ವಾರ್ಥಕ್ಕೋಸ್ಕರ ಬಳಸಿಕೊಳ್ಳದೆ ಬಡವರ್ಗಗಳ ಏಳಿಗೆಗಾಗಿ ಶ್ರಮಿಸಿದ್ದಲ್ಲಿ ಸಮಾಜಕ್ಕೆ ಶಾಪವಾಗಿರುವ ಬಡತನವನ್ನು ದೂರ ಮಾಡಬಹುದಾಗಿದೆ.
ಸ್ವಾರ್ಥ ಜೀವನದಿಂದ ಹೊರ ಬಂದು ದಾನ ಮಾಡುವ ಮೂಲಕ ಮನುಷ್ಯ ಜೀವನ ತನ್ನ ಸಾರ್ಥಕ ಗೊಳ್ಳಲಿದೆ ಎಂದು ಹಿರಿಯ ಲೆಕ್ಕಪರಿಶೋಧಕ ಹಾಗೂ ಕೊಡುಗೈದಾನಿ ಕಮಲಾಕ್ಷ ಕಾಮತ್ ಹೇಳಿದರು. ಅವರು ಕಾರ್ಕಳದ ಸುಮೇಧ ಪ್ಯಾಷನ್ ಇಸ್ಟಿಟ್ಯೂಟ್ ಹಾಗೂ ಶ್ರೀನಿವಾಸ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ನಡೆದ ಬಡ ಹಾಗೂ ವಿಶೇಷ ವಿದ್ಯಾರ್ಥಿ ಗಳಿಗೆ ಉಚಿತ ಟೈಲರಿಂಗ್ ಯಂತ್ರ ಗಳನ್ನು ವಿತರಿಸಿ ಮಾತನಾಡಿದರು
ಮನುಷ್ಯ ತನ್ನ ಗಳಿಕೆಯಲ್ಲು ಹೆಚ್ಚು ದಾನಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆ ಹೊರತು ಶಾಶ್ವತವಲ್ಲದ ಶೋಕಿ ಜೀವನಕ್ಕೆ ಮರುಳಾಗಬಾರದು , ನಮ್ಮ ಜೀವನ ಸಾರ್ಥಕತೆ ಗೊಳಿಸುವ ಜೊತೆಗೆ ಇನ್ನೊಬ್ಬರಿಗು ಬೆಳಕಾಗಬೇಕು , ಆಗಲೆ ನಿಜವಾದ ಮಾನವರಾಗುತ್ತೇವೆ ಎಂದರು
ಇದೆ ಸಂದರ್ಭದಲ್ಲಿ ಸುಮೇಧ ಇನಸ್ಟಿಟ್ಯೂಟ್ ನ ಮುಖ್ಯಸ್ಥೆ ಸಾಧನ ಆಶ್ರೀತ್ , ಪ್ರಾಂಶುಪಾಲೆ ಸಹನಾ, ಸುಪ್ರೀಯಾ ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು

ವರದಿ: ಅರುಣ ಭಟ್ ಕಾರ್ಕಳ

error: