April 29, 2024

Bhavana Tv

Its Your Channel

ಶಿವನನ್ನು ಅರಿತು ಶಿವರಾತ್ರಿಯನ್ನು ಆಚರಿಸಿ- ರಾಜಯೋಗಿನಿ ಬಿ.ಕೆ ವಸಂತಿ

ಕಾರ್ಕಳ : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾರ್ಕಳ ಇದರ ಸೇವಾಕೇಂದ್ರದಲ್ಲಿ ಮಾಚ್ 19ರಂದು ಮಹಾಶಿವರಾತ್ರಿಯ ಸಲುವಾಗಿ ಹೈಸ್ಕೂಲ್ ಮಕ್ಕಳಿಗೆ ಶಿವ ಭಕ್ತಿ ಗೀತಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ 38 ವರ್ಷಗಳಿಂದ ಈಶ್ವರೀಯ ಸೇವೆಯಲ್ಲಿ ತೊಡಗಿ ಜ್ಞಾನ ರತ್ನ ಪಸರಿಸುತ್ತಿರುವ ಬ್ರಹ್ಮಕುಮಾರಿ ಬಿ.ಕೆ. ವಸಂತಿಯವರು ಶಿವನನ್ನು ಅರಿತು ಶಿವರಾತ್ರಿ ಆಚರಿಸುವಂತೆ ಕರೆ ನೀಡಿದರು.

ಪರಮಾತ್ಮನು ಈ ಧರೆಗೆ ಬಂದು ಈಶ್ವರೀಯ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿ ಮನುಷ್ಯರಿಗೆ ಸತ್ಯ ಜ್ಞಾನವನ್ನು ತಿಳಿಸಿ ಮಾನವರಿಂದ ದೇವ ಮಾನವರನ್ನಾಗಿ ಮಾಡುವಂತಹ ಶಿಕ್ಷಣ ನೀಡುತ್ತಿದ್ದು ದೇಶ ವಿದೇಶಗಳಲ್ಲಿ ಸಾವಿರಾರು ಸೇವಾ ಕೇಂದ್ರದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಇದರ ಸದುಪ್ರಯೋಗ ಪಡೆದು ದೈವಿ ಗುಣಗಳನ್ನು ಧಾರಣೆ ಮಾಡಿ ವಿಶ್ವ ಶಾಂತಿಯ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು

ಇದರ ಮುಖ್ಯ ಅತಿಥಿಯಾಗಿ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಸರ ಗಿರೀಶ್ ರಾವ್‌ರವರು ವರ್ತಮಾನ ಸಮಯದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಈಶ್ವರೀಯ ಸಮಾಜದ ಸೇವೆ ಅನನ್ಯ ಎಂದರು.

ಇನ್ನೋರ್ವ ಅತಿಥಿ ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್ ರವರು ಪ್ರತಿಯೋರ್ವರು ನೈತಿಕ ಶಿಕ್ಷಣವನ್ನು ಪಡೆಯಬೇಕೆಂದು ತಿಳಿಸಿದರು.

ಅತಿಥಿಗಳಾಗಿ ಉದ್ಯಮಿ ಟಿ. ರಾಮ್‌ಚಂದ್ರ ನಾಯಕ್, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ನಾಯಕ್ ಸಾಣೂರು, ಪೂರ್ಣಿಮ ಕ್ಲೋತ್ ಶಾಪ್ ಮಾಲಕ ಹರಿಪ್ರಸಾದ್ ಪ್ರಭು ಶುಭಹಾರೈಸಿರು, ಭಕ್ತಿಗೀತಾ ತೀಪುಗಾರರಾಗಿ ಗೀತಾ ಟೀಚರ್ ಸಾಣೂರು, ವಸಂತಿ ಕಡಂಬಳ, ಸುರೇಶ್ ನಿಟ್ಟೆ ಭಾಗವಹಿಸಿದರು ಪ್ರಥಮ ಬಹುಮಾನವನ್ನು ಎಸ್. ಎನ್.ವಿ ಪ್ರೌಢ ಶಾಲೆಯ ರಕ್ಷಿತಾ ದ್ವಿತೀಯ ಬಹುಮಾನ ಆಶ್ರೀತಾ, ತೃತೀಯ ಬಹುಮಾನ ಶ್ರೇಯ ಪಡೆದರು ಬಿ. ಕೆ ವರದರಾಯ ಪ್ರಭು ಸ್ವಾಗತಿಸಿದರು. ಬಿ. ಕೆ ಅನ್ನಪೂರ್ಣ ಸಂಸ್ಥೆಯ ಪರಿಚಯ ನೀಡಿದರು ಬಿ.ಕೆ ಶಾಂತ ಧನ್ಯವಾದ ಅರ್ಪಿಸಿದರು. ಸೇವಾಕೇಂದ್ರದ ಸಂಚಾಲಕಿ ಬಿ.ಕೆ ವಿಜಯಲಕ್ಷಿö್ಮ ಕಾರ್ಯಕ್ರಮ ನಿರ್ದೇಶಿಸಿದರು.

ರದಿ: ಅರುಣ ಭಟ್ ಕಾರ್ಕಳ

error: