July 26, 2021

Bhavana Tv

Its Your Channel

ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಇವರಿಂದ ಆಹಾರ ಸಾಮಾಗ್ರಿ ಕಿಟ್ ವಿತರಣೆ

ಕುಂದಾಪುರ ; ಭಾರತೀಯ ವಿಕಾಸ ಟ್ರಸ್ಟ್, ಮೂಲಕ ಕುಂದಾಪುರ ತಾಲೂಕು ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳಿಕಟ್ಟೆಯಲ್ಲಿ, ರಾಷ್ಟಿಯ ಹೆದ್ದಾರಿ ಸಮೀಪ ವಾಸವಾಗಿರುವ ವಲಸೆ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್ಟನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಬಿವಿಟಿಯ ಹಿರಿಯ ಸಲಹೆಗಾರರಾದ ಶ್ರೀಕಾಂತ ಹೊಳ್ಳ, ಮಾತನಾಡಿ ನಮ್ಮ ಸಂಸ್ಥೆಯ ಮೂಲಕ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ಗಳ ಜೊತೆ ಸೇರಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಇಂದು ಆಹಾರ ಸಾಮಾಗ್ರಿ ಕಿಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಹೊಸಾಡು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಾರ್ವತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಿವಿಟಿಯ ಮಾಸ್ಟರ್ ಟ್ರೈನರ್ ಸುಧೀರ್ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿವಿಟಿಯ ಮುಖ್ಯ ವ್ಯವಸ್ಥಾಪಕರಾದ ಮನೋಹರ ಕಟ್ಗೇರಿ, ಅರುಣ್, ರಾಘವೇಂದ್ರ ಆ ಚಾರ್ಯ, ಸುರೇಶ್, ಹಾಗೂ ಸೆಲ್ಕೋದ ಹಿರಿಯ ವ್ಯವಸ್ಥಾಪಕರಾದ ಶೇಖರ ಶೆಟ್ಟಿ, ಸೆಲ್ಕೋ ಶಾಖಾಧಿಕಾರಿ ಮಂಜುನಾಥ ಉಪಸ್ಥಿತರಿದ್ದರು.

error: