April 27, 2024

Bhavana Tv

Its Your Channel

ಡಿಸೆಂಬರ 23 ರಂದು ಕಸಾಪ ಜಿಲ್ಲಾಧ್ಯಕ್ಷರ ಹೊಣೆಗಾರಿಕೆ ಸ್ವೀಕಾರ.

ದಾಂಡೇಲಿ: ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಜಿಲ್ಲಾಧ್ಯಕ್ಷರಾದ ಬಿ.ಎನ್. ವಾಸರೆಯವರ ಹೊಣೆಗಾರಿಕೆ ಸ್ವೀಕಾರ ಸಮಾರಂಭ ಡಿಸೆಂಬರ 23, ಗುರುವಾರದಂದು ಮುಂಜಾನೆ 11 ಗಂಟೆಗೆ ದಾಂಡೇಲಿಯ ಫಾರೆಸ್ಟ್ ಡಿಪೋ ಆವರಣದಲ್ಲಿರುವ ಹಾರ್ನಬಿಲ್ ಸಭಾಭವನದಲ್ಲಿ ನಡೆಯಲಿದೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಬಿ.ಎನ್. ವಾಸರೆಯವರು ಚುನಾವಣೆಯಲ್ಲಿ ಕಸಾಪ ಆಜೀವ ಸದಸ್ಯರ ಪ್ರೀತಿ-ಬೆಂಬಲದಿAದ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಈ ಜಿಲ್ಲಾಧ್ಯಕ್ಷತೆ ಇದೊಂದು ಸ್ಥಾನಬಲವಷ್ಟೆ. ಆದರೆ ತನಗೆ ಕನ್ನಡದ ಪರಿಚಾರಕನಾಗಿಯೇ ಇರಬೇಕೆಂಬ ಬಯಕೆ. ಹಾಗಾಗಿ ತಾನು ಅಧಿಕಾರ ಪದಗೃಹಣ ಎಂಬ ಸಮಾರಂಭವನ್ನು ಮಾಡದೇ ಅದನ್ನು ಹೊಣೆಗಾರಿಕೆ ಸ್ವೀಕಾರ ಸಮಾರಂಭ ಎಂದು ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಇದರ ಎರಡನೆಯ ಭಾಗವಾಗಿ ಉತ್ತರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಕೆಗಳ ಉದ್ಘಾಟನಾ ಸಮಾರಂಭ ಕೂಡಾ ಇರುತ್ತದೆ. ಈ ಸಂದರ್ಭದಲ್ಲಿ ದಾಂಡೇಲಿಯ ಹಿರಿಯ ಲೇಖಕರಾದ ಡಾ. ಆರ್.ಜಿ. ಹೆಗಡೆಯವರ “ಮೊದಲ ಮಳೆಯ ಪರಿಮಳ” ಹಾಗೂ “ಪ್ರಭುತ್ವದ ತಲ್ಲಣಗಳು” ಎಂಬ ಕೃತಿಗಳು ಹಾಗೂ ಪ್ರವೀಣ ನಾಯಕ ಹಿಚ್ಕಡರವರ “ಅವ್ವನೆಂಬ ಹೊಂಗೆಯ ನೆರಳು” ಎಂಬ ಸಂಪಾದಿತ ಕೃತಿಗಳ ಬಿಡುಗಡೆಯಾಗಲಿದೆ. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿ ಕೃತಿಗಳನ್ನು ಬಿಡಗಡೆ ಮಾಡಲಿದ್ದಾರೆ. ಹಿರಿಯ ಸಾಹಿತಿಗಳು ಉಪಸ್ಥಿತರಿರಲಿದ್ದಾರೆ.
ಜೊತೆಗೆ ಈ ಸಮಾರಂಭದಲ್ಲಿ ಜಿಲ್ಲೆಯೆಲ್ಲಡೆಯಿಂದ ಹಿರಿ-ಕಿರಿಯ ಸಾಹಿತಿಗಳು ಭಾಗವಹಿಸಲಿದ್ದು, ಭಾಗವಹಿಸಿದ ಎಲ್ಲ ಸಾಹಿತಿಗಳಿಗೆ ಕನ್ನಡದ ಶಾಲು ಹೊದಿಸಿ, ಕನ್ನಡದ ಪುಸ್ತಕ ಸಮರ್ಪಿಸಿ ಗೌರವಿಸಲಾಗುತ್ತದೆ.

ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ, ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ತುಳಸಿ ಗೌಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾದೇವ ವೇಳಿಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎನ್.ಜಿ. ನಾಯಕ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿಯವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಜಿಲ್ಲೆಯ ಹಿರಿ ಕಿರಿಯ ಸಾಹಿತಿಗಳು, ಕಸಾಪ ಆಜೀವ ಸದಸ್ಯರು, ನುಡಿ ಸಂಘಟಕರು, ಗಣ್ಯರು, ಕನ್ನಡಪರ ಸಂಘಟನೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮನವಿ ಮಾಡಿದ್ದಾರೆ.
ಶಾಲು, ಪೇಟಾ ಸನ್ಮಾಗಳಿಲ್ಲ :
ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಶಾಲು, ಹಾರ, ಸನ್ಮಾನಗಳಿರುವುದಿಲ್ಲ. ಅಭಿನಂದಿಸುವವರು ಕನ್ನಡದ ಪುಸ್ತಕಗಳನ್ನಷ್ಟೇ ನೀಡಿ ಅಭಿನಂದಿಸಬಹುದು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

error: