April 28, 2024

Bhavana Tv

Its Your Channel

ಡಾ. ಸಚಿನ್ ಭಟ್ಟರ ಕೃತಕ ಮೊಣಕಾಲಿನ ಸಾಧನಕ್ಕೆ ರಾಜ್ಯಪ್ರಶಸ್ತಿ

ಕುಮಟಾ:- ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಕುಮಟಾದ ಡಾ. ಸಚಿನ್ ಭಟ್ಟರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ತೇಜಸ್, ಸುಬ್ರಹ್ಮಣ್ಯ, ಚರಣ್ ಹಾಗೂ ಸೂರಜ್ ಅಭಿವೃದ್ಧಿಪಡಿಸಿದ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆರವಾಗುವ ಸಾಧನಕ್ಕೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ “ವರ್ಷದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ” ಲಭ್ಯವಾಗಿದೆ.

ವಯೋಸಹಜವಾಗಿ ಮೂಳೆ ಮತ್ತು ಮಂಡಿ ಸವೆಯುತ್ತದೆ. ಒಂದು ಸಂಶೋಧನೆಯ ಪ್ರಕಾರ 50 ವರ್ಷ ನಂತರದ ಶೇಕಡಾ 35%ರಷ್ಟು ಜನರು ತೀವ್ರ ಮಂಡಿನೋವಿನಿAದ ಬಳಲುತ್ತಿದ್ದಾರೆ. ನಮ್ಮ ದೇಶದಲ್ಲಿ ಶೇಕಡಾ 15% ರಷ್ಟು ಜನರು ಅಂದರೆ 20 ಕೋಟಿ ಜನ ಈಗಾಗಲೇ ಮಂಡಿನೋವಿಗೆ ಶಸ್ತ್ರಚಿಕಿತ್ಸೆ, ಅಲೋಪತಿ ಮತ್ತು ಆಯುರ್ವೇದ ಚಿಕಿತ್ಸೆ ಮಾಡಿಸುತ್ತಿದ್ದಾರೆ. ಇದರಲ್ಲಿ ಮಹಿಳೆಯರ ಪಾಲು ಜಾಸ್ತಿ. ಧ್ವನಿಯ ಮೂಲಕ ನಿಯಂತ್ರಿತವಾಗುವ ಈ ಸಾಧನವು ಕಾಲುಗಳ ಮೇಲೆ ಬೀಳುವ ದೇಹದ ಭಾರವನ್ನು ಶೇಕಡಾ 50%ರಷ್ಟು ಕಡಿಮೆ ಮಾಡುತ್ತದೆ. ಡಾ. ಸಚಿನ್ ಭಟ್ಟ ಹಾಗೂ ಪ್ರೊ. ಸುನಿಲ್ ಹಲ್ದನಕರ್ ತಯಾರಿಸಿದ ಮಣ್ಣಿನ ಬೇರಿಂಗ್ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿ ಅಳೆಯುವ ಸಾಧನಕ್ಕೆ ಕಳೆದ ಬಾರಿಯೂ ಕರ್ನಾಟಕ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ ವರ್ಷದ ಸಂಶೋಧನೆ ಪ್ರಶಸ್ತಿ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು. ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ಟ ಹಾಗೂ ಆಡಳಿತ ಮಂಡಳಿಯವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ.

error: