May 18, 2024

Bhavana Tv

Its Your Channel

ವರದ ಗ್ರಾಮೀಣ ಬ್ಯಾಂಕ್ ಕುಟುಂಬ ಮಿಲನ ೨೦೨೨

೧೯೮೪ ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದಿನ ಸಿಂಡಿಕೇಟ್ ಬ್ಯಾಂಕ್ ಪ್ರವರ್ತಿತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನಲ್ಲಿ ಒಂದಾದ ವರದ ಗ್ರಾಮೀಣ ಬ್ಯಾಂಕ್ ಕುಮುಟಾ ದಲ್ಲಿ ಪ್ರದಾನ ಕಛೇರಿ ಹೊಂದಿ ಇಡಿ ಜಿಲ್ಲೆಯ ಗ್ರಾಮೀಣ ಅಭಿವೃದ್ಧಿಯಲ್ಲಿ ಇತರ ಬ್ಯಾಂಕು ಗಳೊಂದಿಗೆ ಹೆಜ್ಜೇ ಹಾಕಿ ಜಿಲ್ಲೆಯ ಜನರ ಒಡನಾಡಿ ಬ್ಯಾಂಕ್ ಮತ್ತು ಸಿಬ್ಬಂದಿ ಗಳು ಜಿಲ್ಲೆಯ ಜನರ ಮನೆ ಮಂದಿಗಿoತ ಹತ್ತಿರವಾಗಿದ್ದರು ಎಂದು ಹೇಳಿದರೆ ಅತಿಶಯೋಕ್ತಿ ಅಗಲಾರದು. ೨೦೦೫ ರ ತನಕ ವರದ ಬ್ಯಾಂಕ್ ನಮ್ಮ ಬ್ಯಾಂಕ್, ವರದ ಸಿಬ್ಬಂದಿ ನಮ್ಮವರು ಎಂದು ಜಿಲ್ಲೆಯ ಮಂದಿ ನಮ್ಮೆಲ್ಲರೊಂದಿಗೆ ಬೆಸೆದು ಕೊಂಡಿದ್ದರು.
೨೦೦೫ ರಲ್ಲಿ ಕೇಂದ್ರ ಸರಕಾರದ ಆದೇಶ ದಂತೆ ಸಿಂಡಿಕೇಟ್ ಬ್ಯಾಂಕ್ ನ ನಾಲ್ಕು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಾದ ಬಿಜಾಪುರ ಗ್ರಾಮೀಣ ಬ್ಯಾಂಕ್, ಮಲಪ್ರಭಾ ಗ್ರಾಮೀಣ ಬ್ಯಾಂಕ್, ವರದ ಗ್ರಾಮೀಣ ಬ್ಯಾಂಕ್ ಮತ್ತು ನೇತ್ರಾವತಿ ಗ್ರಾಮೀಣ ಬ್ಯಾಂಕ್ ಗಳು ವೀಲಿನ ಗೊಂಡು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಎಂಬ ಹೆಸರಿನಿಂದ ದಾರವಾಡದಲ್ಲಿ ಪ್ರದಾನ ಕಛೇರಿ ಹೊಂದಿ ಕರ್ನಾಟಕದ ೯ ಜಿಲ್ಲೆ ಗಳಲ್ಲಿ ಬ್ಯಾಂಕಿನ ಸೇವೆ ಒದಗಿಸುತ್ತ ಬಂದಿರುವುದು ಹೆಮ್ಮೆಯ ವಿಷಯ.
ಈ ಹಿಂದಿನ ವರದ ಬ್ಯಾಂಕಿನ ಪ್ರದಾನ ಕಛೇರಿ ಈಗ ಕೆ ವಿ ಜಿ ಬ್ಯಾಂಕಿನ ಪ್ರಾದೇಶಿಕ ಕಛೇರಿ ಯಾಗಿದೆ. ಆದರೆ ಈಗಲೂ ಜಿಲ್ಲೆಯ ಬ್ಯಾಂಕಿನ ಗ್ರಾಹಕರ ಬಾಯಲ್ಲಿ ವರದ ಬ್ಯಾಂಕ್ ಎಂದೇ ಉಳಿದಿರುವುದು ನಮ್ಮೆಲ್ಲರ ಸೌಭಾಗ್ಯ. ೧೯೮೫ ರಿಂದ ೨೦೦೫ ರ ತನಕ ಈ ನಮ್ಮ ವರದ ಬ್ಯಾಂಕಿನಲಿ ಸೇವೆ ಸಲ್ಲಿಸಿದ್ದ ಸಿಬ್ಬಂದಿ ಗಳು ತಮ್ಮ ಸಕುಟುಂಬ ಸಮೇತ ಇದೆ ಡಿಸೆಂಬರ್ ೨೪ ರಂದು ಶಿರಸಿ ಯಲ್ಲಿ ಇಬ್ಬನಿ ರೆಸಾರ್ಟ್ ನಲ್ಲಿ ಮೊದಲ ಬಾರಿ ಎಲ್ಲ ತಮ್ಮ ಹಳೆ ಗೆಳೆಯರೊಂದಿಗೆ ಸೇರಿ ಹಳೆ ನೆನಪು, ಹೊಸ ಕನಸು ಹಂಚಿ ಕೊಂಡು, ಎಲ್ಲ ಬೆರೆತು ಆಟ ಆಡಿ, ತಿಂದುAಡು ನಕ್ಕು ನಲಿದು ಸಂಭ್ರಮಿಸಿ ತಮ್ಮ ನೆನಪಿನ ಬುತ್ತಿ ಬಿಚ್ಚಿ ಕೊಳ್ಳುವ ಅವಕಾಶ ಮಾಡಿ ಕೊಂಡಿದ್ದಾರೆ. ಈಗಾಗಲೇ ೧೫೦ ಮಿಕ್ಕಿ ಸದಸ್ಯರು ನೋಂದಣಿ ಯಾಗಿ ವರದ ಕುಟುಂಬ ಮಿಲನ ಯಶಸ್ವೀಗೊಳಿಸಲು ಸಿದ್ದರಾಗಿದ್ದಾರೆ ಎಂದು ಕಾರ್ಯಕ್ರಮದ ಸಂಯೋಜಕರಲ್ಲಿ ಒಬ್ಬರಾದ ಶ್ರೀಕಾಂತ ಹೊಳ್ಳರು ಮಾಹಿತಿ ನೀಡಿದ್ದಾರೆ.

error: