May 18, 2024

Bhavana Tv

Its Your Channel

ಪುರಾಣ ಪ್ರಸಿದ್ಧ ಇಡಗುಂಜಿ ಕ್ಷೇತ್ರದಲ್ಲಿ ಈ ವರ್ಷದ ಗಣೇಶ ಚತುರ್ಥಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.

ಹೊನ್ನಾವರ (ಉ.ಕ): ಸಿದ್ದಿಕ್ಷೇತ್ರ , ವಾಲಿಖಿಲ್ಯ ಮುನಿಗಳು ಪ್ರತಿಷ್ಠಾಪಿಸಿದ ವಿನಾಯಕನನ್ನು ಚೌತಿಯಂದು ಪ್ರತಿ ವರ್ಷ ೬೦ ಸಾವಿರಕ್ಕೂ ಹೆಚ್ಚಿನ ಭಕ್ತರು ದರ್ಶನ ಪಡೆಯುತ್ತಿದ್ದರು.


ಆದರೆ ಇಂದು ಹೊನ್ನಾವರ ತಾಲೂಕು ಹೊರತುಪಡಿಸಿ ಹೆಚ್ಚಿನ ಭಕ್ತರು ಇಡಗುಂಜಿ ಕ್ಷೇತ್ರಕ್ಕೆ ದರ್ಶನಕ್ಕೆ ಆಗಮಿಸಿರಲಿಲ್ಲ. ವರ್ಷಕ್ಕೂ ಜಿಲ್ಲೆಯಾದ್ಯಂತ ಭಕ್ತರು ಮುಂಜಾನೆಯಿoದಲೇ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದರು. ಘಟ್ಟದ ಮೇಲಿನ ಭಕ್ತರು ಕೂಡ ಆಗಮಿಸುತ್ತಿದ್ದು. ಈ ವರ್ಷ ಭಕ್ತರ ಸಂಖ್ಯೆ ವಿರಳವಾಗಿತ್ತು.
ಸುಪ್ರೀಂಕೋರ್ಟ್ ರಿಸೀವರ್ ಮಾರ್ಗಸೂಚಿಯಂತೆ ಬೆಳಿಗ್ಗೆ ೫ ಗಂಟೆಯಿAದ ಮಧ್ಯಾಹ್ನ ಒಂದು ಗಂಟೆವರೆಗೆ ಹಾಗೂ ಸಂಜೆ ೪ ಗಂಟೆಯಿoದ ರಾತ್ರಿ ೮ ಗಂಟೆಯವರೆಗೆ ಭಕ್ತರಿಗೆ ಸಾಮಾಜಿಕ ನಂತರ ಕಾಯ್ದು ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು ಭಕ್ತರಿಗೆ ಶ್ರೀ ಕ್ಷೇತ್ರದಲ್ಲಿ ಗಣಹೋಮ, ಮಂಗಳಾರತಿ ,ಸತ್ಯಗಣಪತಿ ವ್ರತ ,ಅಭಿಷೇಕ ಹಾಗೂ ಪಂಚಕಜ್ಜಾಯ ಸೇವೆಗಳು ಒಳಗೊಂಡoತೆ ಯಾವುದೇ ಸೇವೆಗೆ ಅವಕಾಶವಿರಲಿಲ್ಲ. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಕ್ಷೇತ್ರದಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪರಂಪರಾಗತವಾಗಿ ನಡೆದುಬಂದ ಎಲ್ಲಾ ಸಂಪ್ರದಾಯಗಳು ನಡೆದವು. ೩೬೫ ತೆಂಗಿನಕಾಯಿಗಳನ್ನು ಒಡೆದು ವಿಶೇಷ ನೈವೇದ್ಯ ಮಾಡಲಾಗಿತ್ತು. ಗಣಹೋಮ ಹಾಗೂ ಇತರೆ ಪೂಜಾ ಕಾರ್ಯಕ್ರಮಗಳು ನಡೆದವು .

error: