May 19, 2024

Bhavana Tv

Its Your Channel

ಕೊವಿಡ್‌ ಸೋಂಕಿತೆ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಭಟ್ಕಳ ತಾಲ್ಲೂಕು ಆಸ್ಪತ್ರೆ ವೈದ್ಯರ ತಂಡ

ಭಟ್ಕಳ ; ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಕೊವಿಡ್‌ ಸೋಂಕಿತ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ತಾಯಿ ಮತ್ತು ಹೆಣ್ಣು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ತಾಲೂಕಿನ ಸ್ಥಳೀಯ ನಿವಾಸಿಯಾಗಿರುವ ಗರ್ಭಿಣಿ ಮಹಿಳೆಯೋರ್ವಳು ಕೊವಿಡ್‌ ಸೋಂಕಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಶನಿವಾರ ರಾತ್ರಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದೆ. ಇದು ಕೋವಿಡ್ ಸೋಂಕಿತ ಗರ್ಭಿಣಿ ಮಹಿಳೆಗೆ ನಡೆದ ಮೊದಲ‌ ಶಸ್ತ್ರ ಚಿಕಿತ್ಸೆಯಾಗಿದೆ. ಬಾಣಂತಿ ಮತ್ತು ಹೆಣ್ಣು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಡಾ. ಶಮ್ಸ್‌ ನೂರ್‌ ಅವರು ಶಸ್ತ್ರಚಿಕಿತ್ಸೆ ನಡೆಸಿದ್ದು, ಡಾ. ಸವಿತಾ ಕಾಮತ್‌ ಅನಸ್ತೇಷಿಯಾ ನೀಡಿದ್ದಾರೆ. ಈ ವೇಳೆ ಸ್ಟಾಫ್‌ ನರ್ಸ್‌ ಆದ ರೇಖಾ ಶೆಟ್ಟಿ, ಭಾರತಿ ಇನ್ನಿತರರು ಉಪಸ್ಥಿತರಿದ್ದರು

error: