May 20, 2024

Bhavana Tv

Its Your Channel

ಬೆಂಗಳೂರು ಬಿ.ಎನ್.ಬಿ ಸೆಕ್ಯೂರಿಟಿ ಮತ್ತು ಆಟೋಮೇಶನ್ ಸಲ್ಯೂಷನ್ ಕಂಪನಿಯಿAದ ಕೋವೀಡ್-೧೯ ಸೋಂಕಿತರ ಅನುಕೂಲಕ್ಕಾಗಿ ಸುಮಾರು ೪.೫೦ ಲಕ್ಷ ರೂಗಳಿಗೆ ಮೀರಿದ ಸಾಮಾಗ್ರಿ ನೀಡಿಕೆ

ಹೊನ್ನಾವರ: ಬೆಂಗಳೂರು ಬಿ.ಎನ್.ಬಿ ಸೆಕ್ಯೂರಿಟಿ ಮತ್ತು ಆಟೋಮೇಶನ್ ಸಲ್ಯೂಷನ್ ಕಂಪನಿಯು ತಾಲೂಕಿನ ಕೋವೀಡ್-೧೯ ಸೋಂಕಿತರ ಅನುಕೂಲಕ್ಕಾಗಿ ಸುಮಾರು ೪.೫೦ ಲಕ್ಷ ರೂಗಳಿಗೆ ಮೀರಿದ ಸಾಮಾಗ್ರಿಗಳನ್ನು ತಾಲೂಕು ವೈದ್ಯಾಧಿಕಾರಿ ಡಾ|| ಉಷಾ ಹಾಸ್ಯಗಾರ ಹಾಗೂ ಡಾ|| ರಾಜೇಶ ಕಿಣಿ ಯವರಿಗೆ ಮಂಗಳವಾರ ಹಸ್ತಾಂತರಿಸಿದರು.
ಸ್ಥಳೀಯ ಬೆರೋಳ್ಳಿ ಗ್ರಾಮದ ತೋಟದಮೂಲೆಯಾವರಾದ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಆನಂದ ವಿ ಭಟ್ಟ ಅವರ ಸೂಚನೆ ಅನ್ವಯ ವಕೀಲ ಎಂ.ಎಸ್.ಭಟ್ಟ ಕಟ್ಟಿಗೆ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು. ಆಕ್ಸಿಜನ್ ಕಾನ್ಸನ್‌ಂಟ್ರೇಟರ್, ಫಲ್ಸ ಒಕ್ಸಿ ಮೀಟರ್, ವೆÃಪರ್ ಇನ್‌ಹೆಲರ್, ಡಿಜಿಟಲ್ ತರ್ಮೋಮೀಟರ್, ಎನ್ ೯೫ ಮಾಸ್ಕ, ೩ ಹೊದಿಕೆಯ ಸರ್ಜಿಕಲ್ ಮಾಸ್ಕ, ಮೆಡಿಸಿನ್ ಕಿಟ್‌ಗಳನ್ನು ಹೊಂದಿದೆ. ಅವಶ್ಯವಿರುವ ಎಲ್ಲಾ ಸೊಂಕಿತರಿಗೂ ಉಪಯೋಗಕ್ಕೆ ಬರುವ ರೀತಿಯಲ್ಲಿ ಒಕ್ಸಿಮೀಟರ್, ತರ್ಮೋಮೀಟರ್, ವÉÃಪರ್ ಇನ್‌ಹೇಲರ್ ಬಳಕೆ ಆಗಲಿ ಎಂದು ಎಂ.ಎಸ್.ಭಟ್ಟ್ ಕಟ್ಟಿಗೆ ಕೋರಿದರು.
ಆಸ್ಪತ್ರೆಯ ಪರವಾಗಿ ಡಾ|| ಉಷಾ ಹಾಸ್ಯಗಾರ ಹಾಗೂ ಡಾ|| ರಾಜೇಶ ಕಿಣಿರವರು ಸಾಮಾಗ್ರಿ ಸ್ವೀಕರಿಸಿ ಬಹು ಉಪಯುಕ್ತ ಬೆಲೆಬಾಳುವ ವಸ್ತುಗಳಾಗಿದ್ದು ದಾನಿಗಳ ಇಚ್ಛೆಯಂತೆ ಅವಶ್ಯಕ ಸೊಂಕಿತರಿಗೆ ಆಶಾ ಕಾರ್ಯಕರ್ತೆಯರ ಮೂಲಕ ನೀಡಲಾಗುತ್ತದೆ ಎಂದರು.

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: