April 26, 2024

Bhavana Tv

Its Your Channel

ಹಟ್ಟಿಕೇರಿ ಟೋಲ್ ಪ್ಲಾಝಾ ಹೆದ್ದಾರಿ ನೆಕ್ಸ್ಟ್ ಮಿನಿ ಉದ್ಘಾಟನೆ.

ಹೆದ್ದಾರಿಯಲ್ಲಿ ಫಿಡಿಂಗ್ ಸೆಂಟರ್ ಆರಂಭಕ್ಕೆ ಕ್ರಮ: ಜಿಲ್ಲಾಧಿಕಾರಿ ಮುಹಿಲನ್

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ ವಿಭಾಗ ಮಂಗಳೂರು ಇದರ ವತಿಯಿಂದ ಹಟ್ಟಿಕೇರಿ ಬಳಿ ನೆಕ್ಸ್ಟ್ ಮಿನಿ ಮಳಿಗೆಯನ್ನು ಕಾರವಾರ ಜಿಲ್ಲಾಧಿಕಾರಿ ಮುಹಿಲನ್ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಜನಜೀವನದ ಭಾಗವಾಗಿದೆ.ಸುಗಮ ಸಂಚಾರದ ಜೊತೆಗೆ ಪ್ರಯಾಣಿಕರಿಗೆ ಸಮರ್ಪಕ ಸೇವೆ ದೊರೆಯಬೇಕೆನ್ನುವುದು ಸರಕಾರದ ಚಿಂತನೆ.ಹೀಗಾಗಿ ಹೆದ್ದಾರಿ ಯಲ್ಲಿ ಪ್ರಯಾಣಿಕರಿಗೆ ಪೂರಕವಾದ ವಾತಾವರಣ ಕಲ್ಪಿಸಲಾಗುತ್ತಿದೆ.ನೆಕ್ಟ್ಟ್ ಮಿನಿ ಮೂಲಕ ಗುಣಮಟ್ಟದ ಆಹಾರ ಮತ್ತು ಸೇವೆ ದೊರಕಿಸುವ ಉತ್ತಮ ಪ್ರಯತ್ನವಾಗಿದೆ.ಇದರ ಜೊತೆಗೆ ಹೆದ್ದಾರಿಯಲ್ಲಿ ಪ್ರಯಾಣಿಸುವ ತಾಯಂದರಿಗೆ ಮಕ್ಕಳಿಗೆ ಎದೆ ಹಾಲು ನೀಡಲು ಪ್ರತಿ ಟೋಲ್ ಬಳಿ ವ್ಯವಸ್ಥೆ ಕಲ್ಪಿಸುವ ಫಿಡಿಂಗ್ ಸೆಂಟರ್ ಆರಂಭೀಸುವ ಬಗ್ಗೆ ಇಲಾಖೆ ಶೀಘ್ರ ಅನುಷ್ಡಾನ ಮಾಡಬೇಕು ಎಂದರು.

ರಾ.ಹೆ.ಪ್ರೊಜೆಕ್ಟ್ ಡೈರೆಕ್ಟರ್ ಶಿಶುಮೋಹನ್ ಮಾತನಾಡಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಫೀಡಿಂಗ್ ಸೆಂಟರ್ ಆರಂಭಿಸಲು ಐಆರ್ ಬಿ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ. ನೆಕ್ಟ್ಟ್ ಮಿನಿ ಹೆದ್ದಾರಿ ವಿಭಾಗದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ.ಪ್ರಯಾಣಿಕರ ಸುಗಮ ಮತ್ತು ಕ್ಷೇಮದಾಯಕ ಪ್ರಯಾಣ ಇಲಾಖೆ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಐಆರ್ ಬಿ ಸಿ.ಜಿ.ಎಮ್ ಮೊಹನದಾಸ್ ,ಜೊ.ಎಮ್ ವಿವೇಕ್ ಗರ್ಡಿಕರ್,ಪ್ರಫುಲ್ ಕಾಕಡೆ,ಟೋಲ್ ಮೆನೆಜರ್ ನಾಯರ್ ಮುಂತಾದವರು ಹಾಜರಿದ್ದರು.
ಅರುಣ್ ಕುಮಾರ ಶಿರೂರು ಕಾರ್ಯಕ್ರಮ ನಿರೂಪಿಸಿ ಗುರು ಮಂಗಳೂರು ವಂದಿಸಿದರು.

error: