May 18, 2024

Bhavana Tv

Its Your Channel

ಕರಿಕಲ್ ಧ್ಯಾನ ಮಂದಿರದ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ

ಭಟ್ಕಳ: ಪರಿಸರದ ಉಳಿವಿಗಾಗಿ ನಾವು ನಮ್ಮ ಮಕ್ಕಳಿಗೆ ಧರ್ಮ ಸಂಸ್ಕಾರದೊAದಿಗೆ ಪರಿಸರದ ರಕ್ಷಣೆಯ ಬಗ್ಗೆಯೂ ತಿಳಿ ಹೇಳಬೇಕಾದ ಅವಶ್ಯಕತೆ ಇದೆ ಎಂದು ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ನುಡಿದರು.

ಅವರು ಭಟ್ಕಳ ಕರಿಕಲ್ ನಲ್ಲಿರುವ ಶ್ರೀರಾಮ ಕ್ಷೇತ್ರದ ಧ್ಯಾನ ಮಂದಿರದ ಆವರಣದಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.
ಇಂದು ವಿಶ್ವದೆಲ್ಲಡೆ ಪರಿಸರ ನಾಶದಿಂದ ಅನೇಕ ನೈಸರ್ಗಿಕ ಅನಾಹುತಗಳು ನಡೆಯುತ್ತಿದೆ.ಭೂಮಿಯ ಉಷ್ಣಾಂಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆಲ್ಲ ಪರಿಹಾರವಾಗಿ ಪ್ರತಿಯೊಬ್ಬರು ನಮ್ಮ ಸುತ್ತಮುತ್ತ ಹೆಚ್ಚು ಗಿಡ ಮರಗಳನ್ನು ಬೆಳಸುವುದರ ಮೂಲಕ ಈ ಭರತ ಭೂಮಿಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಸಮುದ್ರ ತಟದ ಅಂಚಿನಲ್ಲಿ ಹೊನ್ನೆ ಗಿಡ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.ಪ್ರಮುಖರಾದ ಎಸ್.ಎಂ.ನಾಯ್ಕ, ವಾಮನ ನಾಯ್ಕ, ಗೋವಿಂದ ನಾಯ್ಕ, ಶ್ರೀಧರ ನಾಯ್ಕ, ಕೆ.ಆರ್. ನಾಯ್ಕ,ಗಣಪತಿ ನಾಯ್ಕ ಮತ್ತಿತರರು ಇದ್ದರು

error: