May 15, 2024

Bhavana Tv

Its Your Channel

ಹೆಬಳೆ ಪಂಚಾಯತ ಅಧ್ಯಕ್ಷ, ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ ಸದಸ್ಯರು, ತಮ್ಮ ಆರೋಪ ಸಾಬೀತು ಮಾಡಲು ವಿಫಲ

ಟ್ಕಳ: ಹೆಬಳೆ ಪಂಚಾಯತ ಕೆಲ ಸದಸ್ಯರು ಅಧ್ಯಕ್ಷ, ಅಧಿಕಾರಿಗಳ ಮೇಲೆ ಭ್ರಷ್ಟಾಚಾರ, ಅವ್ಯವಹಾರದ ಆರೋಪದ ಪತ್ರಿಕಾ ಹೇಳಿಕೆ ನೀಡಿದಂತೆ ವಿಶೇಷ ಸಭೆ ನಡೆಸಲು ನೀಡಿದ ಅರ್ಜಿಯನ್ವಯ ಕರೆದ ಸಭೆಯಲ್ಲಿ ಅವರು ಮಾಡಿದ ಆರೋಪದಲ್ಲಿ ಒಂದನ್ನು ಸಹ ಸಾಬೀತು ಮಾಡಲು ಸದಸ್ಯರು ವಿಫಲರಾಗಿದ್ದಾರೆ ಎಂದು ಹೆಬಳೆ ಗ್ರಾಮ ಪಂಚಾಯತಿ ಸದಸ್ಯ ಸುಬ್ರಾಯ ದೇವಾಡಿಗ ಪ್ರತಿಕ್ರಿಯಿಸಿದರು.

ಅವರು ಭಟ್ಕಳ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಪಂಚಾಯತನಲ್ಲಿ ೧೧ ಲಕ್ಷ ಅವ್ಯವಹಾರ ನಡೆದಿರುವ ಬಗ್ಗೆ ಆರೋಪಿಸಿದಂತೆ ಸಭೆಯಲ್ಲಿ ಅವಕಾಶ ನೀಡಲಾಗಿದ್ದು, ಆರೋಪ ಮಾಡಿದ ಸದಸ್ಯರು ತಮ್ಮ ಆರೋಪ ಸಾಬೀತು ಮಾಡಲು ವಿಫಲರಾಗಿದ್ದಾರೆ. ಕೇವಲ ಸಭೆಯಲ್ಲಿ ೧೫ ಸಾವಿರ ಕಾಮಗಾರಿಯ ಬಗ್ಗೆ ಚರ್ಚೆ ನಡೆದಿದೆ ಹೊರತು ಸತತ ಮೂರು ಗಂಟೆಯ ಸಭೆಯಲ್ಲಿ ಆರೋಪದಲ್ಲಿ ಹುರುಳಿಲ್ಲ ಎಂಬುದು ತಿಳಿದು ಬಂದಿದೆ ಎಂದರು.
ಪAಚಾಯತ ನಿಧಿ- ೨ ದಲ್ಲಿ ೧೩ ಲಕ್ಷದಷ್ಟು ವೆಚ್ಚ ಈ ಆಡಳಿತದಲ್ಲಿ ಆಗಿದೆ. ಅದರಲ್ಲಿ ೨ ಲಕ್ಷಕ್ಕಿಂತ ಹೆಚ್ಚು ಆಡಳಿತಾತ್ಮಕ ವೆಚ್ಚಗಳಾಗಿದ್ದು, ಅದು ಸಹ ಪಂಪ್ ಸೆಟ್ ರಿಪೇರಿ, ಪೈಪ ಲೈನ್ ರಿಪೇರಿ, ವಿದ್ಯುತ್ ಸಾಮಗ್ರಿ ಖರೀದಿ ಆಗಿದೆ. ರೂ. ೪,೭೨,೨೬೦ ಹಣವು ಸಿಬ್ಬಂದಿ ಸಂಬಳ (ಅರೆಕಾಲಿಕ ಸಿಬ್ಬಂದಿ, ವಾಟರ ಮೆನ್ ಗಳಿಗೆ) ನೀಡಿದಂತಹ ಸಂಬಳದ ವೆಚ್ಚ ಪಾರದರ್ಶಕವಾಗಿದೆ. ಇನ್ನು ಆರೋಪ ಮಾಡಿದ ಸದಸ್ಯರ ವಾರ್ಡಗಳಲ್ಲಿ ಕಸ ವಿಲೇವಾರಿಗೆ ರೂ. ೩,೦೧,೬೫೦ ವೆಚ್ಚ ಆಗಿದೆ ಎಂದರು.
ಸಾಮಾನ್ಯವಾಗಿ ಪಂಚಾಯತನಲ್ಲಿ ೫-೧೦ ಸಾವಿರ ರೂ.ಗಳನ್ನು ಪಂಚಾಯತ ಅಧ್ಯಕ್ಷರು, ಪಿಡಿಓಗಳು ತುರ್ತು ಸಂದರ್ಭದಲ್ಲಿ ಹಣ ಬಳಕೆ ಮಾಡಲು ಅವಕಾಶವಿದ್ದು ಅವನ್ನು ಈ ಬಾರಿಯ ತೌಕೆ ಚಂಡಮಾರುತದಿAದ ಹಾನಿಗೊಳಗಾದ ವಾರ್ಡಗಳಲ್ಲಿ ಇದರ ಬಳಕೆ ಮಾಡಿದ್ದೇವೆ. ಈ ಬಗ್ಗೆ ಎಲ್ಲಾ ಸೂಕ್ತ ದಾಖಲೆ ಸಹ ನಮ್ಮಲ್ಲಿದ್ದು, ಅವರಲ್ಲಿ ದಾಖಲೆ ಇಲ್ಲದೇ ಬೇಕಾಬಿಟ್ಟಿ ಆರೋಪ ಮಾಡಿದ್ದಾರೆ ಎಂದರು.
ಈಗಾಗಲೇ ೪-೫ ಬಾರಿ ಪಂಚಾಯತ ಸದಸ್ಯರಾದ ಅನುಭವವಿರುವರೇ ಈ ಹುರುಳಿಲ್ಲದ ಆರೋಪ ಮಾಡಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಎಂಬುದು ಸಭೆಯಲ್ಲಿ ಕಂಡು ಬಂದಿದೆ. ಕಾರಣ ಈಗಿನ ಆಡಳಿತದಲ್ಲಿ ಜನರ ಸಮಸ್ಯೆಗೆ ತಕ್ಷಣಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇವೆ ಇದನ್ನು ಸಹಿಸಿಕೊಳ್ಳಲಾಗದೇ ಈ ರೀತಿ ಕೆಲ ಸದಸ್ಯರು ಮಾಡುತ್ತಿದ್ದಾರೆ ಎಂದು ಖಾರವಾಗಿ ನುಡಿದರು.

ಪಂಚಾಯತನಲ್ಲಿ ಸದಸ್ಯರ ಮಧ್ಯೆಯೇ ಹೊಂದಾಣಿಕೆ ಕೊರತೆ ಇದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಇತ್ತೀಚಿನ ದಿನದ ಬೆಳವಣಿಗೆಯಲ್ಲಿ ಕೆಲ ಸದಸ್ಯರ ಆರೋಪವನ್ನು ಗಮನಿಸಿದಾಗ ಹೌದು ಎಂಬುದು ಖಾತರಿ ಅನ್ನಿಸುತ್ತಿದೆ. ಕಳೆದ ಅವಧಿಯಲ್ಲಿ ಅವರ ನೇತ್ರತ್ವದ ಆಡಳಿತದ ವೇಳೆ ನಾವು ಅವರಿಗೆ ಅಭಿವೃದ್ಧಿ ವಿಚಾರದಲ್ಲಿ ಒತ್ತಡ ಆರೋಪ ಮಾಡಿದ್ದೇವೆ ಹೊರತು ಆಡಳಿತಕ್ಕೆ ಸಮಸ್ಯೆಗಳನ್ನು ನೀಡಿಲ್ಲ. ಅವರ ಅವದಿಯಲ್ಲಿನ ಪಿಡಿಓ, ಕಾರ್ಯದರ್ಶಿಗಳೇ ಈಗಲು ಇದ್ದು ಬೇರೆಯವರು ನೇಮಕವಾಗಿಲ್ಲ. ಮುಖ್ಯವಾಗಿ ಎಲ್ಲಾ ಪಂಚಾಯತ ಖರ್ಚು ವೆಚ್ಚಗಳ ದಾಖಲೆಗಳನ್ನು ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರಿಗೆ ನೀಡಲಾಗುತ್ತದೆ ಎಂದು ಸುಬ್ರಾಯ ದೇವಾಡಿಗ ಉತ್ತರಿಸಿದರು.
ಇನ್ನು ಜಾತಿ ನಿಂದನೆ ಪ್ರಕರಣದಲ್ಲಿ ಹೊಡೆದಾಟ ನಡೆಸಿಕೊಂಡ ಮೂವರ ಪ್ರಕರಣಕ್ಕೂ ಹೆಬಳೆ ಪಂಚಾಯತ ಆಡಳಿತಕ್ಕೂ ಯಾವುದೇ ಸಂಬAಧವಿಲ್ಲ. ಅದು ಅವರ ವೈಯಕ್ತಿಕ ಗಲಾಟೆಯಾಗಿದೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ಇದ್ದು ಅದರ ತನಿಖೆಯಿಂದ ಆರೋಪಿಗಳು ತಿಳಿದು ಬರಲಿದೆ ಎಂದು ಸದಸ್ಯ ಸುಬ್ರಾಯ ದೇವಾಡಿಗ ಸ್ಪಷ್ಟಪಡಿಸಿದರು.

error: